ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದೈನಂದಿನ ಕೆಲಸಗಳಲ್ಲಿ ಯಶಸ್ಸು

Nithya Bhavishya
Published on

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ. ಕುಟುಂಬದಲ್ಲಿ ಶಾಂತಿ, ಸಮಾಧಾನ. ಆದಾಯಕ್ಕಿಂತ ಖರ್ಚು ಹೆಚ್ಚಾಗದಿರಲಿ. ಶುಭಸಂಖ್ಯೆ: 5

ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ಮಹಿಳೆಯರು ಹೆಚ್ಚು ಧೈರ್ಯದಿಂದಿರುವಿರಿ. ಅನವಶ್ಯಕ ಖರ್ಚು ಬೇಡ. ಶುಭಸಂಖ್ಯೆ: 2

ಮಿಥುನ: ಉನ್ನತ ಅಧಿಕಾರ ದೊರೆಯುತ್ತದೆ. ಮಾತಿನಿಂದ ಸಮಸ್ಯೆಗೆ ಸಿಲುಕಬಹುದು, ಎಚ್ಚರ ವಹಿಸಿ. ಮಕ್ಕಳು ಕೀರ್ತಿ ಗಳಿಸಲಿದ್ದಾರೆ. ಶುಭಸಂಖ್ಯೆ: 7

ಕಟಕ: ಕಮಿಷನ್ ವ್ಯವಹಾರ ಅಬಾಧಿತವಾಗಿರಲಿದೆ. ತಾಂತ್ರಿಕ ಪರಿಣಿತರಿಗೆ ಉತ್ತಮ ದಿನ. ರಾಜಕಾರಣಿಗಳಿಗೆ ಪದವಿ ಕೈ ತಪ್ಪಲಿದೆ. ಶುಭಸಂಖ್ಯೆ: 2

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ವ್ಯವಹಾರದಲ್ಲಿ ಎಚ್ಚರವಹಿಸಿ. ಶುಭಸಂಖ್ಯೆ: 7

ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯವಹಾರದಲ್ಲಿ ವಿಶೇಷ ಲಾಭದಾಯಕ ದಿನ. ಮನೋವೈದ್ಯರಿಗೆ ಒತ್ತಡ. ಶುಭಸಂಖ್ಯೆ:9

ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ. ಸ್ವಂತ ಉದ್ಯೋಗದಲ್ಲಿ ತೊಡಗಿರುವ ಮಹಿಳೆಯರಿಗೆ ಮಾನಸಿಕ ಒತ್ತಡ, ಆಹಾರದ ಬಗ್ಗೆ ಎಚ್ಚರ. ಶುಭಸಂಖ್ಯೆ: 2

ವೃಶ್ಚಿಕ: ಮಹಿಳೆಯರಿಗೆ ಆಭರಣ, ವಸ್ತ್ರ ಲಾಭ. ಟೆಕ್ನಾಲಜಿ ಪರಿಣಿತರಿಗೆ ಲಾಭದಾಯಕ ದಿವಸ. ರಾಜಕಾರಣಿಗಳಿಗೆ ಪ್ರತಿಸ್ಪರ್ಧಿಗಳ ಕಿರಿಕಿರಿ. ಶುಭಸಂಖ್ಯೆ: 2

ಧನುಸ್ಸು: ಹೆಚ್ಚು ಪ್ರಯತ್ನವಿದ್ದರೆ ಆದಾಯ. ಸಮಾಜದಲ್ಲಿ ಗೌರವ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 7

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಗಾರರಿಗೆೆ ಉತ್ತಮ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ: 3

ಕುಂಭ:  ದೂರ ಪ್ರಯಾಣ ಮಾಡಬೇಕಾಗುವುದು. ಯುವಕರಿಗೆ ಐಟಿ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ. ದೈನಂದಿನ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 3

ಮೀನ: ಉಪನ್ಯಾಸಕರಿಗೆ ವರ್ಗಾವಣೆ ಸಾಧ್ಯತೆ. ಸಾಲಗಾರರಿಂದ ತೊಂದರೆ, ಆಸ್ತಿ ಖರೀದಿಯಲ್ಲಿ ಮೋಸ. ಔಷಧಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net