

ಮೇಷ:ಕೋರ್ಟ್ ಕೇಸುಗಳಲ್ಲಿ ಜಯ. ಆರೋಗ್ಯ ಸಮಸ್ಯೆ ಕಾಣಿಸುವುದು. ಬಂಧುಗಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಶುಭಸಂಖ್ಯೆ: 9
ವೃಷಭ:ಸ್ವಂತ ಉದ್ಯಮ, ಉದ್ಯೋಗದಲ್ಲಿ ಇರುವವರಿಗೆ ಅನುಕೂಲ. ನೆರೆಹೊರೆಯವರಿಂದ ಅಪನಿಂದನೆ, ಅಪಕೀರ್ತಿ ಬರಬಹುದು. ಶುಭಸಂಖ್ಯೆ: 1
ಮಿಥುನ:ಸ್ಥಿರಾಸ್ತಿ ಮಾರಾಟದಿಂದ ನಷ್ಟ. ತಂದೆಯ ಬಂಧುಗಳಿಂದ ಆರ್ಥಿಕ ಸಹಾಯ. ಸರ್ಕಾರದಿಂದ ಅನುಕೂಲ. ಆತಂಕದ ಬೆಳವಣಿಗೆ. ಶುಭಸಂಖ್ಯೆ:1
ಕಟಕ:ಬಂಧುಬಾಂಧವರ ಭೇಟಿ. ಸೋದರ ಮಾವನಿಂದ ಅನಿರೀಕ್ಷಿತ ಲಾಭವಾಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯವಿದೆ. ಶುಭಸಂಖ್ಯೆ:8
ಸಿಂಹ:ತಂದೆಯಿಂದ ಧನಾಗಮನ. ಸರ್ಕಾರಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ಬಡ್ತಿ. ಕೆಲಸಕ್ಕೆಂದು ಕೊಟ್ಟ ಹಣಕ್ಕೆ ಮೋಸ. ಶುಭಸಂಖ್ಯೆ:2
ಕನ್ಯಾ:ಸ್ವಂತ ಕೆಲಸಗಳಿಗೆ ಸರ್ಕಾರಿ ಅಧಿಕಾರಿಗಳಿಂದ ತಡೆ, ಪೂರ್ವಜರ ಆಸ್ತಿ ಹಣ ಆಕಸ್ಮಿಕವಾಗಿ ಲಭಿಸುವುದು, ಅಕ್ರಮ ಹಣಗಳಿಕೆ ಯೋಚನೆ. ಶುಭಸಂಖ್ಯೆ:7
ತುಲಾ: ಉದ್ಯೋಗ ನಷ್ಟವಾಗಬಹುದು. ದಾಂಪತ್ಯ ಕಲಹಗಳಿಂದ ನಿದ್ರಾಭಂಗ. ಆಕಸ್ಮಿಕ ಪ್ರಯಾಣ ಮತ್ತು ಉತ್ತಮ ಅವಕಾಶ ಲಭ್ಯ. ಶುಭಸಂಖ್ಯೆ: 3
ವೃಶ್ಚಿಕ: ಸೇವಾವೃತ್ತಿಯ ಉದ್ಯೋಗ ಸಿಗಲಿದೆ. ಭೂವ್ಯಾಜ್ಯಗಳಿಂದ ಮುಕ್ತಿ ಸಿಗುವುದು. ಅಕ್ರಮ ಅಥವಾ ದೂರಾಲೋಚನೆಗಳಿಗೆ ಬಲಿ. ಶುಭಸಂಖ್ಯೆ:7
ಧನಸ್ಸು:ಸ್ನೇಹಿತರು ಶತ್ರುಗಳಾಗುವರು. ಉದ್ಯೋಗ ಸ್ಥಳದಲ್ಲಿ ಆತಂಕ ಕಾಡಲಿದೆ. ಮಕ್ಕಳಲ್ಲಿ ಅಹಂಭಾವ ಮೊಂಡುತನ ಕಾಣಿಸಬಹುದು.ಶುಭಸಂಖ್ಯೆ:1
ಮಕರ:ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವ ಸಾಧ್ಯತೆ. ತಂದೆಯಿಂದ ದೊಡ್ಡ ಮೊತ್ತದ ನೆರವು. ವಾಹನ ಅಪಘಾತ ಸಂಭವ, ಎಚ್ಚರ. ಶುಭಸಂಖ್ಯೆ:7
ಕುಂಭ:ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹಣ ಕೈ ಸೇರಲಿದೆ. ಸಂಗಾತಿಯ ಬಂಧುಗಳ ಆಗಮನ. ಸ್ಥಿರಾಸ್ತಿ ಅಥವಾ ವಾಹನ ಕೊಳ್ಳುವ ಯೋಗ. ಶುಭಸಂಖ್ಯೆ:6
ಮೀನ:ಆತ್ಮಗೌರವ ಮತ್ತು ಭಾವನೆಗಳಿಗೆ ಪೆಟ್ಟು. ಗಂಟಲು, ಬಾಯಿಗೆ ಸಂಬಂಧಪಟ್ಟ ತೊಂದರೆ ಸಾಧ್ಯತೆ. ಸಾಲದ ಹಣ ಮರುಪಾವತಿ. ಶುಭಸಂಖ್ಯೆ: 5