ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೊಸ ವಸ್ತುಗಳ ಖರೀದಿ ಯೋಗವಿದೆ

astrology
Published on

ಮೇಷ: ಜವಾಬ್ದಾರಿಗಳನ್ನು ಮರೆಯದಿರಿ. ಆತ್ಮಗೌರವವಕ್ಕೆ ಕುತ್ತು. ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 2

ವೃಷಭ: ಮಕ್ಕಳ ಆರೋಗ್ಯದತ್ತ ಗಮನಹರಿಸಿ. ಜೀವನೋಪಾಯಕ್ಕೆ ಸಿಕ್ಕ ಅವಕಾಶ ಬಳಸಿಕೊಳ್ಳಿ. ಕ್ರೀಡಾಪಟುಗಳಿಗೆ ತರಬೇತಿ ಶಿಬಿರ. ಶುಭಸಂಖ್ಯೆ: 9

ಮಿಥುನ: ದಿನಸಿ ವರ್ತಕರಿಗೆ ಲಾಭ. ಪ್ರಾಮಾಣಿಕ ಧಾರ್ವಿುಕ ಸಮಾರಂಭದಿಂದ ಮನಶ್ಶಾಂತಿ. ಪ್ರಮುಖ ನಿರ್ಧಾರಗಳಲ್ಲಿ ಆತುರ ಬೇಡ. ಶುಭಸಂಖ್ಯೆ:1

ಕಟಕ: ಕುಟಂಬದ ವ್ಯವಹಾರದಲ್ಲಿ ಶ್ರದ್ಧೆ ವಹಿಸುವಿರಿ. ಆರ್ಥಿಕ ಹರಿವು ನಿರೀಕ್ಷೆಯ ಮಟ್ಟದಲ್ಲಿರುತ್ತದೆ. ಕಾಫಿ ಕೃಷಿಕರಿಗೆ ಹಿನ್ನಡೆಯಾದೀತು . ಶುಭಸಂಖ್ಯೆ: 9

ಸಿಂಹ: ಸಿನಿಮಾ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಿಲ್ಲ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ, ಶುಭಸಂಖ್ಯೆ: 4

ಕನ್ಯಾ: ಕ್ಲಿಷ್ಟ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ. ರಚನಾತ್ಮಕ ಕೆಲಸದಲ್ಲಿ ಆಸಕ್ತಿ. ಪತ್ರಿಕೋದ್ಯಮಿಗಳು ಜಾಣ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ: 9

ತುಲಾ: ಹಣದ ಆಮಿಷಕ್ಕೆ ಒಳಗಾಗಿ ತೊಂದರೆ ಅನುಭವಿಸು ವಿರಿ. ಮಾನಸಿಕ ವ್ಯಥೆ ನಿವಾರಣೆ. ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ಶುಭಸಂಖ್ಯೆ: 6

ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ. ಲಲಿತ ಕಲಾವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗ. ತಂದೆಯೊಂದಿಗೆ ಮನಸ್ತಾಪ. ಶುಭಸಂಖ್ಯೆ: 7

ಧನುಸ್ಸು: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಗೃಹ ನಿರ್ಮಾಣ ಸಮಸ್ಯೆಗೆ ಮುಕ್ತಿ. ಸರ್ಕಾರಿ ಅಧಿಕಾರಿಗಳಿಂದ ಕೃಷಿ ಕೆಲಸಕ್ಕೆ ಸಹಾಯ. ಶುಭಸಂಖ್ಯೆ: 3

ಮಕರ: ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆಸ್ತಿ ಖರೀದಿ ಕಾರ್ಯಗಳಲ್ಲಿ ವಿಳಂಬ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 6

ಕುಂಭ: ಕೋರ್ಟ್ ದಾವೆಗಳು ನಿಮ್ಮ ವಿರುದ್ಧವಾಗಿರುತ್ತವೆ. ಬೆಂಕಿಯಿಂದ ಅಂತರ ಕಾಯ್ದುಕೊಳ್ಳಿ. ಹೊಸ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ: 1

ಮೀನ: ಸಾಲ ಮರುಪಾವತಿಸಲು ಬ್ಯಾಂಕಿನಿಂದ ಸಹಾಯ. ಹೊಸ ಯೋಜನೆಯನ್ನು ಮರುಪರಿಶೀಲಿಸಿ. ಗೃಹಾಲಂಕಾರವಸ್ತು ಖರೀದಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net