ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಆಸ್ತಿಗೆ ಸಂಬಂಧಪಟ್ಟಂತೆ ದೈನಂದಿನ ಕೆಲಸಗಳಲ್ಲಿ ಯಶಸ್ಸು

Nitya-Bhavishya-vvani-1-2-1-1
Published on

ಮೇಷ: ಟ್ರಾವೆಲ್ಸ್ ಉದ್ಯಮದಲ್ಲಿ ಉತ್ತಮ ಆದಾಯ. ಕುಟುಂಬದ ಆಸ್ತಿ ವಿಚಾರ ಮುನ್ನೆಲೆಗೆ. ಮಾಧ್ಯಮದವರಿಗೆ ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ:1

ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ವಿಶೇಷ ದಿನ. ಸಾರ್ವಜನಿಕ ರಂಗದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಶುಭಸಂಖ್ಯೆ:7

ಮಿಥುನ: ಆರಕ್ಷಕ ವೃತ್ತಿಯವರಿಗೆ ಉನ್ನತಾಧಿಕಾರ ಸಿಗಲಿದೆ. ನಿವೇಶನ ಖರೀದಿಗೆ ನಿರ್ಧಾರ. ನ್ಯಾಯಾಲಯದ ವ್ಯವಹಾರದಲ್ಲಿ ಜಯ. ಶುಭಸಂಖ್ಯೆ:3

ಕಟಕ: ಕಮಿಷನ್ ವ್ಯವಹಾರದಲ್ಲಿ ಲಾಭ. ತಾಂತ್ರಿಕ ಪರಿಣಿತರಿಗೆ ಶುಭದಾಯಕ ದಿನ. ರಾಜಕಾರಣಿಗಳಿಗೆ ಸ್ಥಾನ ಪಲ್ಲಟವಾಗಲಿದೆ. ಶುಭಸಂಖ್ಯೆ: 4

ಸಿಂಹ: ಪಾಶ್ಚಾತ್ಯ ನೃತ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ. ಸಿಮೆಂಟ್, ಕಬ್ಬಿಣ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:1

ಕನ್ಯಾ: ಕೇಂದ್ರ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಒತ್ತಡ ಕಡಿಮೆಯಾಗಿ ನೆಮ್ಮದಿ. ಲೇವಾದೇವಿ ವ್ಯಾಪಾರ ಲಾಭದಾಯಕ. ಶುಭಸಂಖ್ಯೆ: 2

ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆಗೆ ಚಿಕಿತ್ಸೆ ಸಿಗಲಿದೆ. ಮಹಿಳೆಯರಿಗೆ ವಸ್ತ್ರ ಲಾಭ. ಆಹಾರ ಸೇವನೆಯಲ್ಲಿ ಎಚ್ಚರವಹಿಸುವುದು ಅಗತ್ಯ. ಶುಭಸಂಖ್ಯೆ:5

ವೃಶ್ಚಿಕ: ಅನಿರೀಕ್ಷಿತವಾಗಿ ಮಗಳ ಮದುವೆ ಪ್ರಸ್ತಾಪ. ಮನೆ ನವೀಕರಣದ ಪರಿಣಿತರಿಗೆ ಲಾಭ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಸಂಖ್ಯೆ: 8

ಧನಸ್ಸು: ಪ್ರಯತ್ನವಿದ್ದಲ್ಲಿ ಆದಾಯ ವೃದ್ಧಿಯಾಗಲಿದೆ. ಕ್ರೀಡಾಪಟುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ. ಮಕ್ಕಳಿಗೆ ಉನ್ನತಾಧಿಕಾರ. ಶುಭಸಂಖ್ಯೆ:1

ಮಕರ: ಪಾಲುದಾರಿಕೆಯಲ್ಲಿ ಉತ್ತಮ ಫಲಿತಾಂಶ. ಧಾನ್ಯ ಮಾರಾಟಸ್ಥರಿಗೆ ಆದಾಯ. ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:7

ಕುಂಭ: ಸ್ನೇಹಿತರೊಂದಿಗೆ ವಿಹಾರ. ಯುವಕರಿಗೆ ಐಟಿ ವೃತ್ತಿಯಲ್ಲಿ ಹಿನ್ನಡೆ. ಆಸ್ತಿಗೆ ಸಂಬಂಧಪಟ್ಟಂತೆ ದೈನಂದಿನ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ:7

ಮೀನ: ಉಪನ್ಯಾಸಕರಿಗೆ ಸ್ವ -ಊರಿಗೆ ವರ್ಗ. ಜೇನು ಕೃಷಿಗೆ ಸರ್ಕಾರದಿಂದ ಧನಸಹಾಯ. ಯಕ್ಷಗಾನ ಕಲಾವಿದರಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net