ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕವಾಗಿ ಅನುಕೂಲಕರವಾದ ದಿನ

Nitya Bhavisya Vijayavani
Published on

ಮೇಷ: ಔತಣ ಕೂಟಕ್ಕೆ ಅಧಿಕ ಖರ್ಚು ಮಾಡಬೇಕಾಗುವುದು. ಕುಟುಂಬದಲ್ಲಿ ಆಸ್ತಿ ವಾಗ್ವಾದ ಜೋರಾಗಲಿದೆ. ಸಾಲದ ಚಿಂತೆ ಅಧಿಕ. ಶುಭಸಂಖ್ಯೆ: 2

ವೃಷಭ: ಅನಗತ್ಯ ಮಾತು ಬೇಡ. ಆರ್ಥಿಕವಾಗಿ ಅನುಕೂಲಕರ ವಾದ ದಿನ. ದಾಂಪತ್ಯ ಕಲಹ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 8

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರುಕುಳ. ಹೆಣ್ಣು ಮಕ್ಕಳಿಂದ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾದೀತು, ಧೃತಿಗೆಡಬೇಡಿ. ಶುಭಸಂಖ್ಯೆ:6

ಕಟಕ: ದೂರ ಪ್ರಯಾಣದ ಆಲೋಚನೆ. ಮಿತ್ರರೊಡನೆ ಮನಸ್ತಾಪ ಉಂಟಾಗಬಹುದು. ಅನಗತ್ಯ ವಿಚಾರದಿಂದ ಬೇಸರವಾಗುವುದು. ಶುಭಸಂಖ್ಯೆ: 9

ಸಿಂಹ: ಮಾನಸಿಕವಾಗಿ ನೋವು. ಉದ್ಯೋಗ ಒತ್ತಡ. ಆಕಸ್ಮಿಕ ಧನ ನಷ್ಟ. ಮಿತ್ರರಿಂದ ಆರ್ಥಿಕ ನೆರವು. ಉದ್ಯೋಗದ ಭರವಸೆ ಸಿಗಲಿದೆ. ಶುಭಸಂಖ್ಯೆ: 3

ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲಕರವಾದ ದಿನ. ಹಳೆಯ ಸ್ನೇಹಿತರ ಸಂಪರ್ಕ. ದಾಯಾದಿ ಕಲಹ. ತಂದೆಗೆ ಅನಾರೋಗ್ಯ. ಶುಭಸಂಖ್ಯೆ: 5

ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ ಉಂಟಾಗ ಬಹುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಧನ ನಷ್ಟವಾಗುವುದು. ಶುಭಸಂಖ್ಯೆ:8

ವೃಶ್ಚಿಕ: ದಾಂಪತ್ಯ ಕಲಹ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಮಕ್ಕಳಿಂದ ಕಿರಿಕಿರಿ, ಅಪಮಾನ. ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ. ಶುಭಸಂಖ್ಯೆ:5

ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ ಎದುರಾಗಬಹುದು. ಪಾಲುದಾರಿಕೆಯಲ್ಲಿ ನಷ್ಟವಾಗುವ ಸಾಧ್ಯತೆ. ಆರೋಗ್ಯ ಸಮಸ್ಯೆ ಕಾಡುವುದು. ಶುಭಸಂಖ್ಯೆ:1

ಮಕರ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಮಕ್ಕಳ ಭವಿಷ್ಯದ ಚಿಂತೆ ಕಾಡುವುದು. ಶುಭಸಂಖ್ಯೆ:6

ಕುಂಭ: ಸಾಲಗಾರರೊಂದಿಗೆ ವಾಗ್ವಾದ. ಪ್ರೇಮದ ವಿಚಾರದಲ್ಲಿ ಸಂಕಷ್ಟ. ಮಾನಸಿಕ ಉದ್ವೇಗ. ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ. ಶುಭಸಂಖ್ಯೆ:4

ಮೀನ: ಬಂಧು ಬಾಂಧವರೊಂದಿಗೆ ಕಿರಿಕಿರಿ ಆದೀತು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಶಂಸೆ. ಸಾಲ ಪಡೆಯುವ ಪ್ರಯತ್ನದಲ್ಲಿ ಸಫಲ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net