

ಮೇಷ:ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರವಿರಲಿ. ಪತ್ನಿಯ ಆರೋಗ್ಯದಲ್ಲಿ ತೊಂದರೆ ಕಾಣಿಸೀತು. ಬಂಧು ಮಿತ್ರರ ಸಮಾಗಮ. ಶುಭಸಂಖ್ಯೆ: 9
ವೃಷಭ: ನ್ಯಾಯಾಲಯದ ಕಟ್ಟಳೆಗಳಲ್ಲಿ ವಿಳಂಬ. ವ್ಯವಹಾರಗಳಲ್ಲಿ ಏರುಪೇರು. ಉದ್ಯೋಗಸ್ಥ ಮಹಿಳೆಯರಿಗೆ ಸ್ಥಳ ಬದಲಾವಣೆ. ಶುಭಸಂಖ್ಯೆ:7
ಮಿಥುನ: ಭೂಮಿಯಿಂದ ಲಾಭ. ಅಧಿಕಾರ-ಪ್ರಾಪ್ತಿಯಲ್ಲಿ ಅಡೆ-ತಡೆ. ಅವಿವಾಹಿತರಿಗೆ ವಿವಾಹ ಯೋಗ. ವಸ್ತ್ರ ಖರೀದಿಯಲ್ಲಿ ಹಣ ನಷ್ಟ. ಶುಭಸಂಖ್ಯೆ: 1
ಕಟಕ: ಸಂಗಾತಿಯಿಂದ ಸಲ್ಲದ ನಿಂದನೆ. ವಾಹನ ಅಪಘಾತ ಸಂಭವಿಸುವ ಸಾಧ್ಯತೆ. ಬಂಧುಗಳಲ್ಲಿ ವಿಶ್ವಾಸ ವೃದ್ಧಿ. ಆಕಸ್ಮಿಕ ಧನ ನಷ್ಟ. ಶುಭಸಂಖ್ಯೆ:9
ಸಿಂಹ: ಯತ್ನ ಕಾರ್ಯದಲ್ಲಿ ವಿಫಲರಾಗುವಿರಿ. ನಂಬಿದ ಜನರಿಂದ ಮನಸ್ಸಿಗೆ ಅಶಾಂತಿ ಉಂಟಾದೀತು. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 5
ಕನ್ಯಾ:ಇಷ್ಟಾರ್ಥ ಸಿದ್ಧಿಸಲಿದೆ. ತೀರ್ಥಕ್ಷೇತ್ರಗಳ ಭೇಟಿ, ದೇವರ ದರ್ಶನ, ಸ್ತ್ರೀಯರಿಂದ ಲಾಭವಾಗುವುದು. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:3
ತುಲಾ: ಸಹೋದರರೊಂದಿಗೆ ಆಸ್ತಿಕಲಹ. ಭೋಗ ಸಾಮಗ್ರಿಗೆ ಖರ್ಚು. ನೆಮ್ಮದಿ ಇಲ್ಲದ ಜೀವನ. ಪರರ ತಪ್ಪಿಗೆ ನಿಮಗೆ ಅಪಕೀರ್ತಿ. ಶುಭಸಂಖ್ಯೆ: 2
ವೃಶ್ಚಿಕ: ನಂಬಿದವರಿಂದಲೇ ಮೋಸ ಹೋಗುವಿರಿ. ಸಾಲಗಾರರಿಂದ ಅವಮಾನ ಆಗಲಿದೆ. ಗುಪ್ತ ರೋಗ ಬಾಧೆ. ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 7
ಧನಸ್ಸು: ಸ್ವಯಂಕೃತ ಅಪರಾಧಕ್ಕೆ ಪಶ್ಚ್ಚಾತ್ತಾಪ. ಶತ್ರುಗಳ ವಿರುದ್ಧ ಜಯ. ಗುರು ಹಿರಿಯರಲ್ಲಿ ಭಕ್ತಿ. ಪ್ರತಿಭೆಯಿಂದ ಉತ್ತಮ ಸಂಪಾದನೆ. ಶುಭಸಂಖ್ಯೆ:2
ಮಕರ: ಉದ್ಯೋಗದಲ್ಲಿ ಬಡ್ತಿ . ಉನ್ನತ ಸ್ಥಾನ ಪ್ರಾಪ್ತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಸಿವಿಲ್ ವ್ಯಾಜ್ಯದಲ್ಲಿ ನಿಮ್ಮ ಪರವಾಗಿ ತೀರ್ಪ. ಶುಭಸಂಖ್ಯೆ:4
ಕುಂಭ:ಅಡಕೆ - ಬಾಳೆ ವ್ಯಾಪಾರದಲ್ಲಿ ನಷ್ಟ. ಆಲಸ್ಯದಿಂದ ಅವಕಾಶ ವಂಚಿತರಾಗುವಿರಿ. ವೈದ್ಯರ ಸಲಹೆ ಪಾಲಿಸಿ. ಅನ್ಯರಲ್ಲಿ ವೈಮನಸ್ಸು. ಶುಭಸಂಖ್ಯೆ:1
ಮೀನ:ಗೃಹ ನಿರ್ಮಾಣ ಕಾರ್ಯಕ್ಕೆ ಅಡ್ಡಿ. ರೇಷ್ಮೆ, ಜೇನು ಕೃಷಿಯಿಂದ ಲಾಭ. ಅಮೂಲ್ಯ ವಸ್ತು ಖರೀದಿಸುವಿರಿ. ಮಾನಸಿಕ ಅಶಾಂತಿ. ಶುಭಸಂಖ್ಯೆ:3