

ಮೇಷ: ವಾಹನ ರಿಪೇರಿ ಮಾಡುವವರಿಗೆ ಲಾಭ. ವ್ಯವಹಾರ ದಲ್ಲಿ ಹಲವಾರು ಒತ್ತಡಗಳು. ಹೂಡಿಕೆದಾರರಿಗೆ ಇದು ಸೂಕ್ತ ಸಮಯವಲ್ಲ. ಶುಭಸಂಖ್ಯೆ:5
ವೃಷಭ:ನಿಮ್ಮ ಪ್ರತಿಭೆಗೆ ಪ್ರಶಂಸೆ ಸಿಗಲಿದೆ. ಭಾವನೆಗಳ ನಿಯಂತ್ರಣದಲ್ಲಿ ವಿಫಲರಾಗುವಿರಿ. ಆರೋಗ್ಯದಲ್ಲಿ ಶಿಸ್ತುಬದ್ಧತೆ ಕಾಪಾಡಿಕೊಳ್ಳಿ. ಶುಭಸಂಖ್ಯೆ:2
ಮಿಥುನ: ಜ್ಯುವೆಲ್ಲರಿ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಐಟಿ ಉದ್ಯೋಗಿಗಳಿಗೆ ಉತ್ತಮ ಫಲ. ಶುಭಸಂಖ್ಯೆ: 9
ಕಟಕ: ಮೊಬೈಲ್ ವ್ಯಾಪಾರಿಗಳಿಗೆ ಉತ್ತಮ ಲಾಭ. ದಾಂಪತ್ಯದಲ್ಲಿ ವಿರಸ. ಹೊಟ್ಟೆ ಮತ್ತು ಗಂಟಲಿನ ಸಮಸ್ಯೆ ಕಾಣಿಸಿಕೊಳ್ಳಲಿದೆ. ಶುಭಸಂಖ್ಯೆ:1
ಸಿಂಹ: ಮಾತಿನಲ್ಲಿ ಜಾಗ್ರತೆ ಅಪೇಕ್ಷಣೀಯ. ಆರ್ಥಿಕತೆಯಲ್ಲಿ ಸುಧಾರಣೆ ಕಾಣುವುದು. ಮನಸ್ಸಿನಲ್ಲಿ ಅಶಾಂತಿ. ಅಭ್ಯಾಗತರ ಆಗಮನ. ಶುಭಸಂಖ್ಯೆ:8
ಕನ್ಯಾ: ಚರ್ಮ ರೋಗ ಬಾಧಿಸಲಿದೆ. ಮಿತ್ರರಿಂದ ಸಹಕಾರ ದೊರೆಯುವುದು. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ ಇರುತ್ತದೆ. ಶುಭಸಂಖ್ಯೆ: 4
ತುಲಾ: ಶತ್ರುಗಳ ಕಾಟದಿಂದ ಮುಕ್ತಿ ದೊರೆಯಲಿದೆ. ಆರೊಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿ. ಶರೀರಕ್ಕೆ ಗಾಯವಾಗುವ ಸಂಭವ. ಶುಭಸಂಖ್ಯೆ: 2
ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯ ನಿಮ್ಮ ಕಡೆಗಿದೆ. ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ. ವಿವಾಹದ ವಿಷಯದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 8
ಧನಸ್ಸು: ನಮಾತಿನಲ್ಲಿ ಕಠಿಣತೆ ನಿಯಂತ್ರಿಸಿ. ಉದ್ಯೋಗ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಶುಭಸಂಖ್ಯೆ:2
ಮಕರ: ವಸ್ತುಗಳು ಕಳೆದುಹೋಗುವ ಸಾಧ್ಯತೆ. ಬುದ್ದಿವಂತಿಕೆಯಿಂದ ಕಾರ್ಯ ಸಾಧನೆ ಮಾಡಿಕೊಳ್ಳಿ, ವೃತ್ತಿ ಜೀವನದಲ್ಲಿ ಮುನ್ನಡೆ. ಶುಭಸಂಖ್ಯೆ:9
ಕುಂಭ: ಕಲಾವಿದರಿಗೆ ಉತ್ತಮ ದಿನ. ಮನೆ ಖರೀದಿಯಲ್ಲಿ ಬುದ್ಧಿವಂತಿಕೆಯ ನಿರ್ಧಾರ ಅಗತ್ಯ. ಮಹಿಳೆಯರ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:1
ಮೀನ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ ಉಂಟಾಗು ವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಕಠಿಣ ಪರಿಶ್ರಮದಿಂದ ಲಾಭ. ಶುಭಸಂಖ್ಯೆ:6