

ಮೇಷ:ಹೊಸ ಹುದ್ದೆಗೆ ಬಡ್ತಿ ಸಿಗಲಿದೆ. ಹಾಡುಗಾರರಿಗೆ ಗೌರವ ಕೀರ್ತಿ ದೊರೆಯುತ್ತದೆ. ಹಾಸ್ಯ ಸಂಭಾಷಣೆಕಾರರಿಗೆ ವಿಶೇಷ ದಿನ. ಶುಭಸಂಖ್ಯೆ: 9
ವೃಷಭ:ಖರ್ಚಿಗೆ ಸಾಕಾಗುವಷ್ಟು ಆದಾಯ ಬರಲಿದೆ. ಸಾಲ ಮರುಪಾವತಿ ಮಾಡುವಿರಿ. ಉದ್ಯೋಗದಲ್ಲಿ ಹೊಸ ಸಮಸ್ಯೆ. ಶುಭಸಂಖ್ಯೆ:7
ಮಿಥುನ:ಯಾರನ್ನೂ ಅತಿಯಾಗಿ ನಂಬಬೇಡಿ. ಮನಸ್ಸಿನಲ್ಲಿ ಅವ್ಯಕ್ತ ಭಯ. ಶತ್ರು ಬಾಧೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 1
ಕಟಕ:ಟ್ರಾವೆಲ್ಸ್ ಏಜೆನ್ಸಿಯವರಿಗೆ ವಾಹನದಿಂದ ಲಾಭವಿದೆ. ಮಕ್ಕಳ ನಡವಳಿಕೆಯಿಂದ ಆತಂಕ. ಸ್ವಂತ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ:3
ಸಿಂಹ:ಮನೆಯ ಹಿರಿಯರಿಗೆ ಚೇತರಿಕೆ. ಶತ್ರುಗಳನ್ನು ಜಯಿಸುವಿರಿ. ಸಂತಾನ ಪ್ರಾಪ್ತಿಯ ಸೂಚನೆ. ಚಿಕ್ಕ ಅಂಗಡಿಯವರಿಗೆ ಅಧಿಕ ಲಾಭ. ಶುಭಸಂಖ್ಯೆ: 8
ಕನ್ಯಾ:ನಿಮ್ಮ ಕಾರ್ಯ ವೈಖರಿಯಿಂದ ಸಂಸ್ಥೆಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಜನರಿಂದ ಪ್ರಶಂಸೆ. ಶುಭಸಂಖ್ಯೆ: 2
ತುಲಾ:ಧನಾಗಮನದಿಂದ ಸಮಾಧಾನ. ಸಾಹಸ ಕಲಾವಿದರಿಗೆ ಯಶಸ್ಸು. ಗೃಹ ಕೈಗಾರಿಕೆ ಸ್ಥಾಪನೆಗೆ ಸರ್ಕಾರದಿಂದ ಧನ ಸಹಾಯ. ಶುಭಸಂಖ್ಯೆ:4
ವೃಶ್ಚಿಕ:ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ಕಾಣಲಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಸವಾಲುಗಳಿಂದ ಕೆಲಸಕ್ಕೆ ಪ್ರೇರಣೆ. ಶುಭಸಂಖ್ಯೆ:2
ಧನುಸ್ಸು:ಶತ್ರುಗಳಿಂದ ನಿಮ್ಮ ಪ್ರಗತಿಗೆ ತೊಂದರೆಯಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಬಂಧುಗಳಿಂದ ಲಾಭ. ಶುಭಸಂಖ್ಯೆ:6
ಮಕರ:ಮಕ್ಕಳ ಪ್ರಗತಿಯಿಂದ ಸಂತಸವಾಗುವುದು. ಕೆಲಸದ ಒತ್ತಡದಿಂದಾಗಿ ಅನಾರೋಗ್ಯ ಸಮಸ್ಯೆ ತೀರ್ಥಕ್ಷೇತ್ರ ದರ್ಶನ. ಶುಭಸಂಖ್ಯೆ:6
ಕುಂಭ:ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಾಟ್ಯ ಕಲಾವಿದರು, ಚಿತ್ರಕಲಾವಿದರಿಗೆ ಉತ್ತಮ ಕೀರ್ತಿ, ಸನ್ಮಾನ ಸಿಗಲಿದೆ. ಶುಭಸಂಖ್ಯೆ: 1
ಮೀನ:ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಕುಟುಂಬದ ಸದಸ್ಯರೊಂದಿಗೆ ಕಾಲಹರಣ. ದೇಹಾಯಾಸ. ಆಸ್ಪತ್ರೆಗೆ ಸೇರುವ ಸಂದರ್ಭ. ಶುಭಸಂಖ್ಯೆ: 5