ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರಯತ್ನಕ್ಕೆ ತಕ್ಕ ಸ್ಥಾನಮಾನ

Nitya-Bhavisya-FILEminimizer-2
Published on

ಮೇಷ: ಹೊಸ ವ್ಯಾಪಾರದಲ್ಲಿ ವೃದಿ. ಪತ್ನಿ-ಮಕ್ಕಳೊಂದಿಗೆ ಪ್ರವಾಸ. ದೃಢನಿರ್ಧಾರ ತೆಗೆದುಕೊಳ್ಳುವಾಗ ಮತ್ತೊಮ್ಮೆಯೋಚಿಸಿ. ಶುಭಸಂಖ್ಯೆ: 5

ವೃಷಭ: ಹಿರಿಯರ ಆರೋಗ್ಯದಲ್ಲಿ ಕಾಳಜಿವಹಿಸಿ. ಕೂಡಿಟ್ಟ ಹಣ ಸದ್ವಿನಿಯೋಗವಾಗಲಿದೆ. ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಲಿದೆ.ಶುಭಸಂಖ್ಯೆ: 4

ಮಿಥುನ: ಮನಸ್ಸಿಗೆ ಖುಷಿ ನೀಡುವ ಸಮಾಚಾರ. ಮಕ್ಕಳ ಆರೋಗ್ಯದಲ್ಲಿ ಕಾಳಜಿವಹಿಸುವುದು ಅಗತ್ಯ. ವ್ಯಾಪಾರಿಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 7

ಕಟಕ: ಹಿರಿಯರ ಮಾರ್ಗದರ್ಶನ ಸಿಗಲಿದೆ. ಲೋಹ ವ್ಯಾಪಾರಿಗಳಿಗೆ ಲಾಭ. ಕಟ್ಟಡ ನಿರ್ಮಾಣ ಮತ್ತು ಮಾರಾಟದಿಂದ ಆದಾಯ. ಶುಭಸಂಖ್ಯೆ:8

ಸಿಂಹ: ಐಷಾರಾಮಿ ವಸ್ತುಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯಾಪಾರಿಗಳಿಗೆ ಶ್ರಮದಿಂದ ಫಲ. ದೂರ ಪ್ರಯಾಣದಿಂದ ಅನುಕೂಲ. ಶುಭಸಂಖ್ಯೆ:2

ಕನ್ಯಾ: ಜಯ ನಿಮ್ಮದಾಗಿ ಜಟಿಲ ಸಮಸ್ಯೆಗೆ ಪರಿಹಾರ. ಹಿರಿಯರೊಂದಿಗೆ ವಾಗ್ವಾದ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.ಶುಭಸಂಖ್ಯೆ:4

ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪುಣ್ಯಕ್ಷೇತ್ರಕ್ಕೆ ಪ್ರವಾಸ ಮಾಡುವಿರಿ. ಕೋರ್ಟ್ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:2

ವೃಶ್ಚಿಕ: ಶುಭವಾರ್ತೆಯಿಂದ ಸಂತಸ. ರಾಜಕಾರಣಿಗಳಿಗೆ ಅಧಿಕಾರ ಪ್ರಾಪ್ತಿ. ಕಾನೂನು ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 6

ಧನುಸ್ಸು: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ವಿದ್ಯುತ್ ಕೆಲಸಗಾರರು ಎಚ್ಚರಿಕೆ ವಹಿಸಿ. ಹೈನೋತ್ಪನ್ನ ವ್ಯಾಪಾರದಲ್ಲಿ ಮಂದಗತಿ.ಶುಭಸಂಖ್ಯೆ:7

ಮಕರ: ಭೂ ವ್ಯವಹಾರದಲ್ಲಿ ಹೆಚ್ಚಿನ ಹಣ ಹರಿದು ಬರಲಿದೆ. ಸಹೋದ್ಯೋಗಿಗಳಿಂದ ಕಿರಿಕಿರಿಯಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 8.

ಕುಂಭ: ದುಡುಕಿ ಯಾವುದೇ ಮಾತುಗಳನ್ನು ಆಡಬೇಡಿ. ಪ್ರಯತ್ನಕ್ಕೆ ತಕ್ಕ ಸ್ಥಾನಮಾನ. ಒಂದು ವರ್ಗದಲ್ಲಿ ಸಾಮಾಜಿಕ ಮನ್ನಣೆ ಸಿಗಲಿದೆ. ಶುಭಸಂಖ್ಯೆ:4

ಮೀನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ, ಕೃಷಿ ವಸ್ತುಗಳ ವ್ಯಾಪಾರದಲ್ಲಿ ಶುಭ. ಲೇವಾದೇವಿ ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net