

ಮೇಷ: ಕಾರ್ಯಕ್ರಮ ವ್ಯವಸ್ಥಾಪಕರಿಗೆ ವಿಶೇಷ ಲಾಭ. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ನಷ್ಟ. ಧಾರ್ವಿುಕ ಕ್ಷೇತ್ರದವರಿಗೆ ಅವಮಾನ. ಶುಭಸಂಖ್ಯೆ: 1
ವೃಷಭ: ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ಬಡ್ತಿ . ಮಕ್ಕಳ ಪ್ರಗತಿಯಿಂದ ಹರ್ಷ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ: 7
ಮಿಥುನ: ಪ್ರತಿಭೆಗೆ ತಕ್ಕ ವೇದಿಕೆ ಲಭ್ಯವಾಗಲಿದೆ. ತರಕಾರಿ, ಹಣ್ಣುಗಳ ವ್ಯಾಪಾರದಲ್ಲಿ ನಷ್ಟ. ಪೆಟ್ರೋಲ್ ಬಂಕ್ ಕೆಲಸಗಾರರಿಗೆ ಒತ್ತಡ. ಶುಭಸಂಖ್ಯೆ: 4
ಕಟಕ: ವಿದೇಶ ಪ್ರಯಾಣಕ್ಕೆ ವೀಸಾ ಸಮಸ್ಯೆ ಉಂಟಾಗಲಿದೆ. ವಕೀಲರಿಗೆ ಶುಭದಿನ. ಲೆಕ್ಕಪತ್ರ ಪರಿಶೋಧಕರಿಗೆ ಹೆಚ್ಚಿನ ಧನ ಲಾಭ. ಶುಭಸಂಖ್ಯೆ: 3
ಸಿಂಹ: ಆಟಗಾರರಿಗೆ ಸದಾ ಅವಕಾಶ ಒದಗಿಬರಲಿ. ಅಡುಗೆ ಸ್ಪರ್ಧೆಯಲ್ಲಿ ವಿಜೇತರಾಗುವಿರಿ. ನಾಲ್ಕು ಚಕ್ರ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 1
ಕನ್ಯಾ: ವಿಚ್ಛೇದಿತರಿಗೆ ಮರುವಿವಾಹ ಸಾಧ್ಯತೆ. ನೂತನ ಗ್ರಹ ನಿರ್ಮಾಣಕ್ಕೆ ಆರಂಭ. ವಿದ್ಯಾರ್ಥಿಗಳ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 7
ತುಲಾ: ನಿಮ್ಮ ವರ್ತನೆಯಿಂದ ಸಾರ್ವಜನಿಕವಾಗಿ ಅವಮಾನ. ಅಮೂಲ್ಯ ವಸ್ತು ಖರೀದಿ. ಸಿಮೆಂಟ್, ಮರಳು ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 8
ವೃಶ್ಚಿಕ: ಬ್ಯಾಂಕ್ನಲ್ಲಿ ಸಾಲ ಸಿಗಲಿದೆ. ಪಾಲುದಾರರ ಅಸಹಕಾರದಿಂದ ವ್ಯಾಪಾರ ಕುಸಿತ. ಬಟ್ಟೆ ಅಂಗಡಿ ಮಾಲೀಕರಿಗೆ ನಷ್ಟ ಸಾಧ್ಯತೆ. ಶುಭಸಂಖ್ಯೆ: 3
ಧನಸ್ಸು: ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತವಾಗಲಿದೆ. ಕಿರುತೆರೆ ನಟರು ಮೋಸ ಹೋಗುವ ಸಾಧ್ಯತೆ. ಪ್ರಯಾಣದಲ್ಲಿ ಧನ ನಷ್ಟ. ಶುಭಸಂಖ್ಯೆ: 9
ಮಕರ: ಧಾರ್ವಿುಕ ಕ್ಷೇತ್ರದ ಮೇಲ್ವಿಚಾರಕರಿಗೆ ಅಪವಾದ. ನಿಮ್ಮ ಕೆಲಸಕ್ಕೆ ಸಾರ್ವಜನಿಕ ಪ್ರಶಂಸೆ. ಎಲೆಕ್ಟ್ರಾನಿಕ್ಸ್ ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 6
ಕುಂಭ: ಸಂಗಾತಿ ಕಡೆಯ ಆಸ್ತಿ ಪ್ರಾಪ್ತಿಯಾಗಲಿದೆ. ಗಂಡನೊಂದಿಗೆ ವಿರಸ. ವಾಣಿಜ್ಯ ವಿದ್ಯಾರ್ಥಿಗಳಿಗೆ ಶುಭದಿನ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 4
ಮೀನ: ಧಾರ್ವಿುಕ ವೃತ್ತಿಯವರಿಗೆ ಒತ್ತಡ ಹೆಚ್ಚಾಗಲಿದೆ. ಉದರ ಸಂಬಂಧಿ ರೋಗ ಉಲ್ಬಣಿಸೀತು. ವಾಹನ ಚಾಲನೆಯಲ್ಲಿರಲಿ ಎಚ್ಚರಿಕೆ. ಶುಭಸಂಖ್ಯೆ: 2