

ಮೇಷ: ದಿನಸಿ ವ್ಯಾಪಾರದಲ್ಲಿ ಪ್ರಗತಿ. ಹೊಸ ವ್ಯವಹಾರದಲ್ಲಿ ಆಶಾಕಿರಣ ಗೋಚರಿಸಲಿದೆ. ಸಾರ್ವಜನಿಕವಾಗಿ ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 3
ವೃಷಭ: ಪಿತ್ರಾರ್ಜಿತ ಆಸ್ತಿಗಾಗಿ ಸಹೋದರರ ಜತೆ ಕಲಹ. ವಕೀಲರಿಗೆ ಸದವಕಾಶ ಲಭ್ಯ. ಹೂವು ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ:6
ಮಿಥುನ: ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರುವುದು. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಗೃಹ ನಿರ್ವಣಕ್ಕೆ ಚಾಲನೆ ನೀಡುವಿರಿ. ಶುಭಸಂಖ್ಯೆ: 4
ಕಟಕ: ಧಾರ್ವಿುಕ ಸಮಾರಂಭದಿಂದ ಸಮಾಧಾನ. ಧಾರ್ವಿುಕ ಕ್ಷೇತ್ರದ ಮೇಲ್ವಿಚಾರಕರಿಗೆ ಒತ್ತಡ. ಅರಣ್ಯ ಉತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3
ಸಿಂಹ: ಸಾರಿಗೆ ಅಧಿಕಾರಿಗಳಿಗೆ ವರ್ಗಾವಣೆ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ಹಲವು ದಿನಗಳ ಆಸೆ ಈಡೇರಲಿದೆ. ಶುಭಸಂಖ್ಯೆ: 9
ಕನ್ಯಾ: ಮಾಧ್ಯಮ ಕ್ಷೇತ್ರದ ವೃತ್ತಿಪರರಿಗೆ ಸನ್ಮಾನ. ಶಿಕ್ಷಕ ವೃತ್ತಿಯಲ್ಲಿ ವರ್ಗಾವಣೆ ಸಾಧ್ಯತೆ. ವಾದಕರಿಗೆ ವಿಶೇಷ ವೇದಿಕೆ ಲಭ್ಯವಾಗುವುದು. ಶುಭಸಂಖ್ಯೆ: 9
ತುಲಾ: ಸಾರ್ವಜನಿಕ ವಾಹನ ಮಾಲೀಕರಿಗೆ ನಷ್ಟ . ರಕ್ಷಣಾ ಕ್ಷೇತ್ರದ ಉದ್ಯೋಗದಲ್ಲಿ ಪದವಿ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ: 8
ವೃಶ್ಚಿಕ: ಕಟ್ಟಡ ಮಾಲೀಕರಿಗೆ ತೊಂದರೆ. ಅಲ್ಪಮುನ್ನಡೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಕಾರ್ಯ ಸಾಧನೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 7
ಧನಸ್ಸು: ಸ್ವಗ್ರಾಮಕ್ಕೆ ಪ್ರಯಾಣ. ಭೂಮಿ ಖರೀದಿಗೆ ನಿರ್ಧಾರ. ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಮಕರ: ಹೃದಯಸಂಬಂಧಿ ರೋಗಿಗಳು ಎಚ್ಚರದಿಂದಿರಿ. ಕ್ರೀಡಾಪಟುಗಳಿಗೆ ವಿಶೇಷ ಅವಕಾಶ. ಉದ್ಯಮಿಗಳಿಗೆ ಕಾರ್ವಿುಕರ ಸಮಸ್ಯೆ. ಶುಭಸಂಖ್ಯೆ: 9
ಕುಂಭ: ಸ್ವಂತ ಐಟಿ ಉದ್ಯಮದಲ್ಲಿ ಪ್ರಗತಿ. ಸಣ್ಣ ಅಪಘಾತ ಸಾಧ್ಯತೆ. ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಧನ ಲಾಭವಾಗಿ ಸಮಾಧಾನ. ಶುಭಸಂಖ್ಯೆ:3
ಮೀನ: ಕೋರ್ಟ್ ಕೆಲಸ ವಿಳಂಬವಾದೀತು. ತಾಯಿಯ ಆರೋಗ್ಯದಲ್ಲಿ ಏರುಪೇರು. ವಕೀಲರಿಗೆ ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:6