ನಿತ್ಯ ಭವಿಷ್ಯ : ಈ ರಾಶಿಯವರಿಗಿಂದು ಇಷ್ಟ ದೇವರ ದರ್ಶನದಿಂದ ಸಂಕಲ್ಪ ಸಿದ್ಧಿ

Nitya Bhavisya Vijayavani
Published on

ಮೇಷ: ದೇಹ, ಮನೋಬಲದಿಂದ ಕೆಲಸ ನಿರ್ವಹಿಸಿ. ಹೊಸ ಉದ್ಯಮದ ಕುರಿತು ಧನಾತ್ಮಕ ಚಿಂತನೆ. ಪಾಲುದಾರರೊಂದಿಗೆ ಸಾಮರಸ್ಯ. ಶುಭಸಂಖ್ಯೆ: 8

ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಬದಲಾವಣೆಗಳು ಅನಿರೀಕ್ಷಿತವಾಗಿ ಅತಿಥಿಗಳ ಆಗಮನ. ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿ. ಶುಭಸಂಖ್ಯೆ: 2

ಮಿಥುನ: ಕುಟುಂಬದಲ್ಲಿ ಧಾರ್ವಿುಕ ಕಾರ್ಯಕ್ರಮ. ಧುರೀಣರ ಪ್ರಭಾವಕ್ಕೆ ಒಳಗಾಗುವಿರಿ. ತೋಟಗಾರಿಕೆ ಉದ್ಯೋಗಿಗಳಿಗೆ ಶುಭದಿನ. ಶುಭಸಂಖ್ಯೆ: 6

ಕಟಕ: ಹಳೆಯ ಸ್ನೇಹಿತರ ಸಮ್ಮಿಲನ. ಸಿದ್ದ ಉಡುಪು ವ್ಯಾಪಾರದಲ್ಲಿ ಲಾಭ. ಕಿರುಚಿತ್ರ ನಟರಿಗೆ ಹೊಸ ಅವಕಾಶಗಳ ಮಹಾಪೂರ. ಶುಭಸಂಖ್ಯೆ:9

ಸಿಂಹ: ಕುಟುಂಬದ ಸಮಗ್ರ ವ್ಯವಹಾರದ ವಿಸ್ತರಣೆ ಆಗಲಿದೆ. ಕುಶಲಕರ್ವಿುಗಳಿಗೆ ಬೇಡಿಕೆ. ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಶುಭಸಂಖ್ಯೆ:4

ಕನ್ಯಾ: ತುರ್ತು ಕಾರ್ಯಕ್ಕಾಗಿ ಪ್ರಯಾಣ. ಗಣ್ಯರ ಭೇಟಿ. ದೀರ್ಘಕಾಲದ ಆಸ್ತಿ ವಿವಾದಕ್ಕೆ ತಾರ್ಕಿಕ ಅಂತ್ಯ. ಪುತ್ರನಿಗೆ ವಿವಾಹ ಸಿದ್ದಿ. ಶುಭಸಂಖ್ಯೆ:3

ತುಲಾ: ನಿರುದ್ಯೋಗಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ. ಕಲಾವಿದರಿಗೆ ಒಳ್ಳೆಯ ಅವಕಾಶ ಲಭ್ಯ. ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು. ಶುಭಸಂಖ್ಯೆ: 7

ವೃಶ್ಚಿಕ: ಹೊಸ ಉದ್ಯೋಗದಲ್ಲಿ ಉತ್ಸಾಹ .ವಿಜ್ಞಾನಿಗಳಿಗೆ ಸಂಶೋಧನೆಯಲ್ಲಿ ಯಶಸ್ಸು. ನೊಂದವರಿಗೆ ಸಾಂತ್ವನ ಹೇಳುವ ಅವಕಾಶ. ಶುಭಸಂಖ್ಯೆ: 8

ಧನಸ್ಸು: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಆಸ್ಪತ್ರೆಯ ಉದ್ಯೋಗಿಗಳಿಗೆ ನಿರೀಕ್ಷಿತ ಲಾಭ. ಐಟಿ ಉದ್ಯೋಗ ಬದಲಾವಣೆ. ಶುಭಸಂಖ್ಯೆ:5

ಮಕರ: ಉದ್ಯೋಗ ಸ್ಥಾನದಲ್ಲಿ ಸಂತೋಷದ ವಾತಾವರಣ. ಇಷ್ಟ ದೇವರ ದರ್ಶನದಿಂದ ಸಂಕಲ್ಪ ಸಿದ್ಧಿ. ಕಬ್ಬಿಣ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ಕುಂಭ: ಗಳಿಕೆಯ ಮಾರ್ಗ ಗೋಚರ. ಊರಿನಿಂದ ಬಂಧುಗಳ ಆಗಮನ. ಧಾರ್ವಿುಕ ಗುರುಗಳ ಭೇಟಿ. ಸಮಾಜ ಸೇವಕರಿಗೆ ಶುಭದಿನ. ಶುಭಸಂಖ್ಯೆ:2

ಮೀನ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸ್ಪಂದನ. ಕಲಾವಿದರಿಗೆ ಸಮಾಜದಲ್ಲಿ ಗೌರವ . ಧಾರ್ವಿುಕ ಕ್ಷೇತ್ರದ ನೇತಾರರಿಗೆ ಒತ್ತಡ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net