ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬಹುದಿನಗಳ ಆಸೆ ಈಡೇರಲಿದೆ

bhavishya
Published on

ಮೇಷ: ಸಹಕಾರಿ ಬ್ಯಾಂಕುಗಳ ನೌಕರರಿಗೆ ಉದ್ಯೋಗ ನಷ್ಟ. ಹಣ್ಣು, ತರಕಾರಿ ಖರೀದಿಯಲ್ಲಿ ಮೋಸ. ಬಹುದಿನಗಳ ಆಸೆ ಈಡೇರಲಿದೆ. ಶುಭಸಂಖ್ಯೆ: 8

ವೃಷಭ: ವ್ಯಾಪಾರದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಬಗೆಹರಿಯಲಿದೆ. ಮಹಿಳಾ ಉದ್ಯಮಿಗೆ ಪುರಸ್ಕಾರ. ಕ್ರೀಡಾಳುಗಳಿಗೆ ವಿದೇಶ ಪ್ರಯಾಣ.ಶುಭಸಂಖ್ಯೆ: 5

ಮಿಥುನ: ಸಹೋದ್ಯೋಗಿಗಳೊಂದಿಗೆ ವಿರಸ. ಆತ್ಮೀಯ ಸ್ನೇಹಿತನ ಭೇಟಿ. ಸೋಮಾರಿತನದಿಂದ ಸದವಕಾಶವನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ:8

ಕಟಕ: ಪತ್ರಕರ್ತರಿಗೆ ಮತ್ತು ಸಾಹಿತಿಗಳಿಗೆ ಶುಭದಿನ. ಮಧುಮೇಹ ರೋಗಿಗಳಿಗೆ ಚಿಕಿತ್ಸೆ ಸಾಧ್ಯತೆ. ಸಾಲಗಾರ ರಿಂದ ಕಿರಿಕಿರಿಯಾಗುವುದು. ಶುಭಸಂಖ್ಯೆ: 2

ಸಿಂಹ: ವೈದ್ಯರ ಸಲಹೆ ಪಾಲಿಸದೆ ಅನಾರೋಗ್ಯ. ವಸ್ತ್ರ ಖರೀದಿಯಲ್ಲಿ ಮೋಸವಾದೀತು. ಆಸ್ತಿ ವಿಚಾರ ಕೋರ್ಟ್ ಮೆಟ್ಟಿಲೇರುವುದು. ಶುಭಸಂಖ್ಯೆ:6

ಕನ್ಯಾ: ಐಟಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ವಾಹನ ದುರಸ್ತಿಗೆ ಖರ್ಚು. ಸ್ತ್ರೀಯರು ಪುರುಷ ಸಹೋದ್ಯೋಗಿಗಳ ನಡುವೆ ಕಲಹ. ಶುಭಸಂಖ್ಯೆ: 1

ತುಲಾ: ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ನೆರೆಹೊರೆಯವರಿಂದ ಸಹಾಯ ಸಿಗುವುದು. ಶುಭಸಂಖ್ಯೆ: 6

ವೃಶ್ಚಿಕ: ವಿದೇಶದಲ್ಲಿರುವ ಮಗನಿಂದ ಶುಭ ಸುದ್ದಿ ಬರುವುದು. ಸೂಕ್ತ ಶಿಫಾರಸ್ಸಿನಿಂದ ಉದ್ಯೋಗ ಸಿಗಲಿದೆ. ಟೆಂಡರ್ ಹಣ ವಿಳಂಬ. ಶುಭಸಂಖ್ಯೆ:3

ಧನುಸ್ಸು: ಪತ್ನಿಯ ಸಹಕಾರದಿಂದ ಪ್ರಗತಿಯಾಗುವುದು. ಹೃದಯ ಸಂಬಂಧಿ ರೋಗ ಕಾಡಲಿದೆ. ವಿಚ್ಛೇದಿತರಿಗೆ ವಿವಾಹ ಯೋಗವಿದೆ. ಶುಭಸಂಖ್ಯೆ:8

ಮಕರ: ರಾಜಕಾರಣಿಗಳು ವಿವಾದದಲ್ಲಿ ಸಿಲುಕುವ ಸಾಧ್ಯತೆ. ಸಂಗಾತಿಯೊಂದಿಗೆ ಕಲಹ. ಹಲವು ವರ್ಷಗಳ ನಂತರ ವಿವಾಹ ಯೋಗ. ಶುಭಸಂಖ್ಯೆ: 2

ಕುಂಭ: ಪ್ರವಾಸಕ್ಕೆ ಅನವಶ್ಯಕ ಖರ್ಚು. ಉಪನ್ಯಾಸಕರು, ಶಿಕ್ಷಕರಿಗೆ ವರ್ಗಾವಣೆ. ವಾಣಿಜ್ಯ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 6

ಮೀನ: ಹಿತಶತ್ರುಗಳಿಂದ ಪದವಿ ಕೈತಪ್ಪಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರವೇಶ ಸಿಗುವುದು. ತೆಂಗು, ಅಡಕೆ ಬೇಸಾಯಗಾರರಿಗೆ ಲಾಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net