

ಮೇಷ: ದ್ವಿಚಕ್ರವಾಹನ ಮಾರಾಟದಲ್ಲಿ ಅಧಿಕ ಲಾಭ. ಪ್ರಾಕೃತಿಕ ವಿಕೋಪದಿಂದ ಅಧಿಕ ಬೆಳೆ ನಷ್ಟ. ಪತ್ರಕರ್ತರಿಗೆ ಹೆಚ್ಚಿದ ಕೆಲಸದ ಒತ್ತಡ. ಶುಭಸಂಖ್ಯೆ: 9
ವೃಷಭ: ಕೇಂದ್ರ ಸರ್ಕಾರಿ ನೌಕರರಿಗೆ ವರ್ಗ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ. ಶುಭಸಂಖ್ಯೆ:1
ಮಿಥುನ: ಆಸ್ತಿ ನೋಂದಣಿಯಲ್ಲಿ ಅಡೆತಡೆ ಉಂಟಾಗಬಹುದು. ಸ್ತ್ರೀ ಸಂಬಂಧಿ ತಕರಾರು ಸಾಧ್ಯತೆಯಿದೆ. ಕುಲದೇವತಾ ದರ್ಶನ ಸೂಕ್ತ. ಶುಭಸಂಖ್ಯೆ:6
ಕಟಕ: ಕಚೇರಿಯನ್ನು ಸ್ಥಳಾಂತರ ಮಾಡಬೇಕಾಗಬಹುದು. ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ:4
ಸಿಂಹ: ಆದಾಯ ತೆರಿಗೆ ಕಟ್ಟಬೇಕಾಗಬಹುದು. ಕ್ರೀಡಾಪಟುಗಳಿಗೆ ಶುಭ ಸುದ್ದಿ. ಸಗಟು ವ್ಯಾಪಾರದಲ್ಲಿ ನಷ್ಟ. ಇಷ್ಟ ದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 2
ಕನ್ಯಾ: ವಿಚ್ಛೇದನ ಕಟ್ಟಳೆ ಇತ್ಯರ್ಥ. ಬಡಗಿ ಮತ್ತು ನೇಕಾರರಿಗೆ ಅನಿರೀಕ್ಷಿತ ಲಾಭ. ಹೊಸ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ:1
ತುಲಾ: ಅವಿವಾಹಿತರಿಗೆ ವಿವಾಹ ಸಿದ್ದಿಯಾಗಲಿದೆ. ಔತಣ ಕೂಟಕ್ಕೆ ದುಂದು ವೆಚ್ಚ. ಪಿತ್ರಾರ್ಜಿತ ಆಸ್ತಿಗೋಸ್ಕರ ಘರ್ಷಣೆ ಸಾಧ್ಯತೆ. ಶುಭಸಂಖ್ಯೆ:8
ವೃಶ್ಚಿಕ: ಬಟ್ಟೆ ವ್ಯಾಪಾರದಲ್ಲಿ ಲಾಭ. ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಗತಿ. ಸಹೋದರಿಯೊಂದಿಗೆ ಜಗಳ, ವಿಕೋಪಕ್ಕೆ ಹೋಗದಿರಲಿ. ಶುಭಸಂಖ್ಯೆ: 6
ಧನುಸ್ಸು: ಅನಿರೀಕ್ಷಿತ ಹಣದ ಲಾಭ. ಭತ್ತ, ಗೋಧಿ ಬೆಳೆಗಾರರಿಗೆ ನಷ್ಟ. ಹೋಟೆಲ್ ಮತ್ತು ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:4
ಮಕರ: ಮಾಧ್ಯಮ ಕ್ಷೇತ್ರದಲ್ಲಿ ನೌಕರರಿಗೆ ಅತಂತ್ರ ಸ್ಥಿತಿ. ಹೊಸ ವ್ಯವಹಾರ ಪ್ರಾರಂಭಕ್ಕೆ ನಿರ್ಧಾರ. ನಿಮ್ಮ ಪ್ರತಿಭೆ ಅನಾವರಣಗೊಳ್ಳಲಿದೆ. ಶುಭಸಂಖ್ಯೆ:9
ಕುಂಭ: ಖರ್ಚು ನಿಯಂತ್ರಿಸಲಾಗದೆ ಆರ್ಥಿಕ ಮುಗ್ಗಟ್ಟು. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಪದವಿಪ್ರಾಪ್ತಿ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 6
ಮೀನ: ವಾಣಿಜ್ಯ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಗೃಹ ನಿರ್ವಣಕ್ಕೆ ಕೊಂಚ ಅಡೆತಡೆ. ವೈದ್ಯರಿಗೆ ಉತ್ತಮ ಹೆಸರು ಬರಲಿದೆ. ಶುಭಸಂಖ್ಯೆ:7