ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಾಹನ ಖರೀದಿ ಯೋಗ

Nitya Bhavisya Vijayavani
Published on

ಮೇಷ: ಆದಾಯದಲ್ಲಿ ಏರುಪೇರು. ಸಹೋದರರೊಂದಿಗೆ ಮನಸ್ತಾಪ. ಕೇಂದ್ರ ಸರ್ಕಾರದ ಉದ್ಯೋಗ ಪ್ರಯತ್ನಗಳು ಕೈಗೂಡುತ್ತವೆ. ಶುಭಸಂಖ್ಯೆ: 9

ವೃಷಭ:ನೂತನ ಮನೆ ಖರೀದಿಸಲು ನಿರ್ಧಾರ ಮಾಡುವಿರಿ. ನಾಟ್ಯ ಕಲಾವಿದರಿಗೆ ಅಭ್ಯುದಯವಿದೆ. ತೀರ್ಥಯಾತ್ರೆಗೆ ಯೋಜನೆ. ಶುಭಸಂಖ್ಯೆ: 1

ಮಿಥುನ:ಸ್ನೇಹಿತನಿಂದ ಅದೃಷ್ಟ. ಚಿಕ್ಕ ವ್ಯಾಪಾರಿಗಳಿಗೆ ಧನಲಾಭ, ಕಚೇರಿಯಲ್ಲಿ ಅನುಕೂಲ ಹೆಚ್ಚುತ್ತವೆ. ವಿಲಾಸೀ ಜೀವನ ನಡೆಸುವಿರಿ. ಶುಭಸಂಖ್ಯೆ: 5

ಕಟಕ:ಹಿರಿಯರಿಂದ ಸೂಕ್ತ ಸಮಯದಲ್ಲಿ ಮಾರ್ಗದರ್ಶನ. ವೀಸಾ ಸಮಸ್ಯೆಯಿಂದ ವಿದೇಶ ಪ್ರವಾಸ ರದ್ದು. ಶತ್ರುಗಳ ಮೇಲೆ ವಿಜಯ. ಶುಭಸಂಖ್ಯೆ: 7

ಸಿಂಹ: ಕೃಷಿ ಮೂಲಗಳಿಂದ ಹೆಚ್ಚಿನ ಆದಾಯ ಬರುವುದು. ಕೈಗೊಂಡ ಕೆಲಸಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳ ಖರೀದಿ. ಶುಭಸಂಖ್ಯೆ:4

ಕನ್ಯಾ:ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಮೇಲಧಿಕಾರಿಗಳಿಂದ ಅನುಕೂಲ. ಅನಾರೋಗ್ಯ. ಹೊಸ ಯೋಜನೆ ಸಮಸ್ಯೆ ಆಗಲಿದೆ. ಶುಭಸಂಖ್ಯೆ: 2

ತುಲಾ:ಅಡಕೆ ಮಂಡಿ ವ್ಯವಹಾರದಲ್ಲಿ ಎಚ್ಚರಿಕೆ. ಸಹೋದ್ಯೋಗಿಗಳೊಂದಿಗೆ ಮನಸ್ತಾಪ. ಸಂಸಾರದ ವಿಷಯದಲ್ಲಿ ಉದಾಸೀನ ಬೇಡ. ಶುಭಸಂಖ್ಯೆ:2

ವೃಶ್ಚಿಕ:ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಇವೆಂಟ್ ಮ್ಯಾನೇಜ್ಮೆಂಟ್ ಮಾಡುವವರಿಗೆ ಕಾರ್ಯದೊತ್ತಡ. ಕಣ್ಣಿನ ತೊಂದರೆ ಕಾಡೀತು. ಶುಭಸಂಖ್ಯೆ: 8

ಧನುಸ್ಸು:ಬಹುದಿನದ ನಂತರ ಕುಟುಂಬದಲ್ಲಿ ನೆಮ್ಮದಿ. ಅಲಂಕಾರಿಕ ವಸ್ತು ಮಾರಾಟದಲ್ಲಿ ಅಧಿಕ ಲಾಭ. ಪೊಲೀಸ್ ಸಿಬ್ಬಂದಿಗೆ ಒತ್ತಡ. ಶುಭಸಂಖ್ಯೆ:1

ಮಕರ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಹೊಸ ಸ್ನೇಹಿತೆಯ ಪರಿಚಯ. ಸಹೋದರರೊಡನೆ ಒಡನಾಟ. ರೇಷ್ಮೆ ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ:6

ಕುಂಭ:ಜೀವನದಲ್ಲಿ ಮಹತ್ವದ ತಿರುವು ಬರುವುದು. ವ್ಯಾಪಾರ ನಿಮಿತ್ತ ಪ್ರಯಾಣ. ಕ್ರೀಡೆ ಮನರಂಜನೆಗಾಗಿ ಕಾಲಹರಣ ಮಾಡುವಿರಿ. ಶುಭಸಂಖ್ಯೆ: 9

ಮೀನ:ಭತ್ತದ ಕೃಷಿಯಲ್ಲಿ ಅಧಿಕ ಲಾಭ ಬರಲಿದೆ. ಕುಟುಂಬದೊಂದಿಗೆ ಬಾಂಧವ್ಯ ವೃದ್ಧಿಯಾಗುವುದು. ವಾಹನ ಖರೀದಿ ಯೋಗ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net