ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸ್ಥಿತಿ ಉತ್ತಮ

astrology
Published on

ಮೇಷ: ಹಣಕಾಸಿನ ಏರಿಳಿತದಿಂದ ಹೊರಬರುತ್ತೀರಿ. ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಶುಭಸಂಖ್ಯೆ: 8

ವೃಷಭ: ದೈವಿಕ ಸೇವಾ ಕಾರ್ಯದಲ್ಲಿ ಭಾಗವಹಿಸುವುದರಿಂದ ನೆಮ್ಮದಿ ದೊರೆಯುತ್ತದೆ. ಉದ್ಯೋಗಿಗಳಿಗೆ ಸ್ಥಾನ ಚಲನೆ ಸೂಚನೆಗಳಿವೆ. ಶುಭಸಂಖ್ಯೆ:3

ಮಿಥುನ: ಆಧ್ಯಾತ್ಮಿಕ ಸೇವಾ ಕಾರ್ಯದಲ್ಲಿ ಭಾಗವಹಿಸುವಿರಿ. ಸಹೋದರರೊಂದಿಗೆ ಭಿನ್ನಾಭಿಪ್ರಾಯ. ಮನೆಯ ಹೊರಗೆ ಸಾಲದ ಒತ್ತಡ. ಶುಭಸಂಖ್ಯೆ: 1

ಕಟಕ: ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ಹರಿದು ಬರುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡಲಿವೆ. ಶುಭಸಂಖ್ಯೆ: 9

ಸಿಂಹ: ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನ. ಆರ್ಥಿಕ ಸ್ಥಿತಿ ಉತ್ತಮ. ಅಗತ್ಯಕ್ಕೆ ತಕ್ಕಂತೆ ಸಂಬಂಧಿಕರಿಂದ ನೆರವು. ಶುಭಸಂಖ್ಯೆ:5

ಕನ್ಯಾ: ಆದಾಯಕ್ಕಿಂತ ಖರ್ಚುಗಳು ಅಧಿಕವಾಗಬಹುದು. ವೃತ್ತಿಪರ ವ್ಯವಹಾರಗಳಲ್ಲಿ ಸಣ್ಣಪುಟ್ಟ ಸಮಸ್ಯೆ. ಭಾಗಶಃ ಉತ್ತಮ ದಿನ. ಶುಭಸಂಖ್ಯೆ: 3

ತುಲಾ: ವೃತ್ತಿ ವ್ಯವಹಾರ ನಿಧಾನವಾಗಿ ಸಾಗುತ್ತವೆ. ಉದ್ಯೋಗ ವಿಷಯದಲ್ಲಿ ಅಧಿಕಾರಿಗಳು ಚರ್ಚೆಗಳಿಗೆ ಹೋಗದಿರುವುದು ಉತ್ತಮ. ಶುಭಸಂಖ್ಯೆ: 9

ವೃಶ್ಚಿಕ: ಮನೆಯ ಹೊರಗೆ ನಿಮ್ಮ ಮಾತಿಗೆ ಬೆಲೆ ಹೆಚ್ಚುತ್ತದೆ. ದೂರ ಪ್ರಯಾಣ ಲಾಭಕರ. ನಿರಾಯಾಸವಾಗಿ ಕೆಲಸ ಪೂರ್ಣಗೊಳ್ಳುವುದು. ಶುಭಸಂಖ್ಯೆ: 1

ಧನುಸ್ಸು: ವೃತ್ತಿಪರ ವ್ಯವಹಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ. ಕುಟುಂಬ ಸದಸ್ಯರ ಮಾತು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ. ಶುಭಸಂಖ್ಯೆ:8

ಮಕರ: ಹೊಸ ವಾಹನ,ವಸ್ತು ಲಾಭವನ್ನು ಪಡೆಯುತ್ತೀರಿ. ಹಳೆಯ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.ಶುಭಸಂಖ್ಯೆ: 6

ಕುಂಭ: ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಪ್ರಮುಖ ವ್ಯವಹಾರದಲ್ಲಿ ಆತುರ ಬೇಡ. ಕೈಗೆತ್ತಿಕೊಂಡ ಕೆಲಸ ಪ್ರಗತಿಯತ್ತ ಸಾಗುತ್ತದೆ ಶುಭಸಂಖ್ಯೆ:7.

ಮೀನ: ಕೌಟುಂಬಿಕ ಭಿನ್ನಭಿಪ್ರಾಯ ಇತ್ಯರ್ಥ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಮುಖ್ಯ ವ್ಯವಹಾರವನ್ನು ಪೂರ್ಣಗೊಳಿಸುತ್ತೀರಿ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net