ನವದೆಹಲಿ: ತಾನು ಜೀವಿಸಿದ್ದ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ-ಕಲ್ಲೋಲ, ಭೂಕಂಪ, ಪ್ರವಾಹ, ಖ್ಯಾತ ನಾಮಧೇಯರ ಬದುಕಿನಲ್ಲಿ ಬಿರುಗಾಳಿ ಹೀಗೆ ಹತ್ತು ಹಲವು ಮಹಾನ್ ಭವಿಷ್ಯವನ್ನು ಕೇವಲ ಬಾಯಲ್ಲಿ ಹೇಳುವುದಲ್ಲದೇ, ಅದನ್ನು ದಾಖಲೆಯಾಗಿ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ (Baba Vanga) ಅವರ ಸ್ಪೋಟಕ ಭವಿಷ್ಯಗಳು ಇಂದು ನಿಜವಾಗಿರುವುದು ನಿಜಕ್ಕೂ ಅಚ್ಚರಿಯೇ. ಏಲಿಯನ್ಗಳು ಮನುಷ್ಯರನ್ನು ಸಂಪರ್ಕಿಸುವ ಕಾಲವು ಸನ್ನಿಹಿತ ಎಂದು ಹೇಳಿರುವ ವಾಂಗಾ, ಕೆಲವೊಂದು ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಇದು ಹೀಗೆಯೇ ಆಗುತ್ತದೆ ಎಂದು ನಿಖರವಾಗಿ ಮುನ್ಸೂಚನೆ ನೀಡಿದ್ದಾರೆ. ಸದ್ಯ ಅವರ ಭವಿಷ್ಯವಾಣಿಗಳು ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೂರ್ವದಲ್ಲಿ ನಡೆಯುವ ಯುದ್ಧ ಪಶ್ಚಿಮವನ್ನು ನಾಶಪಡಿಸುತ್ತದೆ ಎಂಬ ನುಡಿ ಇದೀಗ ಎಲ್ಲರ ಗಮನಸೆಳೆದಿದೆ.
ಇದನ್ನೂ ಓದಿ: Drone Prathap | ಹುಚ್ಚಾಟ ಮೆರೆದ ಡ್ರೋನ್ ಪ್ರತಾಪ್ ಬಂಧನ! ಯಾವ ಪ್ರಕರಣದಡಿ ಕೇಸ್ ದಾಖಲು? ಹೀಗಿದೆ ವಿವರ…
ಬಾಬಾ ವಾಂಗಾ ನುಡಿದ ಪ್ರಬಲ ಭವಿಷ್ಯವಾಣಿಗಳ ಪೈಕಿ 2001, ಸೆ.01ರಂದು ಅಮೆರಿಕಾದ ಟ್ವಿನ್ ಟವರ್ ಮೇಲಾದ ದಾಳಿಯೇ ಜ್ವಲಂತ ಸಾಕ್ಷಿ. ಈ ದುರ್ಘಟನೆ ಸಂಭವಿಸಿದ ನಂತರ ವಾಂಗಾ ಅವರ ಭವಿಷ್ಯ ನುಡಿಯ ಬಗ್ಗೆ ಜನರಲ್ಲಿ ಅಚ್ಚರಿ ಮೂಡಲು ಶುರುವಾಯಿತು. 12ನೇ ವಯಸ್ಸಿನಲ್ಲಿ ತನ್ನ ಎರಡು ಕಣ್ಣಿನ ದೃಷ್ಟಿ ಕಳೆದುಕೊಂಡ ಬಾಬಾ ವಾಂಗಾ, ದೇವರ ಅನುಗ್ರಹವೋ ಏನೋ ಭವಿಷ್ಯಜ್ಞಾನದ ಉಡುಗೊರೆಯನ್ನು ಸಿದ್ಧಿಸಿಕೊಂಡರು. ಅವರ ಹಲವಾರು ಭವಿಷ್ಯ ನುಡಿಗಳಲ್ಲಿ ಎರಡು ಮಾತ್ರ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವು ಹೀಗಿವೆ.
ಯುರೋಪಿನ ವಿನಾಶ
ವರದಿಯ ಪ್ರಕಾರ, ಅತೀಂದ್ರಿಯ ಯುದ್ಧ ಮತ್ತು ವೆಸ್ಟ್-ಓಹ್ ಜಾಯ್ ಸಂಪೂರ್ಣ ವಿನಾಶದ ಬಗ್ಗೆ ವಾಂಗಾ ಭವಿಷ್ಯ ನುಡಿದಿದ್ದಾರೆ. ಸಿರಿಯಾ ಪತನವಾದ ನಂತರದಲ್ಲಿ ಪಶ್ಚಿಮ ಮತ್ತು ಪೂರ್ವದ ನಡುವೆ ದೊಡ್ಡ ಯುದ್ಧವನ್ನು ಸಂಭವಿಸಲಿದ್ದು, ವಸಂತಕಾಲದಲ್ಲಿ ಪೂರ್ವದ ಯುದ್ಧವು ಪ್ರಾರಂಭವಾಗಲಿದೆ. ಮತ್ತು ಮೂರನೇ ಮಹಾಯುದ್ಧ ನಡೆಯಲಿದೆ. ಪೂರ್ವದಲ್ಲಿ ಆರಂಭವಾಗುವ ಯುದ್ಧವು ಪಶ್ಚಿಮವನ್ನು ನಾಶಗೊಳಿಸಲಿದೆ. ಇನ್ನೂ ಮತ್ತೊಂದು ಭವಿಷ್ಯವಾಣಿಯಲ್ಲಿ, ಸಿರಿಯಾ ಗೆದ್ದವರ ಪಾದಗಳ ಮುಂದೆ ಬಿದ್ದರು. ಅಲ್ಲಿ ಗೆದ್ದು ಬೀಗವರು ಒಬ್ಬರಿಗಿಂತ ಹೆಚ್ಚಿನವರು” ಎಂದು ಹೇಳಿದ್ದಾರೆ. ಪ್ರತ್ಯೇಕವಾಗಿ ವಾಂಗಾ ಅವರ ಈ ನುಡಿಯನ್ನು ಮಾತ್ರ ನಂಬದೆ ಇರಲು ಸಾಧ್ಯವಿಲ್ಲ. ಏಕೆಂದರೆ, ಪ್ರಸ್ತುತ ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ನಮ್ಮ ಕಣ್ಣಾರೆ ಈ ಘಟನೆಯನ್ನು ಸುದ್ದಿ ಪತ್ರಿಕೆ, ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ ಎಂಬುದು ಮತ್ತೊಂದು ಜಲ್ವಂತ ಸಾಕ್ಷಿ.
ಅನ್ಯಲೋಕದ ಸಂಪರ್ಕ
ಸುದ್ದಿ ಪೋರ್ಟಲ್ ಮಾಹಿತಿ ಪ್ರಕಾರ, ಬಾಬಾ ವಾಂಗಾ ನುಡಿದ ಭವಿಷ್ಯದಲ್ಲಿ ಅನ್ಯಗ್ರಹ ಜೀವಿಗಳು ಮಾನವ ಲೋಕಕ್ಕೆ ಹೆಜ್ಜೆಯಿಡಲಿವೆ. ಬಹುಶಃ ಜಾಗತಿಕ ಬಿಕ್ಕಟ್ಟು ಅಥವಾ ಜಗತ್ತಿನ ವಿನಾಶಕ್ಕೆ ಇದು ಪ್ರಮುಖ ಕಾರಣವಾಗಬಹುದು ಎಂದು ಹೇಳಲಾಗಿದೆ.
ದೂರವಿಲ್ಲ ಟೆಲಿಪತಿ ಯುಗ!
2025ರ ವೇಳೆಗೆ ಟೆಲಿಪತಿ ಯುಗ ಅಭಿವೃದ್ಧಿಯಾಗಲಿದೆ ಎಂಬುದು ಬಾಬಾ ವಾಂಗಾ ನುಡಿದಿರುವ ಪ್ರಮುಖ ಭವಿಷ್ಯಗಳಲ್ಲಿ ಒಂದು. ಇದು ಮನುಷ್ಯನ ಮನಸ್ಸಿನಿಂದ ಮನಸ್ಸಿನ ನೇರ ಸಂವಹನಕ್ಕೆ ಅವಕಾಶ ನೀಡುತ್ತದೆ. ಈ ಪ್ರಗತಿಯು ಮಾನವನ ಪರಸ್ಪರ ಕ್ರಿಯೆಯನ್ನು ಕ್ರಾಂತಿಗೊಳಿಸುತ್ತದೆ ಎಂದು ಬಾಬಾ ಉಲ್ಲೇಖಿಸಿದ್ದಾರೆ. ಇದಕ್ಕೆ ತಕ್ಕಂತೆ ಎಲೋನ್ ಮಸ್ಕ್‌ನ ಮೆದುಳಿನ ಚಿಪ್ ಈಗಾಗಲೇ ಒಂದು ರೀತಿ ಟೆಲಿಪತಿಯ ಅಲೆಗಳು ಬಹಳ ಹತ್ತಿರವಿದೆ ಎಂಬುದನ್ನು ದೂರದಿಂದಲೇ ಸೂಚಿಸಿದೆ. ಒಬ್ಬ ವ್ಯಕ್ತಿಯು ತಂತ್ರಜ್ಞಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದ್ದೇ ಆದರೂ ಅಂತಿಮವಾಗಿ ಮಾನವನಿಂದ ಮಾನವನ ಆವೃತ್ತಿಯನ್ನು ಭೇದಿಸಲು ಸಾಧ್ಯವೇ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಾಡುವುದು ಸಾಮಾನ್ಯ,(ಏಜೆನ್ಸೀಸ್).
ಇಂದೇ ‘ದಾಸ’ನ ಜಾಮೀನು ಭವಿಷ್ಯ: ಬೇಲ್ ಸಿಗದಿದ್ರೆ ಆರೋಪಿ ದರ್ಶನ್ ಮುಂದಿರುವ ಕೊನೇ ಆಯ್ಕೆಗಳಿವು