ದಿನ ಭವಿಷ್ಯ: ಈ ರಾಶಿಯವರಿಗಿಂದು ಅನಗತ್ಯ ಖರ್ಚು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ

Nitya-Bhavishya-vvani-1-2-1-1
Published on

ಮೇಷ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕೆಲಸಗಾರ ರಿಂದ ತೊಂದರೆಯಾದೀತು. ಗೊಂದಲಗಳಿಂದ ದೂರವಿರುವುದು ಸೂಕ್ತ. ಶುಭಸಂಖ್ಯೆ: 5

ವೃಷಭ: ಪಾಲುದಾರಿಕೆಯಲ್ಲಿ ಅಭಿವೃದ್ಧಿ ಕುಂಠಿತ. ಅಮೂಲ್ಯ ವಸ್ತು ಕಳ್ಳತನವಾಗಲಿದೆ. ತೀರ್ಥ ಯಾತ್ರಾ ದರ್ಶನ, ಸ್ಥಳ ಬದಲಾವಣೆ. ಶುಭಸಂಖ್ಯೆ:1

ಮಿಥುನ: ಆಪ್ತರ ಹಿತ ಕಾಪಾಡಿ. ಕಾರ್ಯಕ್ಷೇತ್ರದಲ್ಲಿ ತೊಂದರೆ. ಸಲ್ಲದ ಅಪವಾದ. ಅನಾರೋಗ್ಯ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ:7

ಕಟಕ: ಯತ್ನ ಕಾರ್ಯದಲ್ಲಿ ಜಯ. ಪರರ ಕಷ್ಟಗಳಲ್ಲಿ ಭಾಗಿಯಾಗುವಿರಿ. ವಿವಾಹ ಯೋಗವಿದೆ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ:8

ಸಿಂಹ: ಕೋರ್ಟ್ ಕೆಲಸದಲ್ಲಿ ವಿಳಂಬ. ಸ್ತ್ರೀಯರಿಗೆ ಖರೀದಿಯಲ್ಲಿ ಮೋಸ. ವೃದ್ಧರಿಗೆ ಮನಶಾಂತಿ. ಮಾತಿನ ಚಕಮಕಿ. ಕುಟುಂಬ ಸೌಖ್ಯ. ಶುಭಸಂಖ್ಯೆ:1

ಕನ್ಯಾ: ಮಾನಸಿಕ ಒತ್ತಡ. ವ್ಯವಹಾರದ ಸ್ಥಳ ಬದಲಾವಣೆಯಾದೀತು. ಗುರು ಹಿರಿಯರ ಭೇಟಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 7

ತುಲಾ: ಮಕ್ಕಳಿಗಾಗಿ ಹೆಚ್ಚು ಹಣ ಖರ್ಚುಮಾಡಬೇಕಾಗು ವುದು. ವಾದ ವಿವಾದದಲ್ಲಿ ಎಚ್ಚರ. ಸಿವಿಲ್ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ. ಶುಭಸಂಖ್ಯೆ:9

ವೃಶ್ಚಿಕ: ಅನಗತ್ಯ ಖರ್ಚು. ಉದ್ಯೋಗದಲ್ಲಿ ಬಡ್ತಿ. ಭೂ ಲಾಭ. ಅನಾರೋಗ್ಯ ಕಾಡುವುದು. ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ. ಶುಭಸಂಖ್ಯೆ:2

ಧನುಸ್ಸು: ಶ್ರಮಕ್ಕೆ ತಕ್ಕ ಫಲ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಸ್ವಯಂಕೃತ ಅಪರಾಧದಿಂದ ವ್ಯಥೆ. ಶೈಕ್ಷಣಿಕ ಕ್ಷೇತ್ರದವರಿಗೆ ವರ್ಗಾವಣೆ. ಶುಭಸಂಖ್ಯೆ:1

ಮಕರ: ಹೊಸ ಪ್ರಯತ್ನದಿಂದ ಕಾರ್ಯಾನುಕೂಲವಿದೆ. ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ. ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವಿರಿ.ಶುಭಸಂಖ್ಯೆ:8

ಕುಂಭ: ಕಾರ್ಯ ವಿಕಲ್ಪ. ಆಲಸ್ಯ ಮನೋಭಾವ. ವಿಪರೀತ ವ್ಯಸನ, ರೋಗ ಬಾಧೆ. ಅಧಿಕ ತಿರುಗಾಟ. ವ್ಯಾಪಾರದಲ್ಲಿ ನಷ್ಟವಾದೀತು. ಶುಭಸಂಖ್ಯೆ: 4

ಮೀನ: ವಾಸಗೃಹದಲ್ಲಿ ತೊಂದರೆ ಉಂಟಾದೀತು. ನೆಮ್ಮದಿಯ ಕೊರತೆ. ಕೃಷಿ ಉಪಕರಣಗಳ ಖರೀದಿಯಲ್ಲಿ ಲಾಭ. ಅತಿಯಾದ ಭಯ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net