

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ. ರಾಜಕೀಯ ಕ್ಷೇತ್ರದಲ್ಲಿರುವವರು ಎಚ್ಚರ ವಹಿಸಿ. ಅವಿವಾಹಿತರಿಗೆ ಮದುವೆಗೆ ಇದು ಸಕಾಲವಾಗಿದೆ. ಶುಭಸಂಖ್ಯೆ: 5
ವೃಷಭ: ದೈಹಿಕ ಕಸರತ್ತಿನವರಿಗೆ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯ ಭೇಟಿಯಾಗುವುದು. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಬೇಡಿ. ಶುಭಸಂಖ್ಯೆ:1
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ಮನೆಯಲ್ಲಿ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಗಳಿಕೆಯಾಗುವುದು. ಶುಭಸಂಖ್ಯೆ:9
ಕಟಕ: ಮಗಳ ವಿವಾಹಕ್ಕೆ ಅಡ್ಡಿ ಉಂಟಾಗಬಹುದು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ಬದಲಿಸಲು ಇದು ಸೂಕ್ತ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7
ಕನ್ಯಾ: ಆಸ್ತಿ ಖರೀದಿ ಸಂಬಂಧ ತೀರ್ಮಾನಗಳಲ್ಲಿ ಎಚ್ಚರವಿರಲಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ವಣಕ್ಕೆ ಅನುಕೂಲ. ಶುಭಸಂಖ್ಯೆ: 4
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ಮನ್ನಣೆ ದೊರೆಯಲಿದೆ. ವಿಜ್ಞಾನಿಗಳಿಗೆ ಯಶಸ್ಸು, ಆರೋಗ್ಯದ ಕಡೆ ವಿಶೇಷ ಗಮನವಿರಲಿ. ಶುಭಸಂಖ್ಯೆ: 6
ವೃಶ್ಚಿಕ: ಔಷಧಿ ಮಾರಾಟ ಮಾಡುವವರಿಗೆ ಬೇಡಿಕೆ. ಮಹಿಳಾ ಅಧಿಕಾರಿಗಳೊಂದಿಗೆ ವಾದ, ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 5
ಧನಸ್ಸು: ಭತ್ತ ಮತ್ತು ಅಡಿಕೆ ಬೆಳೆಗಾರರಿಗೆ ಶ್ರಮಕ್ಕೆ ಯಶಸ್ಸು. ಹಿರಿಯ ಅಧಿಕಾರಿಗಳಿಂದ ಕಿರುಕುಳ. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 4
ಮಕರ: ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಯದೊತ್ತಡ ಇರಲಿದೆ. ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ. ಶುಭಸಂಖ್ಯೆ: 6
ಕುಂಭ: ಯಂತ್ರೋಪಕರಣಗಳಲ್ಲಿ ಖರೀದಿ. ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 2
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಉದ್ಯೋಗದ ಹುಡುಕಾಟದಲ್ಲಿ ಯಶಸ್ಸು. ಶುಭಸಂಖ್ಯೆ: 9