ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಯೋಗ

Nitya Bhavisya Vijayavani
Published on

ಮೇಷ: ಪಾರಂಪರಿಕ ವ್ಯವಹಾರಗಳಲ್ಲಿ ಮುನ್ನಡೆ. ಸಿನಿಮಾರಂಗದವರಿಗೆ ಶುಭದಾಯಕ ದಿನ. ಕೃಷಿಕರಿಗೆ ಆದಾಯದಲ್ಲಿ ಏರಿಕೆ. ಶುಭಸಂಖ್ಯೆ: 3

ವೃಷಭ: ಸಾಲ ತೀರಿಸಲು ಸ್ನೇಹಿತರ ಸಹಕಾರ ಸಿಗಲಿದೆ. ವಿವಾಹಾಕಾಂಕ್ಷಿಗಳಿಗೆ ಶುಭ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ. ಶುಭಸಂಖ್ಯೆ: 1

ಮಿಥುನ: ಹೊಸ ಕೆಲಸದಲ್ಲಿ ಜಯ ದೊರೆಯಲಿದೆ. ಕಠಿಣ ಶ್ರಮದಿಂದ ಫಲಪ್ರಾಪ್ತಿ. ಕುಟುಂಬದ ಸದಸ್ಯರಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 5

ಕಟಕ: ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯಾಗುವುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ತೀರ ಅಗತ್ಯ. ಆಹಾರ ಸೇವನೆ ವಿಷಯದಲ್ಲಿ ಎಚ್ಚರ. ಶುಭಸಂಖ್ಯೆ: 8

ಸಿಂಹ: ಕಾರ್ವಿುಕ ವರ್ಗದವರಿಗೆ ಅನುಕೂಲ. ಉದ್ಯೋಗದಲ್ಲಿ ಅಭಿವೃದ್ಧಿಯಾಗುವುದು. ಕರಕುಶಲ ವಸ್ತುಗಳ ತಯಾರಿಕರಿಗೆ ಶುಭ. ಶುಭಸಂಖ್ಯೆ: 6

ಕನ್ಯಾ: ಉದ್ಯೋಗ ಪ್ರಾಪ್ತಿಗೆ ಸ್ನೇಹಿತರ ಸಹಕಾರ ದೊರೆಯುವುದು. ಸಾರ್ವಜನಿಕ ಕೆಲಸದಲ್ಲಿ ಒತ್ತಡ. ಮಕ್ಕಳ ಆರೋಗ್ಯದಲ್ಲಿ ಎಚ್ಚರ. ಶುಭಸಂಖ್ಯೆ: 2

ತುಲಾ: ಕೈಗೊಳ್ಳುವ ಯೋಜನೆಗಳ ಬಗ್ಗೆ ಮುನ್ನೆಚ್ಚರವಿರಲಿ. ಕಟ್ಟಡ ವಿನ್ಯಾಸಕರಿಗೆ ಲಾಭ. ಕಚೇರಿಯಲ್ಲಿ ಮಾತುಗಳಿಂದ ಮುಜುಗರ. ಶುಭಸಂಖ್ಯೆ: 7

ವೃಶ್ಚಿಕ: ಆದಾಯದಲ್ಲಿ ಸ್ಥಿರತೆ ಇರಲಿದೆ. ಪರಿಸರವಾದಿಗಳಿಗೆ ಸಮಾಜ, ಸರ್ಕಾರದಿಂದ ಗೌರವ. ಸ್ವಯಂ ಉದ್ಯೋಗಸ್ಥರಿಗೆ ಶುಭದಿನ. ಶುಭಸಂಖ್ಯೆ: 1

ಧನಸ್ಸು: ಬಂಧುಗಳಿಂದ ಸಮಸ್ಯೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ. ನೌಕರರಿಗೆ ಅಧಿಕಾರಿ ಗಳಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 3

ಮಕರ: ಮಾನಸಿಕ ವೇದನೆ. ವಿವಾಹ ಯೋಗ. ಮಹಿಳಾ ವೈದ್ಯಕೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವ್ಯಾಸಂಗದಲ್ಲಿ ತೊಂದರೆ. ಶುಭಸಂಖ್ಯೆ: 2

ಕುಂಭ: ಬ್ಯಾಂಕಿನಿಂದ ಅಗತ್ಯ ಧನಸಹಾಯ ಒದಗಿಬರಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ಅನುಕೂಲ. ಶುಭಸಂಖ್ಯೆ: 8

ಮೀನ: ಗೃಹ ನಿರ್ಮಾಣ ಹಾಗೂ ಮಾರಾಟ ವೃತ್ತಿಯವರಿಗೆ ವಿಶೇಷ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರದಿಂದಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net