

ಮೇಷ: ಯೋಜನೆಗಳು ಕಾರ್ಯಗತವಾಗಲಿವೆ ಕೌಟುಂಬಿಕ ವಿವಾದಗಳಲ್ಲಿ ರಾಜಿ. ಮಹಿಳೆಯರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ:1
ವೃಷಭ: ಸಹೋದ್ಯೋಗಿಗಳಿಂದ ನಿಂದನೆ ಸಾಧ್ಯತೆ. ಪಾರಂಪರಿಕ ವೃತ್ತಿಯಲ್ಲಿ ಆದಾಯವಿದೆ. ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರ. ಶುಭಸಂಖ್ಯೆ: 7
ಮಿಥುನ: ಕುಟುಂಬದಲ್ಲಿ ಸಂತೋಷಕೂಟ. ಭೂ ವ್ಯವಹಾರ ದಲ್ಲಿ ಎಚ್ಚರಿಕೆಯಿಂದಿರಿ. ಸ್ನೇಹಿತರಿಗೋಸ್ಕರ ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ:3
ಕಟಕ: ದೂರ ಪ್ರಯಾಣ ಮಾಡಬೇಕಾಗುವುದು. ಅನಿರೀಕ್ಷಿತ ಧನಾಗಮನ. ವಿವಾಹದ ಪ್ರಯತ್ನಗಳಿಗೆ ಫಲ ದೊರೆತು ಸಮಾಧಾನ. ಶುಭಸಂಖ್ಯೆ: 2
ಸಿಂಹ: ಶ್ರಮಕ್ಕೆ ತಕ್ಕ ಪ್ರತಿಫಲ. ನೆರೆಹೊರೆಯವರೊಂದಿಗೆ ಸ್ನೇಹದಿಂದ ಇರುವಿರಿ. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ.ಶುಭಸಂಖ್ಯೆ:1
ಕನ್ಯಾ: ಪತಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುತ್ತವೆ. ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 9
ತುಲಾ: ದಾಂಪತ್ಯದ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋಗಲು ಬಿಡಬೇಡಿ. ಆಹಾರದಲ್ಲಿ ವ್ಯತ್ಯಾಸ. ಪುಟ್ಟ ಅಗ್ನಿ ಅನಾಹುತ ಸಾಧ್ಯತೆ. ಶುಭಸಂಖ್ಯೆ: 5
ವೃಶ್ಚಿಕ: ಹಳೆ ಸ್ನೇಹಿತೆಯ ಭೇಟಿ. ದೀರ್ಘಕಾಲಿನ ವ್ಯಾಧಿ ನಿವಾರಣೆ. ವಿವಾಹಕ್ಕೆ ಚಾಲನೆ. ಆಧ್ಯಾತ್ಮಿಕ ಚಿಂತಕರಿಂದ ಮಾರ್ಗದರ್ಶನ. ಶುಭಸಂಖ್ಯೆ:3
ಧನುಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ. ಐಟಿ ಉದ್ಯೋಗಿಗಳಿಗೆ ಒತ್ತಡ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು. ಕ್ರೀಡಾಪಟುಗಳಿಗೆ ಶುಭ.ಶುಭಸಂಖ್ಯೆ:6
ಮಕರ: ಸಗಟು ವ್ಯಾಪಾರದಲ್ಲಿ ಲಾಭ. ಆಂತರಿಕ ಶತ್ರುಗಳಿರು ತ್ತಾರೆ, ಹುಷಾರು. ಸಂಗಾತಿಯಲ್ಲಿ ಅಸಮಾಧಾನ. ಆಸ್ತಿ ಖರೀದಿ ಯೋಜನೆ. ಶುಭಸಂಖ್ಯೆ:9
ಕುಂಭ: ಪೋಷಕರೊಂದಿಗೆ ಉತ್ತಮ ಬಾಂಧವ್ಯ. ನಿರೀಕ್ಷಿತ ಕಾರ್ಯ ನೆರವೇರುತ್ತದೆ. ವಾಹನಗಳ ಬಿಡಿಭಾಗಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2
ಮೀನ: ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ಬ್ಯಾಂಕ್ ಕೆಲಸಗಳಲ್ಲಿ ಪ್ರಗತಿಯಾಗುವುದು. ವಿವಾದಾಸ್ಪದ ವಿಷಯಗಳಲ್ಲಿ ಎಚ್ಚರಿಕೆ. ಶುಭಸಂಖ್ಯೆ: 5