

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲವಾಗಲಿದೆ. ಕುಟುಂಬದಲ್ಲಿ ಅಪಮಾನ. ನಿಂದನೆ. ಆತ್ಮಗೌರವಕ್ಕಾಗಿ ಬಂದುಗಳಿಂದ ದೂರ. ಶುಭಸಂಖ್ಯೆ:1
ವೃಷಭ: ಬಂಧುಗಳೊಂದಿಗೆ ಮನಸ್ತಾಪ ಆಗಬಹುದು. ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 2
ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ಅನಾರೋಗ್ಯ. ಪ್ರೀತಿಯ ವಿಷಯದಲ್ಲಿ ಬೇಸರ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 8
ಕಟಕ: ನಂಬಿದವರಿಂದಲೇ ಆರ್ಥಿಕವಾಗಿ ಮೋಸ. ಭೂಮಿ, ವಾಹನ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಶುಭಸಂಖ್ಯೆ:7
ಸಿಂಹ: ವೃತ್ತಿ ಕ್ಷೇತ್ರದ ಸ್ಥಳದಲ್ಲಿ ಸಮಸ್ಯೆ. ದೈಹಿಕ, ಮಾನಸಿಕ ತೊಂದರೆ. ಮಕ್ಕಳು ಹಾಗೂ ಸಂಗಾತಿಯ ನಡವಳಿಕೆಯಿಂದ ಕಿರಿಕಿರಿ. ಶುಭಸಂಖ್ಯೆ: 6
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವ್ಯವಹಾರದಲ್ಲಿ ನಷ್ಟ. ಸ್ತ್ರೀಯರಿಗೆ ಆಭರಣ ಲಾಭ. ಶುಭಸಂಖ್ಯೆ: 5
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾದಾರು. ಆತ್ಮಗೌರವಕ್ಕೆ ಚ್ಯುತಿಯಾದೀತು. ಇಷ್ಟದೇವರನ್ನು ನಂಬಿದರೆ ಉತ್ತಮ ಅವಕಾಶ. ಶುಭಸಂಖ್ಯೆ: 9
ವೃಶ್ಚಿಕ: ದುರಾಲೋಚನೆಗಳು ದಾರಿತಪ್ಪಿಸಬಹುದು. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ.ಶುಭಸಂಖ್ಯೆ: 1
ಧನುಸ್ಸು: ಆತ್ಮೀಯರಿಂದ ಸಾಲದ ಸಹಾಯ. ಶುಭ ಕಾರ್ಯಗಳಲ್ಲಿ ನಿರಾಸಕ್ತಿ. ಸರ್ಕಾರಿ ಪ್ರಾಯೋಜಿತ ವ್ಯಾಪಾರಸ್ಥರಿಗೆ ನಿಂದನೆಯ ಭೀತಿ. ಶುಭಸಂಖ್ಯೆ: 5
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆಗಳು ಪರಿಹಾರ ಆಗಲಿವೆ. ಪ್ರೀತಿಪಾತ್ರರು ದೂರ. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 2
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆ, ಆತಂಕ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ:5
ಮೀನ: ಕೆಲಸದಲ್ಲಿ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿಗಳು ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಸೂಕ್ತ ಪರಿಹಾರ ಸಿಗಲಿದೆ. ಶುಭಸಂಖ್ಯೆ: 8