

ಮೇಷ:ವಿದ್ಯಾರ್ಥಿಗಳಲ್ಲಿ ಹಲವು ಗೊಂದಲ ಉಂಟಾದೀತು. ಸಂಗಾತಿಯಬಗ್ಗೆ ಚಿಂತೆ ಕಾಡಲಿದೆ. ಮಿತ್ರರಿಂದ ಆಕಸ್ಮಿಕ ನಷ್ಟ. ಶುಭಸಂಖ್ಯೆ: 7
ವೃಷಭ:ಹೃದಯ ಸಂಬಂಧಿ ರೋಗ ಕಾಡಬಹುದು. ಸ್ವಯಂ ಕೃತ್ಯಗಳಿಂದ ಹಣ ನಷ್ಟವಾಗುವುದು. ಮಿತ್ರರೇ ಶತ್ರುಗಳಾಗುವರು. ಶುಭಸಂಖ್ಯೆ: 3
ಮಿಥುನ:ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಜವಾಬ್ದಾರಿ ಯುತ ಕಾರ್ಯದಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಗಣ್ಯರೊಂದಿಗೆ ಸಂಪರ್ಕ. ಶುಭಸಂಖ್ಯೆ: 8
ಕಟಕ:ಕಲಾವಿದರಿಗೆ ಜನಮನ್ನಣೆ, ಕೀರ್ತಿ ಸಂಪಾದನೆ. ಬಂಧುಗಳ ಆಸ್ತಿ ವಿಚಾರದಲ್ಲಿ ಭಾಗಿ, ಧಾರ್ವಿುಕ ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ: 1
ಸಿಂಹ: ಕಚೇರಿ ಬದಲಾವಣೆಯಲ್ಲಿ ನಿರಾಸಕ್ತಿ ಪ್ರದರ್ಶಿಸುವಿರಿ. ಮಕ್ಕಳಲ್ಲಿ ಆಸ್ತಿ ಕಲಹ ವಿಕೋಪಕ್ಕೆ ಹೋದೀತು. ಪ್ರಯಾಣದಲ್ಲಿ ಅಡ್ಡಿ. ಶುಭಸಂಖ್ಯೆ: 6
ಕನ್ಯಾ: ಸ್ತ್ರೀಯರಿಗೆ ಅಮೂಲ್ಯ ವಸ್ತುಗಳ ಖರೀದಿ ಯೋಗ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 4
ತುಲಾ:ಬ್ಯಾಂಕ್ ಉದ್ಯೋಗಿಗಳಿಗೆ ಹಣಕಾಸಿನಲ್ಲಿ ಮೋಸ. ಮಿತ್ರರೊಂದಿಗೆ ಧಾರ್ವಿುಕ ಪ್ರಯಾಣ. ಸದೃಢ ಆರೋಗ್ಯದಿಂದ ನೆಮ್ಮದಿ. ಶುಭಸಂಖ್ಯೆ:8
ವೃಶ್ಚಿಕ:ತಪ್ಪಾದ ಊಹೆಗಳಿಂದ ಹಾನಿ. ಪದೇಪದೆ ವೈಫಲ್ಯದಿಂದ ಮಾನಸಿಕ ಖಿನ್ನತೆ. ರೇಷ್ಮೆ ಮತ್ತು ಜೇನು ಕೃಷಿಯಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 8
ಧನುಸ್ಸು:ಧಾರ್ವಿುಕ ವಿಚಾರದ ನೇತೃತ್ವ. ಅಜೀರ್ಣ ಸಮಸ್ಯೆ ಯಿಂದ ಆಸ್ಪತ್ರೆಗೆ ಹೋಗಬೇಕಾದೀತು. ಆಮದು ವ್ಯವಹಾರಗಳಿಂದ ಧನ ವೃದ್ಧಿ. ಶುಭಸಂಖ್ಯೆ: 9
ಮಕರ:ರಕ್ಷಣಾ ಕ್ಷೇತ್ರದ ಉನ್ನತ ವಿದ್ಯಾಭ್ಯಾಸಕ್ಕೆ ತೊಡಕು. ಉದ್ಯೋಗದಲ್ಲಿ ಲಾಭ. ಭತ್ತ ಮತ್ತು ಅಡಕೆ ಬೇಸಾಯಗಾರರಿಗೆ ಸಮಸ್ಯೆ. ಶುಭಸಂಖ್ಯೆ: 4
ಕುಂಭ:ರಾಜಕೀಯ ಕಾರ್ಯಗಳಲ್ಲಿ ಆಸಕ್ತಿ ತಾಳುವಿರಿ. ನೃತ್ಯ, ಸಂಗೀತ ಕಲಾವಿದರಿಗೆ ವಿಶೇಷ ಪುರಸ್ಕಾರ. ವೃತ್ತಿಪರರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ:5
ಮೀನ: ಮಕ್ಕಳು ಶತ್ರುಗಳಾಗಿ ಬದಲಾದಾರು. ಸಂಗಾತಿಯ ವ್ಯವಹಾರದಲ್ಲಿ ಸಂಶಯ ಬೇಡ. ಅನಗತ್ಯ ಮಾತಿನಿಂದ ಸಮಸ್ಯೆಯಾದೀತು. ಶುಭಸಂಖ್ಯೆ: 3