

ಮೇಷ: ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಧನವ್ಯಯವಾಗಿ, ಹಣಕಾಸಿನ ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ. ಸ್ನೇಹದಲ್ಲಿ ಬಿರುಕು ಮೂಡೀತು. ಶುಭಸಂಖ್ಯೆ: 5
ವೃಷಭ: ಅನಾರೋಗ್ಯದಿಂದಾಗಿ ಶಸ್ತ್ರಚಿಕಿತ್ಸೆ ಅಗತ್ಯವಾದೀತು. ಹೊಸ ಯೋಜನೆ ಕೈಗೂಡಲಿದೆ. ವೃತ್ತಿ ಸಂಬಂಧ ಗಂಭೀರ ಚಿಂತನೆ ಅಗತ್ಯ. ಶುಭಸಂಖ್ಯೆ: 8
ಮಿಥುನ: ಸ್ನೇಹಿತರೊಬ್ಬರು ವಿಭಿನ್ನ ರೀತಿಯ ಕೆಲಸವೊಂದನ್ನು ನಿಮಗೊಪ್ಪಿಸಲಿದ್ದು, ಅದು ಸಾಕಷ್ಟು ಆದಾಯ, ಹೆಸರನ್ನು ತರಲಿದೆ. ಶುಭಸಂಖ್ಯೆ: 4
ಕಟಕ: ಅಲಂಕಾರಿಕ ವಸ್ತುಗಳ ಮಾರಾಟಗಾರರು ಹಾಗೂ ದಲ್ಲಾಳಿಗಳಿಗೆ ಹೆಚ್ಚಿನ ಲಾಭ. ವಸ್ತ್ರ ವಿನ್ಯಾಸದ ಕೆಲಸಗಳಿಂದ ಹೇರಳ ಆದಾಯ. ಶುಭಸಂಖ್ಯೆ: 7
ಸಿಂಹ: ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿವೆ. ಎಲೆಕ್ಟ್ರಾನಿಕ್ ವಸ್ತು, ಖಾದ್ಯ ತೈಲ ವ್ಯಾಪಾರಿಗಳು ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಶುಭಸಂಖ್ಯೆ: 2
ಕನ್ಯಾ: ಯೋಜನೆ ವಿಳಂಬವಾಗುವ ಸಾಧ್ಯತೆ. ಗುರುಗಳ ಉಪದೇಶ ಬದುಕಿಗೆ ದಾರಿದೀಪವಾಗಲಿದೆ. ಧಾರ್ವಿುಕ ವ್ಯಕ್ತಿಗಳಿಗೆ ಒತ್ತಡ. ಶುಭಸಂಖ್ಯೆ: 9
ತುಲಾ: ಅಭಿರುಚಿಗೆ ಹತ್ತಿರವಾದವರ ಜತೆ ವ್ಯವಹರಿಸುವುದು ಉತ್ತಮ. ದಾಯಾದಿಗಳ ಉಪಟಳ. ದುರ್ಘಟನೆಯ ನೋವು ಕಾಡಲಿದೆೆ. ಶುಭಸಂಖ್ಯೆ:1
ವೃಶ್ಚಿಕ: ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಲಾಭವಾಗಲಿದೆ. ದಾಂಪತ್ಯದಲ್ಲಿ ಮಧುರ ಬಾಂಧವ್ಯ ಮೂಡಲಿದ್ದು, ನೆಮ್ಮದಿಯನ್ನು ತರಲಿದೆ. ಶುಭಸಂಖ್ಯೆ:4
ಧನುಸ್ಸು: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಹಾಗೂ ಖಾದ್ಯ ತೈಲ ವ್ಯಾಪಾರಿಗಳಿಗೆ ಲಾಭವವಿದೆ. ಯೋಜನೆಗಳು ವಿಳಂಬವಾಗುವವು. ಶುಭಸಂಖ್ಯೆ:2
ಮಕರ: ಗುರುಗಳ ಉಪದೇಶವು ಬದುಕಿಗೆ ದಾರಿದೀಪ. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಸಮಾಧಾನ. ಶುಭಸಂಖ್ಯೆ: 1
ಕುಂಭ: ದಾಯಾದಿಗಳ ವೈರತ್ವ ಹೆಚ್ಚಾಗುವ ಸಂಭವವಿದೆ, ಸರ್ಕಾರಿ ನೌಕರರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಜಾಸ್ತಿಯಿದೆ. ಶುಭಸಂಖ್ಯೆ: 3
ಮೀನ: ಹಿರಿಯರ ಆಶೀರ್ವಾದದಿಂದ ಇಷ್ಟಸಿದ್ಧಿ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಲಾಭ. ದಾಂಪತ್ಯದಲ್ಲಿ ಮಧುರ ಬಾಂಧವ್ಯ ಮೂಡಲಿದೆ. ಶುಭಸಂಖ್ಯೆ: 6