

ಮೇಷ: ಆತ್ಮಾಭಿಮಾನದ ಜೊತೆಗೆ ಗೌರವವು ಲಭ್ಯ. ಸಹೋದ್ಯೋಗಿಗಳಿಂದ ಮೆಚ್ಚುಗೆ. ಕೌಟುಂಬಿಕವಾಗಿ ಸಂತಸ. ನೆಮ್ಮದಿಯ ಜೀವನ. ಶುಭಸಂಖ್ಯೆ: 5
ವೃಷಭ: ಸಂಗೀತ ಕಲಾವಿದರಿಗೆ ಬೇಡಿಕೆ. ವಿಶೇಷ ವೇದಿಕೆಯಲ್ಲಿ ಸನ್ಮಾನ ಭಾಗ್ಯ. ತಂದೆಯ ಆರೋಗ್ಯ ಸುಧಾರಣೆಯಾಗಿ ಸಮಾಧಾನ. ಶುಭಸಂಖ್ಯೆ: 9
ಮಿಥುನ: ದಿನಸಿ ವರ್ತಕರಿಗೆ ಲಾಭ. ಕೌಟುಂಬಿಕವಾಗಿ ಭಿನ್ನ ಸಂಬಂಧಗಳು ಸರಿಯಾಗುತ್ತವೆ. ಹೈನುಗಾರಿಕೆಯ ಉತ್ಪನ್ನಗಳಿಂದ ಆದಾಯ. ಶುಭಸಂಖ್ಯೆ: 9
ಕಟಕ: ಪ್ರಮುಖ ನಿರ್ಧಾರಗಳಲ್ಲಿ ಆತುರ ಬೇಡ. ಹಣಕಾಸಿನ ವ್ಯಾಮೋಹದಿಂದ ತೊಂದರೆ. ಸಹೋದ್ಯೋಗಿಗಳಿಂದ ಸಹಾಯ. ಶುಭಸಂಖ್ಯೆ:2
ಸಿಂಹ: ಔಷಧ ವ್ಯಾಪಾರಿಗಳಿಗೆ ಲಾಭ. ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ. ಸಹಾಯ ಪಡೆದವರೇ ದೂಷಿಸುವರು. ಶುಭಸಂಖ್ಯೆ:9
ಕನ್ಯಾ: ರಚನಾತ್ಮಕ ಕೆಲಸಗಳಲ್ಲಿ ವಿಶೇಷ ಆಸಕ್ತಿ ತಾಳುವಿರಿ. ಕುಟುಂಬದಲ್ಲಿ ಅಶಾಂತಿ ಉಂಟಾದೀತು. ಛಾಯಾಗ್ರ್ರಾಹಕರಿಗೆ ಧನಲಾಭ. ಶುಭಸಂಖ್ಯೆ:4
ತುಲಾ: ಮಾನಸಿಕ ವ್ಯಥೆಯ ನಿವಾರಣೆ ಸಾಧ್ಯತೆ. ಶೀಘ್ರಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ. ಕಪಟವಿಲ್ಲದ ಮಾತಿನಿಂದ ನಿಷ್ಠುರ. ಶುಭಸಂಖ್ಯೆ:7
ವೃಶ್ಚಿಕ: ಆಸ್ತಿಯಿಂದ ನಷ್ಟವಾಗಬಹುದು. ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ. ಜಟಿಲ ವಿಷಯಗಳತ್ತ ವಿಶೇಷ ಗಮನಹರಿಸಬೇಕಾಗುವುದು. ಶುಭಸಂಖ್ಯೆ: 9
ಧನಸ್ಸು:ವಿವಾಹಾಕಾಂಕ್ಷಿಗಳಿಗೆ ಕಾರ್ಯ ಸಿದ್ದಿ. ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ. ಜವಾಬ್ದಾರಿಯತ ಕೆಲಸಗಳ ನಿರ್ವಹಣೆ. ಶುಭಸಂಖ್ಯೆ:1
ಮಕರ: ಅಸೂಯೆ ಪಡುವ ಜನರಿಂದ ಎಚ್ಚರ. ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ:3
ಕುಂಭ: ಸಹೋದ್ಯೋಗಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ. ಹಿತಶತ್ರುಗಳಿಂದ ಎಚ್ಚರ. ಶುಭಸಂಖ್ಯೆ: 9
ಮೀನ: ವ್ಯಾಪಾರಸ್ಥರಿಗೆ ಹಣದ ಒಳಹರಿವಿನಲ್ಲಿ ತೊಂದರೆ. ಆಸ್ತಿ ನೋಂದಣಿಯಲ್ಲಿ ನಷ್ಟ. ಉದ್ಯಮಸ್ಥ ಮಹಿಳೆಯರಿಗೆ ಖರ್ಚು ಹೆಚ್ಚು. ಶುಭಸಂಖ್ಯೆ:4