ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲ ಮಾಡುವ ಸಾಧ್ಯತೆ

Nitya Bhavisya Vijayavani
Published on

ಮೇಷ:ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಋಣ ಬಾಧೆ,ವ್ಯರ್ಥ ಧನಹಾನಿ, ಮಾನಸಿಕ ಚಿಂತೆ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಧನಾಗಮನವಾಗಿ ಬಹುಕಾಲದ ಕಷ್ಟ ನಿವಾರಣೆಯಾಗುವುದು. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7

ಮಿಥುನ:ವಾಹನ ಖರೀದಿಸುವಿರಿ. ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿ ರೋಗ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ:3

ಕಟಕ:ಆತ್ಮೀಯರಲ್ಲಿ ಕಲಹ, ಮಾತಿನ ಚಕಮಕಿ. ಶರೀರದಲ್ಲಿ ಆಯಾಸ ಕಾಣಿಸೀತು. ಉದರ ಬಾಧೆ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ:7

ಸಿಂಹ:ದೃಷ್ಟಿ ದೋಷದಿಂದ ತೊಂದರೆ. ಸರ್ಪ ಭಯ ಕಾಡಲಿದೆ. ದೂರ ಪ್ರಯಾಣ ಮಾಡುವಿರಿ. ಬಾಕಿ ವಸೂಲಿ. ಕೀಲುಗಳಲ್ಲಿ ನೋವು. ಶುಭಸಂಖ್ಯೆ: 1

ಕನ್ಯಾ:ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಅತಿಯಾದ ನಷ್ಟ, ದುಶ್ಚಟ ಬೇಡ. ವಿವಾದದಿಂದ ದೂರವಿರಿ. ಶುಭಸಂಖ್ಯೆ:2

ತುಲಾ: ಇಷ್ಟ ವಸ್ತುಗಳ ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 9

ಧನುಸ್ಸು: ಮಿತ್ರರ ಆಗಮನ. ತೀರ್ಥ ಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಗಳ ಭೇಟಿ, ನ್ಯಾಯಾಲಯದ ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ:1

ಮಕರ:ಶುಭಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗದು. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಕೋಪ ಜಾಸ್ತಿ. ಶುಭಸಂಖ್ಯೆ:8

ಕುಂಭ:ಮಹಿಳೆಯರಿಗೆ ಲಾಭ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ತೊಂದರೆ. ಉದ್ಯೋಗ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ.ಶುಭಸಂಖ್ಯೆ:3

ಮೀನ:ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಹೃದಯಸಂಬಂಧಿ ರೋಗಬಾಧೆ. ಅನ್ಯರಲ್ಲಿ ಮನಸ್ತಾಪ. ಅನಗತ್ಯ ಹಸ್ತಕ್ಷೇಪ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net