

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿಯಲ್ಲಿ ಹಿತಶತ್ರುಗಳಿಂದ ತಡೆ. ಅರ್ಹರಿಗೆ ಮದುವೆಗೆ ಸಕಾಲ. ಶುಭಸಂಖ್ಯೆ: 7
ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ವಹಿಸುವುದು ತೀರ ಅಗತ್ಯ. ಪ್ರಭಾವಿ ವ್ಯಕ್ತಿಯ ಭೇಟಿ ಆಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 1
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತವಾಗುವುದು. ಮನೆಯಲ್ಲಿ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ವಿಶೇಷ ಗಳಿಕೆ. ಶುಭಸಂಖ್ಯೆ: 1
ಕಟಕ: ಮಗಳ ವಿವಾಹಕ್ಕೆ ಅಡ್ಡಿ ಬರಬಹುದು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ ದೊರೆಯಲಿದೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ಬದಲಿಸಲು ಇಂದು ಸೂಕ್ತ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 2
ಕನ್ಯಾ: ಪ್ರಮುಖ ತೀರ್ವನಗಳಲ್ಲಿ ಎಚ್ಚರವಿರಲಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ವಣಕ್ಕೆ ಬ್ಯಾಂಕಿನಿಂದ ಸಹಾಯ ಸಿಗಲಿದೆ. ಶುಭಸಂಖ್ಯೆ: 1
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ವಿಶೇಷ ಗೌರವ ಸಿಗಲಿದೆ. ವಿಜ್ಞಾನಿಗಳಿಗೆ ಯಶಸ್ಸು ದೊರೆಯುವುದು. ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 1
ವೃಶ್ಚಿಕ: ಔಷಧ ಮಾರಾಟ ವೃತ್ತಿಯವರಿಗೆ ಬೇಡಿಕೆ. ಅಧಿಕಾರಿಗಳೊಂದಿಗೆ ವಾದ ಮಾಡುವಿರಿ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 4
ಧನುಸ್ಸು: ಶ್ರಮಕ್ಕೆ ತಕ್ಕ ಪ್ರತಿಫಲ, ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 6
ಮಕರ: ಪೋಲೀಸ್ ಅಧಿಕಾರಿಗಳಿಗೆ ಕಾರ್ಯದೊತ್ತಡ. ವೈದ್ಯರಿಗೆ ಸವಾಲಿನ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಗುತ್ತಿಗೆ ಕೆಲಸಗಾರರಿಗೆ ಆದಾಯವಿದೆ. ಶುಭಸಂಖ್ಯೆ: 1
ಕುಂಭ: ಯಂತ್ರೋಪಕರಣಗಳ ಬಳಕೆಯಲ್ಲಿ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 7
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಲಭಿಸಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದ ಹುಡುಕಾಟ. ಶುಭಸಂಖ್ಯೆ: 9