ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ನೇಹಿತರಿಂದ ಕಷ್ಟದಲ್ಲಿ ಸಹಕಾರ

Nitya Bhavisya Vijayavani
Published on

ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಬಂಧುಗಳಿಂದ ನಿಂದನೆ. ಶುಭಸಂಖ್ಯೆ: 5

ವೃಷಭ: ಪತ್ರ ವ್ಯವಹಾರದಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ದೇವತಾಕಾರ್ಯಗಳಿಗೆ ತಡೆ. ಮನೋ ನಿಯಂತ್ರಣ ಇಲ್ಲದೆ ಸಮಸ್ಯೆ ಶುಭಸಂಖ್ಯೆ: 9

ಮಿಥುನ: ದವಸ ಧಾನ್ಯಗಳ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ. ಮಹಿಳೆಯರಿಗೆ ಅನಗತ್ಯ ಮಾತಿನಿಂದ ಸಮಸ್ಯೆ. ಪತ್ರ ವ್ಯವಹಾರಗಳಲ್ಲಿ ಹಿನ್ನಡೆ. ಶುಭಸಂಖ್ಯೆ:1

ಕಟಕ:ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರರೊಂದಿಗೆ ವಾಗ್ವಾದ. ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ:9

ಸಿಂಹ: ಸಮಾರಂಭಕ್ಕೆ ಅಧಿಕ ಖರ್ಚು. ಕುಲದೇವರ ದರ್ಶನ ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಂದರ್ಭ. ಶುಭಸಂಖ್ಯೆ:1

ಕನ್ಯಾ: ಸ್ನೇಹಿತರಿಂದ ಕಷ್ಟದಲ್ಲಿ ಸಹಕಾರ. ಉನ್ನತ ಹುದ್ದೆಯಲ್ಲಿ ಇರುವವರಿಗೆ ಒತ್ತಡ. ಸರ್ಕಾರಿ ವ್ಯಕ್ತಿಗಳಿಂದ ಅದೃಷ್ಟ ಕೈತಪ್ಪುವುದು. ಶುಭಸಂಖ್ಯೆ:3

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಗಾಯಕರು ಮತ್ತು ವಾದಕರ ಗೌರವಕ್ಕೆ ಚ್ಯುತಿ. ಸ್ವಂತ ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ:1

ವೃಶ್ಚಿಕ: ತಂದೆಯಿಂದ ಅನುಕೂಲ. ಪ್ರಯಾಣದಲ್ಲಿ ಅನುಕೂಲಕರ ವಾತಾವರಣ. ಕೆಲಸ ಕಾರ್ಯಗಳಲ್ಲಿ ಜಯ. ಮಿತ್ರರಿಂದ ಸಂಕಷ್ಟ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ. ಅನಾರೋಗ್ಯ ಸಮಸ್ಯೆ. ಉದ್ಯೋಗದಲ್ಲಿ ಸಮಸ್ಯೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 8

ಮಕರ: ಸಂಗಾತಿಯಿಂದ ಅನುಕೂಲ. ತಂದೆಯೊಡನೆ ಆಸ್ತಿ ವಿಚಾರದಲ್ಲಿ ಕಲಹ ಆದೀತು. ಮಗಳ ವೈವಾಹಿಕ ಜೀವನದಲ್ಲಿ ಏರುಪೇರು. ಶುಭಸಂಖ್ಯೆ:5

ಕುಂಭ: ತಂದೆಯ ಆರೋಗ್ಯದಲ್ಲಿ ಸಮಸ್ಯೆ. ಸಂಗಾತಿಯಿಂದ ವ್ಯಾಪಾರ ಅಭಿವೃದ್ಧಿಗೆ ಆರ್ಥಿಕ ಸಹಾಯ. ಕೋರ್ಟ್ ಕೇಸುಗಳಲ್ಲಿ ಮುನ್ನಡೆ. ಶುಭಸಂಖ್ಯೆ: 9

ಮೀನ: ಪ್ರೀತಿ -ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ. ಭಾವನೆ, ಆಸೆಗಳಿಗೆ ಪೆಟ್ಟು ಬಿದ್ದೀತು. ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net