

ಮೇಷ: ಹಿರಿಯ ಅಧಿಕಾರಿಗಳು ನಿಮ್ಮಯೋಚನೆ ಇಷ್ಟ ಪಡುತ್ತಾರೆ. ನ್ಯಾಯವಾದಿಗಳಿಗೆ ವೈಫಲ್ಯ. ಹಾಸ್ಯ, ಕಥೆ ಬರಹಗಾರರಿಗೆ ಶುಭ ದಿನ. ಶುಭಸಂಖ್ಯೆ: 3
ವೃಶಭ: ಸಿಟ್ಟು ನಿಮ್ಮ ಏಕಾಂಗಿತನಕ್ಕೆ ಕಾರಣವಾಗುವುದು. ಮದುವೆಯ ವಿಷಯಕ್ಕೆ ಅಣ್ಣಂದಿರ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ:5
ಮಿಥುನ: ಮೇಲಧಿಕಾರಿಗಳಿಂದ ಒತ್ತಡ. ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಕಾರ್ಯ ಸಾಧನೆಯಲ್ಲಿ ಅನುಕೂಲ. ಖರೀದಿಯಲ್ಲಿ ಮೋಸ.ಶುಭಸಂಖ್ಯೆ: 2
ಕಟಕ: ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳಲಿದೆ. ವೃತ್ತಿ ಬದಲಾಯಿಸುವ ಯೋಚನೆ ಮುಂದೂಡುವುದು ಉತ್ತಮ. ಶುಭಸಂಖ್ಯೆ: 6
ಸಿಂಹ: ಜವಾಬ್ದಾರಿಗಳತ್ತ ಹೆಚ್ಚಿನ ಗಮನ ಹರಿಸಿ, ಆತಂಕವಿಲ್ಲದೆ ಕೆಲಸಕಾರ್ಯಗಳು ಸುಸೂತ್ರವಾಗಿ ನಡೆಯುವವು. ಕುಟುಂಬದ ಜತೆಗಿರಿ. ಶುಭಸಂಖ್ಯೆ:1
ಕನ್ಯಾ: ಸದ್ಯದ ಪರಿಸ್ಥಿತಿಯಲ್ಲಿ ಹಣದ ಬಗ್ಗೆ ಯೋಚಿಸಬೇಕಾ ಗಿಲ್ಲ. ಜಾಹೀರಾತು ಕ್ಷೇತ್ರದಿಂದ ಉತ್ತಮ ಅವಕಾಶ ಲಭ್ಯ. ಆಕಸ್ಮಿಕ ಧನಲಾಭ.ಶುಭಸಂಖ್ಯೆ: 9
ತುಲಾ: ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಂಡು ನಷ್ಟ ಆಗಲಿದೆ. ಸಹೋದ್ಯೋಗಿಗಳಿಂದ ಸಹಾಯ. ಮಕ್ಕಳ ವಿಚಾರದಲ್ಲಿ ಘರ್ಷಣೆ. ಶುಭಸಂಖ್ಯೆ: 4
ವೃಶ್ಚಿಕ: ನೀವು ಕೈಗೊಳ್ಳಲಿರುವ ನಿರ್ಧಾರ ಮನೆಯವರಿಗೆ ತಿಳಿದಿರಲಿ. ಅವಿವಾಹಿತರಿಗೆ ವಿವಾಹ ಸಿದ್ದಿ. ರಂಗ ಕಲಾವಿದರಿಗೆ ಗೌರವ ಸಿಗಲಿದೆ.ಶುಭಸಂಖ್ಯೆ: 6
ಧನುಸ್ಸು: ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಿ. ಮೇಲಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ. ಪದವಿ ಪ್ರಾಪ್ತಿಯಲ್ಲಿ ತೊಂದರೆ. ಶುಭಸಂಖ್ಯೆ:4
ಮಕರ: ಹಿಂಜರಿಕೆಯ ಸ್ವಭಾವ ಹಿನ್ನಡೆಗೆ ಕಾರಣವಾಗಿದೆ. ಕುಟುಂಬದ ಕಾಳಜಿ ಸಂತೃಪ್ತಿ ತರುವುದು. ಔಷಧ ಮಾರಾಟದಿಂದ ಲಾಭ. ಶುಭಸಂಖ್ಯೆ:6
ಕುಂಭ: ಅವಿವಾಹಿತರಿಗೆ ವಿವಾಹ ಯೋಗ. ಎಲ್ಲ ವೃತ್ತಿಪರ ವಿಷಯಗಳನ್ನೂ ಇಂದು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಶುಭಸಂಖ್ಯೆ: 9
ಮೀನ: ನೀವಂದುಕೊಂಡಷ್ಟು ನಿಮ್ಮ ಪರಿಸ್ಥಿತಿ ಕೆಟ್ಟದಾಗಿಲ್ಲ. ಲಾಭದ ಉದ್ದೇಶವಿದ್ದಲ್ಲಿ ಸ್ವಲ್ಪ ಕಾಯಬೇಕಾಗುವುದು. ಷೇರಿನಿಂದ ವರಮಾನ. ಶುಭಸಂಖ್ಯೆ: 7