

ಮೇಷ: ಹೊಸ ಅವಕಾಶಗಳು ಎದುರಾಗುವ ದಿನ. ಕೆಲಸದಲ್ಲಿ ಪ್ರಗತಿ ಕಾಣಬಹುದು. ಕುಟುಂಬದಲ್ಲಿ ಹರ್ಷದ ವಾತಾವರಣ ಇರುತ್ತದೆ. ಶುಭಸಂಖ್ಯೆ:2
ವೃಷಭ: ಹಣಕಾಸು ವ್ಯವಹಾರಗಳಲ್ಲಿ ಎಚ್ಚರ. ಕಚೇರಿಯಲ್ಲಿ ವಿವಾದಗಳನ್ನು ಬಗೆಹರಿಸುವಿರಿ. ಆತ್ಮವಿಶ್ವಾಸದಿಂದ ಕೆಲಸಕಾರ್ಯ ಮಾಡಿ. ಶುಭಸಂಖ್ಯೆ:4
ಮಿಥುನ: ಹೊಸ ಪರಿಚಯಗಳಿಂದ ಪ್ರಯೋಜನವಾಗುವುದು. ಪ್ರಯಾಣದಿಂದ ಲಾಭವಾಗಲಿದೆ. ಸ್ನೇಹಿತರ ಬೆಂಬಲ ಲಭ್ಯವಾಗುವುದು. ಶುಭಸಂಖ್ಯೆ:1
ಕಟಕ: ಆಲೋಚನೆಗಳಲ್ಲಿ ಬದಲಾವಣೆ. ಮನೆ ಸಂಬಂಧಿ ವಿಷಯದಲ್ಲಿ ಸಂತೋಷ. ಅವಿವಾಹಿತರು ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ:6
ಸಿಂಹ: ಕೆಲಸದ ಒತ್ತಡ ಇರುವುದು. ಸಹೋದ್ಯೋಗಿಗಳ ಸಹಕಾರ ಲಭ್ಯವಾಗುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಶುಭಸಂಖ್ಯೆ:7
ಕನ್ಯಾ: ಸಗಟು ವ್ಯವಹಾರದಲ್ಲಿ ಲಾಭವಾಗಿ ಸಮಾಧಾನ. ಆತ್ಮೀಯರ ಭೇಟಿಯಿಂದ ಮಾನಸಿಕ ಸಂತೋಷ. ಮನೋಬಲ ಹೆಚ್ಚಾಗುತ್ತದೆ. ಶುಭಸಂಖ್ಯೆ: 9
ತುಲಾ: ಹಳೆಯ ವಿಚಾರಗಳು ಪರಿಹಾರವಾಗುವ ಸಾಧ್ಯತೆ. ಹಣದ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಇಷ್ಟ ದೇವರಲ್ಲಿ ನಂಬಿಕೆ ಇರಲಿ. ಶುಭಸಂಖ್ಯೆ: 1
ವೃಶ್ಚಿಕ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು. ಧಾರ್ವಿುಕ ಚಟುವಟಿಕೆಗಳಲ್ಲಿ ಆಸಕ್ತಿ ತಾಳುವಿರಿ.ಬಡವರಿಗೆ ಸಹಾಯ ಮಾಡಿ. ಶುಭಸಂಖ್ಯೆ: 3
ಧನಸ್ಸು: ಪ್ರಯಾಣದಿಂದ ಸಂತೋಷ. ಹಿರಿಯರ ಆಶೀರ್ವಾದ ದೊರೆಯುತ್ತದೆ. ಆರ್ಥಿಕ ಲಾಭ ಸಾಧ್ಯವಾಗುವುದು. ಹಕ್ಕಿಗೆ ಆಹಾರ ಹಾಕಿ. ಶುಭಸಂಖ್ಯೆ: 2
ಮಕರ: ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕಲಾವಿದರಿಗೆ ಹೊಸ ಅವಕಾಶ. ಕುಟುಂಬದಲ್ಲಿ ಸಂತೋಷದ ಕ್ಷಣ. ಶುಭಸಂಖ್ಯೆ:5
ಕುಂಭ: ಹೊಸ ಯೋಜನೆಗಳು ಫಲ ನೀಡುತ್ತವೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಬಹುದಿನಗಳ ಕನಸು ಈಡೇರುವ ಸಮಯ. ಶುಭಸಂಖ್ಯೆ:7
ಮೀನ: ಮನಸ್ಸಿಗೆ ಶಾಂತಿ ಸಿಗುವ ದಿನ. ಸಾರ್ವಜನಿಕವಾಗಿ ಮನ್ನಣೆ, ಧಾರ್ವಿುಕ ಕಾರ್ಯಗಳಲ್ಲಿ ತೊಡಗುವಿರಿ. ಆರೋಗ್ಯ ಸುಸ್ಥಿರ. ಶುಭಸಂಖ್ಯೆ: 9