

ಮೇಷ:ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಜೇನು ಕೃಷಿಯಲ್ಲಿ ಬದಲಾವಣೆ. ಹಿತಶತ್ರುಗಳಿಂದಾಗಿ ಪದವಿ ಕೈ ತಪ್ಪಲಿದೆ. ಶುಭಸಂಖ್ಯೆ: 8
ವೃಷಭ:ಫ್ಯಾನ್ಸಿ ಅಂಗಡಿ ಮಾಲೀಕರಿಗೆ ಲಾಭ. ಆಹಾರ ಪದಾರ್ಥಗಳ ಅಂಗಡಿ ತೆರೆಯಲು ಯೋಚನೆ. ಅವಿವಾಹಿತರಿಗೆ ವಿವಾಹ ಯೋಗ.ಶುಭಸಂಖ್ಯೆ: 9
ಮಿಥುನ:ಟ್ರಾವೆಲ್ಸ್ ಮಾಲೀಕರಿಗೆ ಚಾಲಕರಿಂದ ಕಿರಿಕಿರಿ. ವಿದೇಶ ಪ್ರಯಾಣ ಸಾಧ್ಯತೆ. ವಿವಾಹ ಪ್ರಯತ್ನದಲ್ಲಿ ಯಶ. ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 4
ಕಟಕ: ನಂಬಿದವರಿಂದ ವಂಚನೆ ಸಾಧ್ಯತೆ. ನಿವೇಶನ ಖರೀದಿಯಲ್ಲಿ ಮೋಸ. ಗೃಹ ನಿರ್ವಣಕ್ಕೆ ಚಾಲನೆ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ:7
ಸಿಂಹ: ಮಾಧ್ಯಮ ಕ್ಷೇತ್ರದವರಿಗೆ ಒತ್ತಡ. ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರಿಗಳಿಂದ ತೊಂದರೆ. ಧಾನ್ಯ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6
ಕನ್ಯಾ: ಶಿಕ್ಷಕರಿಗೆ ಸ್ವಂತ ಊರಿಗೆ ವರ್ಗಾವಣೆ. ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ ಶುಭದಾಯಕ ದಿನ. ತಾಂತ್ರಿಕ ಶಿಕ್ಷಣದಲ್ಲಿ ಪ್ರಗತಿ. ಶುಭಸಂಖ್ಯೆ:6
ತುಲಾ: ಭೂ ವ್ಯವಹಾರದಲ್ಲಿ ಸ್ನೇಹಿತರಿಂದ ಮೋಸ. ಸಾರ್ವಜನಿಕವಾಗಿ ಅವಮಾನ. ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಪದವಿ ಪ್ರಾಪ್ತಿ. ಶುಭಸಂಖ್ಯೆ:9
ವೃಶ್ಚಿಕ: ಮಕ್ಕಳಿಗೆ ಉತ್ತಮ ಕಾಲೇಜಿನಲ್ಲಿ ಪ್ರವೇಶ. ಸಂಗೀತಗಾರರು, ವಾದಕರಿಗೆ ವಿಶೇಷ ದಿನ. ಚಿತ್ರಕಾರರಿಗೆ ಸನ್ಮಾನ, ಗೌರವ ಪ್ರಾಪ್ತಿ. ಶುಭಸಂಖ್ಯೆ:6
ಧನುಸ್ಸು: ಪೀಠೋಪಕರಣಗಳ ಮಳಿಗೆಯವರಿಗೆ ಅಪಾರ ಧನನಷ್ಟ. ಅಗ್ನಿ ಅನಾಹುತದ ಬಗ್ಗೆ ಎಚ್ಚರಿಕೆ ಇರಲಿ. ಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ:5
ಮಕರ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಬಹುವರ್ಷಗಳ ನಂತರ ವಿದೇಶದಲ್ಲಿದ್ದ ಮಕ್ಕಳ ಭೇಟಿ. ಶುಭಸಂಖ್ಯೆ:2
ಕುಂಭ: ಕಾರ್ಯ ವೈಫಲ್ಯದಿಂದ ಖಿನ್ನತೆಗೆ ಜಾರುವ ಸಂದರ್ಭ. ಅಪರಿಚಿತ ಮಹಿಳೆಯರಿರಲಿ, ಪುರುಷರಿರಲಿ ಜಾಗರೂಕತೆಯಿಂದ ವರ್ತಿಸಿ. ಶುಭಸಂಖ್ಯೆ:6
ಮೀನ: ಬಂಧುಗಳ ಸಹಾಯ. ಜಟಿಲ ಸಮಸ್ಯೆಯಿಂದ ಹೊರಬರುವಿರಿ. ರೇಷ್ಮೆ ಕೃಷಿಕರಿಗೆ ಲಾಭ. ಹಾಲಿನ ಉತ್ಪನ್ನ ಮಾರಾಟದಲ್ಲಿ ನಷ್ಟ. ಶುಭಸಂಖ್ಯೆ:4