ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆದಾಯ ಬರುವುದು

Nitya Bhavisya Vijayavani
Published on

ಮೇಷ: ಬರಹಗಾರರಿಗೆ ಅನಿರೀಕ್ಷಿತ ಪೋ›ತ್ಸಾಹ ಸಿಗಲಿದೆ. ಸ್ವಂತ ಉದ್ಯೋಗದಲ್ಲಿ ಆದಾಯ ಬರುವುದು. ಶೀತಸಂಬಂಧಿ ರೋಗ ಕಾಡಲಿದೆ. ಶುಭಸಂಖ್ಯೆ: 5

ವೃಷಭ: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವರು. ಹಣಕಾಸಿನ ಸಂಸ್ಥೆಯವರಿಗೆ ಲಾಭ, ಮಕ್ಕಳಿಂದ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 1

ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಓಡಾಟ. ಅಲಂಕಾರಿಕ ವಸ್ತು ಖರೀದಿ. ಶುಭಸಂಖ್ಯೆ:2

ಕಟಕ: ಸ್ಥಗಿತ ಕಾರ್ಯಗಳು ಮುಂದುವರಿಯುತ್ತವೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ. ಸ್ತ್ರೀಯರು ಹೇಳಿಕೆ ಮಾತನ್ನು ಕೇಳಬಾರದು. ಶುಭಸಂಖ್ಯೆ:6

ಸಿಂಹ: ದಿನಸಿ ವ್ಯಾಪಾರಸ್ಥರಿಗೆ ಕಳ್ಳತನದ ಭಯ. ಟ್ಯೂಷನ್ ನಡೆಸುತ್ತಿರುವವರಿಗೆ ಶುಭದಿನ. ಬೆಂಕಿ ಅಪಘಾತವಾಗುವ ಸಂಭವ. ಶುಭಸಂಖ್ಯೆ: 5

ಕನ್ಯಾ: ಆಭರಣ ವ್ಯಾಪಾರಿಗಳಿಗೆ ಶುಭ. ಕೃಷಿಯ ಉತ್ಪನ್ನಗಳ ಮಾರಾಟಸ್ಥರಿಗೆ ಲಾಭ. ವಿದ್ಯಾರ್ಥಿಗಳಿಗೆ ಅನಾರೋಗ್ಯದಿಂದ ತೊಂದರೆ. ಶುಭಸಂಖ್ಯೆ: 3

ತುಲಾ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಕಟ್ಟಡ ನಿರ್ವಣದಲ್ಲಿ ಇರುವವರಿಗೆ ಲಾಭ. ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸಿ.ಶುಭಸಂಖ್ಯೆ: 6

ವೃಶ್ಚಿಕ: ಬಂಧುಗಳೊಡನೆ ಬಾಂಧವ್ಯ ವೃದ್ಧಿಸುವುದು. ವ್ಯವಹಾರದಲ್ಲಿ ಎಚ್ಚರ ವಹಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಶುಭಸಂಖ್ಯೆ:3

ಧನುಸ್ಸು: ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ ಕಳೆಗಟ್ಟಲಿದೆ. ದುರಭ್ಯಾಸಕ್ಕೆ ಹಣವ್ಯಯ.ಶುಭಸಂಖ್ಯೆ:3

ಮಕರ: ಸ್ನೇಹಕ್ಕಾಗಿ ವಿಪರೀತ ಖರ್ಚು ಮಾಡುವಿರಿ. ಅಮೂಲ್ಯ ವಸ್ತುಗಳ ಕಳವಾದೀತು, ಎಚ್ಚರ. ಮಕ್ಕಳಿಗಾಗಿ ದೂರ ಪ್ರವಾಸ. ಶುಭಸಂಖ್ಯೆ:1

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ವಿನಾಕಾರಣ ಸಿಟ್ಟು ಬೇಡ. ಹಿರಿಯರ ಆಶೀರ್ವಾದದಿಂದ ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 4

ಮೀನ: ಸಣ್ಣಪುಟ್ಟ ವಿಷಯಗಳಿಗಾಗಿ ಕಲಹ ಉಂಟಾಗ ಬಹುದು. ಕೌಟುಂಬಿಕ ಚಿಂತೆ ಕಾಡುವುದು. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net