ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ

Nitya Bhavisya Vijayavani
Published on

ಮೇಷ: ನ್ಯಾಯಾಲಯದ ಕಾರ್ಯಗಳಲ್ಲಿ ತೊಂದರೆ. ಕುಟುಂಬದಲ್ಲಿ ಆಸ್ತಿ ವಿಷಯಕ್ಕೆ ಮನಸ್ತಾಪವಾಗಲಿದೆ. ವ್ಯರ್ಥ ಧನಹಾನಿ. ಶುಭಸಂಖ್ಯೆ:5

ವೃಷಭ: ಪರರಿಗೆ ವಂಚಿಸುವ ಯೋಚನೆ ಬರಬಹುದಾದರೂ ಅದನ್ನು ಮಾಡಲು ಹೋಗಬೇಡಿ. ಭಯ ಭೀತಿ ನಿವಾರಣೆಯಾಗಲಿದೆ. ಶುಭಸಂಖ್ಯೆ:1

ಮಿಥುನ: ಧಾರ್ವಿುಕ ಸಮಾರಂಭದಿಂದ ಮನಶ್ಶಾಂತಿ. ತೀರ್ಥಕ್ಷೇತ್ರಕ್ಕೆ ತೆರಳುವ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಾಪಾಡಿ. ಶುಭಸಂಖ್ಯೆ:7

ಕಟಕ: ಉದ್ಯೋಗದಲ್ಲಿ ಬಡ್ತಿ. ಬಾಕಿ ಕೆಲಸ ಪೂರ್ಣಗೊಳಿಸುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಕೆಲ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:7

ಸಿಂಹ: ಪತಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ಮಿತ್ರರಲ್ಲಿ ದ್ವೇಷ ಬೇಡ. ಶುಭಸಂಖ್ಯೆ:3

ಕನ್ಯಾ: ಚುರುಕುತನದ ಕೆಲಸದಲ್ಲಿ ಜಯ ಸಾಧಿಸುವಿರಿ. ಅಗ್ನಿಯಿಂದ ತೊಂದರೆಯಾಗುವ ಸಾಧ್ಯತೆ. ಹಣಕಾಸಿನ ಸಂಸ್ಥೆಯವರಿಗೆ ನಷ್ಟ. ಶುಭಸಂಖ್ಯೆ:7

ತಲಾ: ಹಣದ ತೊಂದರೆ ಕಾಡಬಹುದು. ಅಧಿಕ ತಿರುಗಾಟ. ಸಲ್ಲದ ಅಪವಾದ ಬರಬಹುದು. ಸ್ತ್ರೀಯರಿಗೆ ವಸ್ತ್ರ, ಆಭರಣ ಲಾಭ. ಶುಭಸಂಖ್ಯೆ:2

ವೃಶ್ಚಿಕ: ಮಾನಸಿಕ ಒತ್ತಡ. ಭೂಮಿ ಕಳೆದುಕೊಳ್ಳುವ ಸಂಭವವಿದೆ. ಸರ್ಕಾರಿ ನೌಕರರಿಗೆ ಬಡ್ತಿ. ಆಟೋಮೊಬೈಲ್ಸ್ ಮಾಲಿಕರಿಗೆ ನಷ್ಟ. ಶುಭಸಂಖ್ಯೆ:9

ಧನುಸ್ಸು: ದೂರ ಪ್ರಯಾಣದಲ್ಲಿ ವಿಶೇಷ ವ್ಯಕ್ತಿಗಳ ಸಂಪರ್ಕ. ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ನಡುವೆ ಕಲಹ. ಸಾಲ ಮರುಪಾವತಿ. ಶುಭಸಂಖ್ಯೆ:6

ಮಕರ: ಶತ್ರುಗಳಿಂದ ತೊಂದರೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಬುದ್ಧಿಶಕ್ತಿಯಿಂದ ಕಾರ್ಯಸಾಧನೆ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 7

ಕುಂಭ: ವಾಹನ ರಿಪೇರಿ ಮಾಡಿಸಬೇಕಾದೀತು. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ. ಅಧಿಕಾರ ಪ್ರಾಪ್ತಿ. ರೈಲ್ವೆ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:2

ಮೀನ: ಕಿರುಚಿತ್ರ ಮತ್ತು ಚಲನಚಿತ್ರ ಕಲಾವಿದರಿಗೆ ಸಮಾಜದಲ್ಲಿ ಗೌರವ. ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿ. ವೈಯಕ್ತಿಕ ಸಂಬಂಧಗಳಲ್ಲಿ ಸಂತಸ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net