ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ

Nitya Bhavisya Vijayavani
Published on

ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ. ಉದ್ಯೋಗ ಬದಲಾಯಿಸುವ ಸಾಧ್ಯತೆ ಇದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ವೃಷಭ: ವಿವಾಹದ ಅಪೇಕ್ಷೆಯುಳ್ಳವರಿಗೆ ಶುಭ ಸುದ್ದಿ ಬರಲಿದೆ. ಮಕ್ಕಳಿಗೆ ಅನಾರೋಗ್ಯಸಮಸ್ಯೆ. ಜೇನು ಕೃಷಿಯಲ್ಲಿ ಲಾಭ ಬರಲಿದೆ. ಶುಭಸಂಖ್ಯೆ: 5

ಮಿಥುನ: ತೀರ್ಥಯಾತ್ರೆಯ ಯೋಗವಿದೆ. ಇಂದು ಶತ್ರುಗಳನ್ನು ನಿಗ್ರಹಿಸುವ ಶಕ್ತಿ ನಿಮಗಿದೆ. ಸಹೋದರ ರಿಂದ ಮನೆ ಕಟ್ಟಲು ಸಹಕಾರ.ಶುಭಸಂಖ್ಯೆ: 7

ಕಟಕ: ಅಮೂಲ್ಯವಾದ ವಸ್ತುಗಳ ಕಳವು. ರಾಜಕಾರಣಿ ಗಳಿಗೆ ಸೋಲಿನ ಭೀತಿ. ಮಾನಹಾನಿ. ವೃಥಾ ತಿರುಗಾಟ ಮಾಡಬೇಕಾಗುವುದು. ಶುಭಸಂಖ್ಯೆ: 3

ಸಿಂಹ: ಹಣಕಾಸಿನ ಮುಗ್ಗಟ್ಟು ಉಂಟಾದೀತು. ಕುಟುಂಬದಲ್ಲಿ ಅಹಿತಕರ ಘಟನೆ ಜರುಗಬಹುದು. ಸಂಬಂಧಿಯಿಂದ ಸಹಾಯ. ಶುಭಸಂಖ್ಯೆ:3

ಕನ್ಯಾ:ಪತ್ನಿಗೆ ಉದ್ಯೋಗ ಲಭ್ಯವಾಗುವುದು. ಪ್ರಯಾಣ ದಿಂದ ಕಾರ್ಯ ಸಾಧನೆಯಾಗಿ ಸಮಾಧಾನ. ಸಣ್ಣಪುಟ್ಟ ಶಾರೀರಿಕ ಗಾಯ. ಶುಭಸಂಖ್ಯೆ: 3

ತುಲಾ: ಪತ್ನಿಯ ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಎಲ್ಲ ಕೆಲಸಕ್ಕೂ ಪ್ರಯತ್ನ ಅಗತ್ಯ. ಯುವಕರಿಗೆ ಸಾಹಸ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 5

ವೃಶ್ಚಿಕ: ತಲೆ ನೋವಿನಿಂದ ಕಿರಿಕಿರಿ. ಶುಭ ಕಾರ್ಯದ ಓಡಾಟದಲ್ಲಿ ಆಯಾಸ. ಮಕ್ಕಳಿಗೆ ಜ್ವರ ಬಂದೀತು. ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ: 7

ಧನುಸ್ಸು: ನ್ಯಾಯಾಲಯ, ಸರ್ಕಾರಿ ಕಚೇರಿ ಕಾರ್ಯಗಳಲ್ಲಿ ಯಶಸ್ಸು. ಚಂಚಲ ಮನಸ್ಸು. ದುಡುಕಿನ ನಿರ್ಧಾರ ದಿಂದ ಸಮಸ್ಯೆಯಾಗುವುದು. ಶುಭಸಂಖ್ಯೆ: 2

ಮಕರ: ಪಿತ್ರಾರ್ಜಿತ ಆಸ್ತಿ ಲಭ್ಯ. ಭೂ ವ್ಯವಹಾರದಲ್ಲಿ ಲಾಭ. ಪ್ರೇಮಿಗಳಲ್ಲಿ ಮನಸ್ತಾಪದಿಂದ ಒಡಕು. ಆಮದು ಸರಕು ನಷ್ಟವಾಗಲಿದೆ. ಶುಭಸಂಖ್ಯೆ: 7

ಕುಂಭ: ವಿವಾಹ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಗೃಹ ಕಾರ್ಯಗಳು ಮುಂದುವರಿಯುವುದು. ಅಡಿಕೆ ಮಾರಾಟದಲ್ಲಿ ನಷ್ಟ. ಶುಭಸಂಖ್ಯೆ: 8

ಮೀನ:ಸ್ನೇಹಿತರೊಂದಿಗೆ ಸಾಮರಸ್ಯ. ಬಂಧುಗಳ ಆಗಮನ ದಿಂದ ಸಂತಸ. ಉನ್ನತ ಪದವಿ ಪ್ರಾಪ್ತಿಯಲ್ಲಿ ಅಡೆತಡೆ ಎದುರಾಗಿ ಬೇಸರ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net