ದಿನಭವಿಷ್ಯ: ಈ ರಾಶಿಯವರಿಗಿಂದು ಅಪರಿಚಿತರಿಂದ ಆರ್ಥಿಕ ಸಹಾಯ

Nitya Bhavisya Vijayavani
Published on

ಮೇಷ: ಸಾಲ ಮಾಡುವ ಸಾಧ್ಯತೆ. ಆರಕ್ಷಕ ಅಧಿಕಾರಿಗಳಿಗೆ ಮನಃಶಾಂತಿ. ಸಂಗಾತಿಯ ಆರೋಗ್ಯದಲ್ಲಿ ಗಣನೀಯ ಚೇತರಿಕೆಯಾಗಲಿದೆ. ಶುಭಸಂಖ್ಯೆ: 9

ವೃಷಭ: ಸಂಗಾತಿಯ ಆರೋಗ್ಯದಲ್ಲಿ ಸ್ಥಿರತೆ ಇರಲಿದೆ. ಪೌರೋಹಿತ್ಯ ವರ್ಗಕ್ಕೆ ಜನಪ್ರಿಯತೆ. ಅನಿರೀಕ್ಷಿತವಾಗಿ ಆರ್ಥಿಕತೆಯಲ್ಲಿ ಕೊರತೆ. ಶುಭಸಂಖ್ಯೆ: 5

ಮಿಥುನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ. ಕುಟುಂಬಾಧಾರಿತ ವ್ಯಾಪಾರದಲ್ಲಿ ಹಿನ್ನಡೆ ಸಾಧ್ಯತೆ. ಸಹೋದ್ಯೋಗಿಗಳೊಡನೆ ವಿವಾದ. ಶುಭಸಂಖ್ಯೆ: 3

ಕಟಕ: ಕೃಷಿ ಯೋಜನೆಗಳತ್ತ ಒಲವು. ಜಾಣತನದ ಮಾತಿನ ಬಲದಿಂದ ಆಪತ್ತಿನಿಂದ ಬಚಾವ್. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ. ಶುಭಸಂಖ್ಯೆ:2

ಸಿಂಹ: ಕಚೇರಿಯ ಕೆಲಸದಿಂದಾಗಿ ಅಲೆದಾಟ. ಸಾರಿಗೆ ಅಧಿಕಾರಿಗಳಿಗೆ ಅಧಿಕ ಕಾರ್ಯದೊತ್ತಡ. ಸಂಗೀತ ವಾದ್ಯ ಕಲಾವಿದರಿಗೆ ಪ್ರಗತಿ. ಶುಭಸಂಖ್ಯೆ:2

ಕನ್ಯಾ: ಕ್ರೀಡಾಪಟುಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಗೃಹ ಕೈಗಾರಿಕೆಯಲ್ಲಿ ಲಾಭ ಬರಲಿದೆ. ಕಣ್ಣಿನ ತೊಂದರೆ ಕಾಣಿಸಬಹುದು. ಶುಭಸಂಖ್ಯೆ:7

ತುಲಾ: ಜಲೋತ್ಪನ್ನ ವ್ಯಾಪಾರದಲ್ಲಿ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಗೊಂದಲ. ವಿದ್ಯಾರ್ಥಿನಿಯರು ಖಿನ್ನತೆಗೆ ಜಾರಿಯಾರು. ಶುಭಸಂಖ್ಯೆ:4

ವೃಶ್ಚಿಕ: ವಸ್ತ್ರ ತಯಾರಕರಿಗೆ ಮತ್ತು ನೇಕಾರರಿಗೆ ಬೇಡಿಕೆ. ಪರರ ಮಾತು ಕೇಳಿ ಮೋಸವಾಗಬಹುದು. ಅಪರಿಚಿತರಿಂದ ಆರ್ಥಿಕ ಸಹಾಯ.ಶುಭಸಂಖ್ಯೆ:1

ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಅಭಿವೃದ್ಧಿ. ಪೊಲೀಸ್ ಹುದ್ದೆಯಲ್ಲಿ ಇರುವವರಿಗೆ ಮುಂಬಡ್ತಿ. ಸ್ತ್ರೀಯರಿಗೆ ಅಧಿಕ ರಕ್ತದೊತ್ತಡ. ಶುಭಸಂಖ್ಯೆ: 8

ಮಕರ: ವಾಹನ ಚಾಲನೆಯಲ್ಲಿ ಎಚ್ಚರ. ಯಂತ್ರೋಪಕರಣ ವ್ಯಾಪಾರದಲ್ಲಿ ಲಾಭ. ಅತಿಆತ್ಮವಿಶ್ವಾಸ ದಿಂದ ಅವಕಾಶ ವಂಚಿತರಾಗುವಿರಿ. ಶುಭಸಂಖ್ಯೆ:6

ಕುಂಭ: ಕುಟುಂಬದಲ್ಲಿ ಒಮ್ಮತದ ಕೊರತೆ. ವಿದೇಶ ಪ್ರವಾಸ ಪ್ರಯತ್ನದಿಂದ ಸಫಲ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಶುಭಸಂಖ್ಯೆ: 4

ಮೀನ: ಹಲವು ವರ್ಷಗಳ ನಂತರ ಸಂತಾನ ಲಾಭ. ಧೈರ್ಯದಿಂದ ಕಷ್ಟಗಳನ್ನು ಎದುರಿಸಿ. ಆಹಾರ ಉದ್ಯಮದವರಿಗೆ ಆದಾಯ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net