ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಯತ್ನ ಕೆಲಸದಲ್ಲಿ ಜಯ ಸಿಗಲಿದೆ

Nitya Bhavisya Vijayavani
Published on

ಮೇಷ:ಸಂಬಂಧಿಗಳಿಂದ ಪಿತೂರಿಗೆ ಒಳಗಾಗುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮಾನಸಿಕ ವೇದನೆ ಹೆಚ್ಚಾಗಲಿದೆ. ಶುಭಸಂಖ್ಯೆ: 9

ವೃಷಭ: ಪತ್ನಿಯ ಆರೋಗ್ಯದಲ್ಲಿ ಏರುಪೇರು. ಸಹೋದರ ನೊಂದಿಗೆ ಕಲಹ. ಹಿರಿಯರ ಉಪದೇಶದಿಂದ ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 1

ಮಿಥುನ: ಕುಟುಂಬದಲ್ಲಿ ಅನರ್ಥ ಸಂಭವಿಸುವ ಸಾಧ್ಯತೆಯಿದೆ, ಹುಷಾರು. ವಾಹನ ಚಾಲಕರು ಜಾಗ್ರತೆ ವಹಿಸಿ. ಹೊಸ ಸಮಸ್ಯೆಗಳು ಉದ್ಭವ. ಶುಭಸಂಖ್ಯೆ: 3

ಕಟಕ:ತೀರ್ಥಕ್ಷೇತ್ರ ಯಾತ್ರೆ ಸಾಧ್ಯತೆ. ಚಂಚಲ ಮನಸ್ಸಿನಿಂದ ಅವಕಾಶ ಕಳೆದುಕೊಳ್ಳುವಿರಿ. ವಿದೇಶ ಪ್ರಯಾಣಕ್ಕೆ ವೀಸಾ ಬರಲಿದೆ. ಶುಭಸಂಖ್ಯೆ: 7

ಸಿಂಹ:ಸಹೋದ್ಯೋಗಿಗಳಿಂದ ಪದವಿ ಕೈ ತಪ್ಪಲಿದೆ. ಮಾತೃ ಮೂಲವಾದ ಆಸ್ತಿಗಾಗಿ ಕಲಹ. ದಾಂಪತ್ಯ ಜೀವನಕ್ಕೆ ಕಾಲಿರಸಲಿದ್ದೀರಿ. ಶುಭಸಂಖ್ಯೆ: 7

ಕನ್ಯಾ: ಕಾಫಿ ತೋಟದ ಮಾಲೀಕರಿಗೆ ಉತ್ತಮ ಲಾಭ. ನೀಚ ಜನರಿಂದ ತೊಂದರೆ. ಕೃಷಿಯಲ್ಲಿ ಉತ್ತಮ ಆದಾಯ. ಸ್ತ್ರೀಯರಿಗೆ ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 3

ತುಲಾ:ಮಾನಸಿಕ ಒತ್ತಡ ಹೆಚ್ಚಾಗಲಿದೆ. ಹಿತಶತ್ರುಗಳಿಂದ ತೊಂದರೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಕಲಾವಿದರಿಗೆ ಸಂತಸ. ಶುಭಸಂಖ್ಯೆ: 3

ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಯತ್ನ ಕೆಲಸದಲ್ಲಿ ಜಯ ಸಿಗಲಿದೆ. ಶತ್ರುಗಳ ಜಾಲಕ್ಕೆ ಬೀಳುವಿರಿ, ಎಚ್ಚರದಿಂದಿರಿ. ಶುಭಸಂಖ್ಯೆ: 9

ಧನುಸ್ಸು: ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿಯಾಗುವುದು. ವಾದ-ವಿವಾದಗಳಲ್ಲಿ ಭಾಗಿಯಾಗುವುದು ಸೂಕ್ತವಲ್ಲ. ದೂರ ಪ್ರಯಾಣ ರದ್ದು. ಶುಭಸಂಖ್ಯೆ: 1

ಮಕರ: ಹಿರಿಯ ಅಧಿಕಾರಿಗಳೊಂದಿಗೆ ತಾಳ್ಮೆ ಅಗತ್ಯ. ಅಕಾಲ ಭೋಜನದಿಂದ ಅನಾರೋಗ್ಯ. ಭೂ ವ್ಯವಹಾರದಲ್ಲಿ ಕಿರಿಕಿರಿಯಾಗುವುದು. ಶುಭಸಂಖ್ಯೆ: 7

ಕುಂಭ: ವಸ್ತ್ರ ಖರೀದಿಗೆ ಅಧಿಕ ಖರ್ಚು, ಹೊಸ ಉದ್ಯಮದಿಂದ ಅಲ್ಪ ಆದಾಯ. ಆದಾಯ ತೆರಿಗೆ ಸಲ್ಲಿಕೆಯ ಕೆಲಸ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ: 6

ಮೀನ:ಆದಾಯ ತೆರಿಗೆ ಅಧಿಕಾರಿಗಳ ಜೊತೆ ಚರ್ಚೆ. ಮಾತಾಪಿತರ ಬಗೆಗಿನ ಪ್ರೀತಿ ಹೆಚ್ಚಾಗಲಿದೆ. ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net