

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ. ಹೊಸ ಉದ್ಯಮದ ಯೋಚನೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಶುಭಸಂಖ್ಯೆ: 5
ವೃಷಭ: ರಾಜಕಾರಣಿಗಳು ಕೆಲಸದಲ್ಲಿ ಎಚ್ಚರದಿಂದಿರಿ. ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ವಜ್ರ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ:1
ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಗಮನಹರಿಸಿ. ನೀರಿನಿಂದ ಆರೋಗ್ಯದಲ್ಲಿ ವ್ಯತ್ಯಾಸ. ವಿದೇಶಿ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ:9
ಕಟಕ: ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಕಮಿಷನ್ ವ್ಯವಹಾರ ಅಬಾಧಿತ. ತಾಂತ್ರಿಕ ಪರಿಣಿತರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 3
ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ:7
ಕನ್ಯಾ: ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನಿರೀಕ್ಷಿತ ಲಾಭ, ವಿದೇಶಿ ವ್ಯಾಪಾರಸ್ಥರಿಗೆ ಅಭಿವೃದ್ಧಿ. ರಾಜಕೀಯ ನಾಯಕರಿಗೆ ಪಶ್ಚಾತ್ತಾಪ. ಶುಭಸಂಖ್ಯೆ:3
ತುಲಾ: ಕೃಷಿ ಉತ್ಪನ್ನಗಳಿಗೆ ಉತ್ತಮ ಲಾಭ. ಆಭರಣ ವ್ಯಾಪಾರಸ್ಥರಿಗೆ ನಷ್ಟವಾಗುವುದು. ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಶುಭಸಂಖ್ಯೆ:8
ವೃಶ್ಚಿಕ: ಸ್ಥಿರಾಸ್ತಿಯನ್ನು ಹೊಂದುವ ಅವಕಾಶ ಒದಗಿ ಬರಲಿದೆ. ಮಹಿಳೆಯರಿಗೆ ಆತ್ಮವಿಶ್ವಾಸ ವೃದ್ದಿ. ಟೆಕ್ನಾಲಜಿ ಪರಿಣಿತರಿಗೆ ಲಾಭ. ಶುಭಸಂಖ್ಯೆ:3
ಧನುಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ. ನಿಮ್ಮ ಪ್ರಮುಖ ನಿರ್ಧಾರಕ್ಕೆ ಹಿರಿಯರ ಮಾರ್ಗದರ್ಶನವಿರಲಿ. ತಂದೆಯಿಂದ ಧನಸಹಾಯ. ಶುಭಸಂಖ್ಯೆ:5
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಸ್ಥರಿಗೆ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ:2
ಕುಂಭ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ. ದೈನಂದಿನ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ:6
ಮೀನ: ಉಪನ್ಯಾಸಕರಿಗೆ ವರ್ಗಾವಣೆ ಸಾಧ್ಯತೆ. ಅತಿಕೋಪದಿಂದ ಕುಟುಂಬದಲ್ಲಿ ಅನರ್ಥವಾದೀತು. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ:7