ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ವಿಚಾರದಲ್ಲಿ ಪ್ರಗತಿಯಾಗಲಿದೆ

Nitya Bhavisya Vijayavani
Published on

ಮೇಷ: ಇಡೀ ದಿನ ಸಂತಸ ಇರುತ್ತದೆ. ಪೋಷಕರ ಆರೋಗ್ಯದಲ್ಲಿ ಕಾಳಜಿ ವಹಿಸಿ. ಹೊಸದನ್ನು ಕಲಿಯುವ ಅವಕಾಶವಿರುತ್ತದೆ. ಶುಭಸಂಖ್ಯೆ:1

ವೃಷಭ: ಭಾವೋದ್ರೇಕಗಳು ಉಂಟಾಗುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು. ಶುಭಸಂಖ್ಯೆ:9

ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ. ಅನಗತ್ಯ ಒತ್ತಡ ಎದುರಿಸಬೇಕಾಗಬಹುದು. ಸಹವರ್ತಿಗಳಿಂದ ಅಪಾಯವಿದೆ. ಶುಭಸಂಖ್ಯೆ: 9

ಕಟಕ: ಗೃಹ ನಿರ್ವಣಕ್ಕೆ ಅಧಿಕ ಶ್ರಮ. ಧಾರ್ವಿುಕ ಪ್ರವೃತ್ತಿಯವರಿಗೆ ಧನಾರ್ಜನೆ. ಹಣಕಾಸಿನ ವಿಚಾರದಲ್ಲಿ ಪ್ರಗತಿಯಾಗಲಿದೆ. ಶುಭಸಂಖ್ಯೆ:3

ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ. ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ. ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆಯಾಗುವುದು. ಶುಭಸಂಖ್ಯೆ:8

ಕನ್ಯಾ:ಮಕ್ಕಳ ಯಶಸ್ಸಿನಿಂದ ತೃಪ್ತಿ. ಅನಿರೀಕ್ಷಿತ ಖರ್ಚು ತಲೆದೋರುವುದು. ದುಡುಕಿನ ನಿರ್ಧಾರಗಳು ಯಾವುದೇ ಕಾರಣಕ್ಕೂ ಬೇಡ. ಶುಭಸಂಖ್ಯೆ:1

ತುಲಾ: ದಾಂಪತ್ಯದಲ್ಲಿ ಸಾಮರಸ್ಯ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನಿಮ್ಮ ಯತ್ನ ವಿಫಲವಾಗುವ ಸಾಧ್ಯತೆ. ಉನ್ನತ ಹುದ್ದೆಗೆ ಬಡ್ತಿ. ಶುಭಸಂಖ್ಯೆ:8

ವೃಶ್ಚಿಕ: ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಅನವಶ್ಯಕ ವಾದ-ವಿವಾದ ಎದುರಾಗುವ ಸಂಭವ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ:5

ಧನುಸ್ಸು: ಆದಾಯದಲ್ಲಿ ಇಳಿಕೆಯಾಗಲಿದೆ. ಪರರಿಂದ ತೊಂದರೆ ಎದುರಿಸುವಿರಿ. ರಕ್ತದ ಒತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಶುಭಸಂಖ್ಯೆ: 3

ಮಕರ: ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ನಿವೇಶನ ಖರೀದಿಯಲ್ಲಿ ಎಚ್ಚರಿಕೆಯ ನಡೆ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 7

ಕುಂಬ: ದೀರ್ಘ ಪ್ರಯಾಣ ಮಾಡುವಿರಿ. ದೂರದ ವ್ಯವಹಾರಗಳಲ್ಲಿ ಪ್ರಗತಿಯಿದೆ. ಅಡಕೆ ಕೃಷಿಯಲ್ಲಿ ಉತ್ತಮ ಧನಲಾಭ ಸಂಭವ.ಶುಭಸಂಖ್ಯೆ:6

ಮೀನ: ಇಂದು ಕೆಲವು ಸಮಸ್ಯೆಗಳಿಗೆ ಅಂತ್ಯ ಕಾಣಬಹುದು. ಹೊಸ ಯೋಜನೆಯತ್ತ ಗಮನ ಹರಿಸಲು ಸುಸಮಯ. ಆರ್ಥಿಕ ಲಾಭ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net