ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೊಟ್ಟ ಹಣ ವಾಪಸ್ ಬರುವುದು

Nitya Bhavisya Vijayavani
Published on

ಮೇಷ: ಹೊಸ ಅನುಭವ ಪಡೆಯುವ ದಿನ. ಹಿರಿಯರ ಮಾರ್ಗದರ್ಶನದಿಂದ ಕಾರ್ಯಗಳು ಪೂರ್ಣ. ಲಕ್ಷ್ಮೀ ದೇವಿಯನ್ನು ಪೂಜಿಸಿ. ಶುಭಸಂಖ್ಯೆ:9

ವೃಷಭ: ಕೋರ್ಟ್ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೊಟ್ಟ ಹಣ ವಾಪಸ್ ಬರುವುದು. ಬಂಧುಗಳ ನೆರವಿನಿಂದ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 9

ಮಿಥುನ: ಹಿರಿಯರೊಂದಿಗೆ ಪ್ರಮುಖ ವಿಷಯ ರ್ಚಚಿಸಿ, ಸೂಕ್ತ ಸಲಹೆ ಸಿಗುತ್ತದೆ. ಪರಿಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. ಶುಭಸಂಖ್ಯೆ: 1

ಕಟಕ: ಪರಿಸ್ಥಿತಿಗಳು ಅನುಕೂಲಕರ. ಭಾವನೆಗಳ ಬದಲು ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ವರ್ತಿಸಿದರೆ ಉತ್ತಮ ಫಲಿತಾಂಶ. ಶುಭಸಂಖ್ಯೆ: 6

ಸಿಂಹ: ಮುಖ್ಯ ಗುರಿಯತ್ತ ಗಮನ ಕೇಂದ್ರೀಕರಿಸಿ. ಆತುರದ ವ್ಯವಹಾರ ಬೇಡ. ಸಂಬಂಧಿಗಳ ಜತೆ ಉತ್ತಮ ಸಮಯ ವ್ಯಯಿಸುವಿರಿ. ಶುಭಸಂಖ್ಯೆ:5

ಕನ್ಯಾ: ದಿನವಿಡೀ ಸಕಾರಾತ್ಮಕ ಯೋಚನೆ ಇರುತ್ತವೆೆ. ಆಲೋಚನೆಗಳು ಮತ್ತು ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಶುಭಸಂಖ್ಯೆ:8

ತುಲಾ: ಅನಿರೀಕ್ಷಿತ ಆರ್ಥಿಕ ಲಾಭ ಆಗುವ ಸಾಧ್ಯತೆ ಇದೆ. ಸಾರ್ವಜನಿಕ ಸಂಬಂಧ ವೃದ್ಧಿಸುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿ. ಶುಭಸಂಖ್ಯೆ:1

ವೃಶ್ಚಿಕ: ಗ್ರಹಗಳ ಸ್ಥಾನವು ಅನುಕೂಲಕರವಾಗಿದೆ. ಯಶಸ್ಸು ಮತ್ತು ಅದೃಷ್ಟ ಒಲಿಯುತ್ತದೆ. ಕೆಲಸದ ವಿಚಾರದಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:4

ಧನುಸ್ಸು: ಹಣಕಾಸು ಹೂಡಿಕೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸಿ. ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಶುಭಸಂಖ್ಯೆ:7

ಮಕರ: ದಿನದ ಬಹುಪಾಲು ಕೆಲಸಗಳಲ್ಲಿ ನಿರತರಾಗಿರುತ್ತೀರಿ. ಆರ್ಥಿಕ ಸ್ಥಿತಿ ಸಾಮಾನ್ಯ. ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ. ಶುಭಸಂಖ್ಯೆ:8

ಕುಂಭ: ಕಷ್ಟಪಟ್ಟು ಕೆಲಸ ಮಾಡುವ ನಿಮ್ಮ ಸ್ವಭಾವಕ್ಕೆ ಉತ್ತಮ ಪ್ರತಿಫಲ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:4

ಮೀನ: ಪ್ರಮುಖ ವಿಚಾರಗಳಲ್ಲಿ ಕುಟುಂಬ ಸದಸ್ಯರ ಬೆಂಬಲ ಸಿಗುತ್ತದೆ. ಸಂವಹನ ಕೌಶಲದಿಂದ ಲಾಭ. ಖರ್ಚಿಗೆ ಕಡಿವಾಣ ಹಾಕಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net