

ಮೇಷ: ಮಹಿಳೆಯರಿಗೆ ಆಭರಣ ಲಾಭ. ತಂದೆಗೆ ರೋಗಬಾಧೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ. ಅಕಾಲ ಮರಣದ ಸುದ್ದಿ. ಶುಭಸಂಖ್ಯೆ:9
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಫಲತೆ ಕಾಡಲಿದೆ. ಸಾಮಾನ್ಯ ಕೆಲಸದಲ್ಲಿ ಒತ್ತಡ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ. ಶುಭಸಂಖ್ಯೆ:3
ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರ. ಗೃಹೋಪಯೋಗಿ ವಸ್ತು ಖರೀದಿಗೆ ಅಧಿಕ ಖರ್ಚು. ಆಲಸ್ಯ ಮನೋಭಾವ. ಮಿತ್ರರಲ್ಲಿ ಮನಸ್ತಾಪ. ಶುಭಸಂಖ್ಯೆ: 8
ಕಟಕ: ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗ. ಸಮಾಜದಲ್ಲಿ ಗೌರವ. ಆಸ್ತಿ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ:2
ಸಿಂಹ: ಚಂಚಲ ಮನಸ್ಸಿನಿಂದ ಗೃಹ ನಿರ್ಮಾಣ ವಿಳಂಬ. ಹೋಟೆಲ್ ಉದ್ಯಮದಲ್ಲಿ ಆದಾಯ ಕಡಿಮೆ. ವಿವಾಹ ಕಾರ್ಯದಲ್ಲಿ ವಿಳಂಬ. ಶುಭಸಂಖ್ಯೆ: 7
ಕನ್ಯಾ: ಬಂಧುಗಳಿಗೆ ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರುವಿರಿ. ಆಕಸ್ಮಿಕ ಖರ್ಚು. ಅಡಕೆ ಕೃಷಿಕರಿಗೆ ಆದಾಯ. ಶುಭಸಂಖ್ಯೆ: 1
ತುಲಾ: ಸಲ್ಲದ ಅಪವಾದ. ಅನಾರೋಗ್ಯ. ದಾಯಾದಿಗಳಿಂದ ತೊಂದರೆ. ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 6
ವೃಶ್ಚಿಕ: ಗೆಳೆಯರಿಂದ ಅನರ್ಥವಾಗಬಹುದು. ದೃಷ್ಟಿ ದೋಷ ನಿವಾರಣೆಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಪ್ರಯಾಣಕ್ಕೆ ವಿಪರೀತ ಖರ್ಚು. ಶುಭಸಂಖ್ಯೆ: 3
ಧನುಸ್ಸು: ರಾಜಕಾರಣಿಗಳಿಗೆ ಅಧಿಕಾರ ಪ್ರಾಪ್ತಿ. ಶರೀರದಲ್ಲಿ ಆತಂಕ. ಚಂಚಲ ಮನಸ್ಸು. ಅನವಶ್ಯಕ ವಸ್ತುಗಳ ಖರೀದಿ. ಹಿರಿಯರ ಭೇಟಿ. ಶುಭಸಂಖ್ಯೆ:8
ಮಕರ: ರಾಜಕೀಯರಂಗದಲ್ಲಿ ಮುನ್ನಡೆ. ಅಧಿಕ ಕೆಲಸದಿಂದ ವಿಶ್ರಾಂತಿ. ಹೊಸ ಮಹಿಳಾ ಪಾಲುದಾರರ ಆಗಮನ. ತಾಳ್ಮೆಯಿಂದ ಇರಿ. ಶುಭಸಂಖ್ಯೆ:5
ಕುಂಭ: ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ಸುಳ್ಳು ಮಾತನಾಡುವಿರಿ. ಕೈಗಾರಿಕಾ ಉದ್ಯಮಿಗಳಿಗೆ ಲಾಭ.ಶುಭಸಂಖ್ಯೆ: 9
ಮೀನ: ದಾಖಲೆ ಪತ್ರಗಳ ಸಮಸ್ಯೆಯಿಂದ ನೋಂದಣಿ ವಿಳಂಬ. ಸ್ತ್ರೀಯರಿಗೆ ಚಿನ್ನಾಭರಣ ಯೋಗ. ವಿವಾಹದ ಮಾತುಕತೆ ಫಲಪ್ರದ.ಶುಭಸಂಖ್ಯೆ: 4