

ಮೇಷ:ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಫಲ. ರಕ್ಷಣಾ ಇಲಾಖೆಯವರಿಗೆ ವರ್ಗಾವಣೆ ಸಾಧ್ಯತೆ. ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರಾಗುವಿರಿ. ಶುಭಸಂಖ್ಯೆ: 9
ವೃಷಭ:ಅನಿರೀಕ್ಷಿತ ಘಟನೆ ನಡೆಯಲಿದೆ. ಟ್ರಾವೆಲ್ ಏಜೆನ್ಸಿ ಯಿಂದ ಲಾಭ. ಹೊಸ ಮನೆ ಖರೀದಿಗೆ ನಿರ್ಧಾರ. ದಿನಸಿ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 9
ಮಿಥುನ:ದಾಂಪತ್ಯ ಜೀವನದಲ್ಲಿ ಸಾಮರಸ್ಯ ಸಾಧಿಸುವುದು ತೀರ ಅಗತ್ಯ. ಆತ್ಮೀಯ ಸ್ನೇಹಿತನ ವಿಯೋಗ. ವಿದೇಶದ ಕನಸು ನನಸು. ಶುಭಸಂಖ್ಯೆ: 6
ಕಟಕ:ಪಿತ್ರಾರ್ಜಿತ ಆಸ್ತಿಯಲ್ಲಿ ವಿವಾದ ಉಂಟಾದೀತು. ದೈಹಿಕ ಕಸರತ್ತು ತರಬೇತುದಾರರಿಗೆ ಧನ ಲಾಭ. ಸರ್ಕಾರಿ ಕೆಲಸಗಳಲ್ಲಿ ವೈಫಲ್ಯ. ಶುಭಸಂಖ್ಯೆ:2
ಸಿಂಹ:ಧಾರ್ವಿುಕ ಗುರುಗಳ ಭೇಟಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆ ಸಾಧ್ಯತೆ. ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯವಾಗಲಿದೆ. ಶುಭಸಂಖ್ಯೆ:6
ಕನ್ಯಾ:ಉದರ ಸಂಬಂಧಿ ರೋಗಕ್ಕೆ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಮಕ್ಕಳ ಪ್ರಗತಿಯಿಂದ ಸಂತಸ. ಸಾರಿಗೆ ಇಲಾಖೆ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 6
ತುಲಾ:ಧಾರ್ವಿುಕ ಕ್ಷೇತ್ರದ ಆಡಳಿತದಲ್ಲಿ ವೃಥಾ ಕಿರಿಕಿರಿ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:1
ವೃಶ್ಚಿಕ:ಹೊಸ ಪಾಲುದಾರ ಸೇರ್ಪಡೆ. ಬಟ್ಟೆ ಗಿರಣಿ ಮಾಲೀಕರಿಗೆ ನಷ್ಟ. ಬೆಳೆ ಮಾರಾಟದಲ್ಲಿ ಮೋಸ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9
ಧನುಸ್ಸು:ಶೈಕ್ಷಣಿಕ ಕ್ಷೇತ್ರದವರಿಗೆ ವರ್ಗಾವಣೆ. ಕಿರುಚಿತ್ರ, ಸಿನಿಮಾ ಕಲಾವಿದರಿಗೆ ವೇದಿಕೆ ಲಭ್ಯ. ಉನ್ನತ ಅಧಿಕಾರಿಗಳಿಂದ ಮಾರ್ಗದರ್ಶನ. ಶುಭಸಂಖ್ಯೆ:3
ಮಕರ:ಉದ್ಯೋಗ ಸಮಸ್ಯೆ ನಿವಾರಣೆ. ವಿಚ್ಛೇದನ ಕಟ್ಲೆಯಲ್ಲಿ ಜಯ ನಿಮ್ಮಕಡೆಗಿದೆ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಕುಂಭ:ಹರಾಜಿನಲ್ಲಿ ಜಯ. ಅಕ್ಕಸಾಲಿಗ ವೃತ್ತಿಯಲ್ಲಿ ಪ್ರಗತಿ. ಉದ್ಯಮಸ್ಥ ಮಹಿಳೆಯರಿಗೆ ಶುಭ. ಆನ್ಲೈನ್ ಖರೀದಿಯಲ್ಲಿ ಮೋಸ. ಶುಭಸಂಖ್ಯೆ:2
ಮೀನ:ಪೊಲೀಸ್ ಹುದ್ದೆಗೆ ಆಯ್ಕೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 5