ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದಲ್ಲಿ ಸಂಭ್ರಮದ ವಾತಾವರಣ, ಹೂಡಿಕೆ ಹಣ ಕೈ ಸೇರುವುದು

Nithya Bhavishya
Published on

ಮೇಷ: ನಿಮ್ಮಿಂದ ನೇರ ನಿಷ್ಠುರ ನಡವಳಿಕೆಯ ಅಗತ್ಯವಿದೆ. ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಸ್ಥಗಿತಗೊಂಡ ವ್ಯವಹಾರ ಆರಂಭ. ಶುಭಸಂಖ್ಯೆ: 6

ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಬದಲಾವಣೆ. ಸಂಗಾತಿಯ ಆರೋಗ್ಯಚೇತರಿಕೆ. ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯಿಂದ ಸಹಾಯ. ಶುಭಸಂಖ್ಯೆ:1

ಮಿಥುನ: ರೇಷ್ಮೆ ಕೃಷಿಯಲ್ಲಿ ಅಧಿಕ ಇಳುವರಿ ಮತ್ತು ಲಾಭ. ಆರ್ಥಿಕ ಉಳಿತಾಯದಲ್ಲಿ ಹಿನ್ನಡೆ. ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 6

ಕಟಕ: ಮನೆ ಕಟ್ಟುವ ಯೋಜನೆ ಕಾರ್ಯಗತ. ಸ್ತ್ರೀಯರಿಗೆ ವಸ್ತ್ರ, ಆಭರಣ ಲಾಭ. ಎಲೆಕ್ಟ್ರಾನಿಕ್ಸ್ ಅಂಗಡಿಯವರಿಗೆ ಆದಾಯ ಹೆಚ್ಚಳ. ಶುಭಸಂಖ್ಯೆ:2

ಸಿಂಹ: ಬಾಕಿ ಕೈಸೇರುವುದು. ಮಧುಮೇಹ ರೋಗಿಗಳಿಗೆ ನಿರಾಳ. ಗೃಹೋಪಯೋಗಿ ಸಾಮಗ್ರಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಶುಭಸಂಖ್ಯೆ:7

ಕನ್ಯಾ: ಕಾರ್ಯಸಾಧನೆಗಾಗಿ ವಿದೇಶ ಪ್ರವಾಸ. ಸ್ನೇಹಿತರಿಂದ ನೈತಿಕ ಸಹಾಯ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಚಿಕ್ಕ ಪುಟ್ಟ ವರ್ತಕರಿಗೆ ಧನಲಾಭ ಶುಭಸಂಖ್ಯೆ: 6

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳಿಂದ ಸಹಾಯ. ಗಣ್ಯ ವ್ಯಕ್ತಿಗಳ ಭೇಟಿ. ಆಧ್ಯಾತ್ಮಿಕ ಸಾಧನೆಯಿಂದ ತೃಪ್ತಿ ದೊರೆಯಲಿದೆ.ಶುಭಸಂಖ್ಯೆ:1

ವೃಶ್ಚಿಕ: ಶತ್ರುಗಳಿಂದಲೂ ಸಹಾಯ ಸಿಗಲಿದೆ. ಸ್ತ್ರೀಯರಿಗೆ ಕುಟುಂಬದಲ್ಲಿ ತಾಳ್ಮೆ ಅಗತ್ಯ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪ. ಶುಭಸಂಖ್ಯೆ: 4

ಧನುಸ್ಸು: ಬ್ಯೂಟಿ ಪಾರ್ಲರ್ ನಡೆಸುವವರಿಗೆ ಭಾರಿ ಲಾಭ. ರಾಜಕೀಯ ರಂಗದಲ್ಲಿ ಅಧಿಕಾರಪ್ರಾಪ್ತಿ. ಸಜ್ಜನರಿಗೆ ಸಹಾಯ ಮಾಡುತ್ತಿರಿ. ಶುಭಸಂಖ್ಯೆ:9

ಮಕರ: ಸ್ನೇಹಿತರೊಂದಿಗೆ ಔತಣಕೂಟಕ್ಕೆ ಅಧಿಕ ಖರ್ಚು. ಆತ್ಮೀಯ ಸ್ನೇಹಿತನ ಆರೋಗ್ಯದಲ್ಲಿ ಚೇತರಿಕೆ. ಕಾನೂನು ವಿದ್ಯಾರ್ಥಿಗಳಿಗೆ ಮುನ್ನಡೆ. ಶುಭಸಂಖ್ಯೆ: 1

ಕುಂಭ:  ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಹೂಡಿಕೆ ಹಣ ಕೈ ಸೇರುವುದು. ಕಲಾವಿದರ ಪ್ರತಿಭೆಗೆ ಗೌರವ. ಷೇರಿನಿಂದ ಲಾಭ. ಶುಭಸಂಖ್ಯೆ: 2

ಮೀನ: ಔಷಧ ವ್ಯಾಪಾರಿಗಳಿಗೆ ಅಭಿವೃದ್ಧಿ. ಆಯುರ್ವೆದ ವೈದ್ಯರಿಗೆ ಕಾರ್ಯದ ಒತ್ತಡ. ನೆನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್ ಆರಂಭ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net