ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಧನ ಸಹಾಯ ಒದಗಿ ಬರುವುದು

Nitya Bhavisya Vijayavani
Published on

ಮೇಷ:ಭೂಮಿಯ ವಿಷಯವಾಗಿ ಕಲಹ ಉಂಟಾಗಬಹುದು. ಶರೀರಕ್ಕೆ ಗಾಯವಾದೀತು, ಎಚ್ಚರ. ಸರ್ಕಾರದಿಂದ ಧನ ಸಹಾಯ. ಶುಭಸಂಖ್ಯೆ:1

ವೃಷಭ:ಬಂಧುಗಳಿಂದ ಕಿರಿಕಿರಿ ಆಗಬಹುದು. ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭವಾಗಲಿದೆ. ಬೆನ್ನು ನೋವಿನ ತೊಂದರೆ. ಶುಭಸಂಖ್ಯೆ:6

ಮಿಥುನ:ಅನವಶ್ಯಕವಾಗಿ ವಾದ-ವಿವಾದ ಉಂಟಾಗಬಹುದು. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ. ವೈದ್ಯರಿಗೆ ಶುಭ. ಶುಭಸಂಖ್ಯೆ: 2

ಕಟಕ:ಹೂಡಿಕೆ ವ್ಯವಹಾರದಲ್ಲಿ ನಷ್ಟ. ವೈಭವೋಪೇತ ವಸ್ತುಗಳನ್ನು ಖರೀದಿ ಮಾಡುವಿರಿ. ಕಾನೂನು ವ್ಯಾಜ್ಯಗಳಲ್ಲಿ ಜಯವಿದೆ. ಶುಭಸಂಖ್ಯೆ:4

ಸಿಂಹ: ಪಿತೃ ವರ್ಗದಿಂದ ಧನ ಸಹಾಯ ಒದಗಿ ಬರುವುದು. ಉದ್ಯೋಗದಲ್ಲಿ ನೆಮ್ಮದಿದಾಯಕ ದಿನ. ಬಂಧುಗಳ ಭೇಟಿಯಾಗುವುದು. ಶುಭಸಂಖ್ಯೆ:5

ಕನ್ಯಾ:ಅತಿಯಾದ ಸುತ್ತಾಟ ನಿಯಂತ್ರಿಸಿ. ಆಭರಣ ಮಾರಾಟಗಾರರಿಗೆ ಲಾಭ. ಗೃಹಕೈಗಾರಿಕೆ ವಸ್ತುಗಳ ವ್ಯಾಪಾರದಲ್ಲಿ ಮಧ್ಯಮ ಫಲ. ಶುಭಸಂಖ್ಯೆ:7

ತುಲಾ:ವಕೀಲರಿಗೆ ಹೆಸರು, ಕೀರ್ತಿ ಲಭ್ಯ. ವಾಣಿಜ್ಯ ಅಧ್ಯಯನದಲ್ಲಿ ಶುಭದಿನ. ವಿದ್ಯಾರ್ಥಿಗಳಿಗೆ ಅವಕಾಶಗಳು ದೊರೆಯುವವು. ಶುಭಸಂಖ್ಯೆ: 2

ವೃಶ್ಚಿಕ:ವಿದ್ಯೆಯಲ್ಲಿ ನಿರಾಸಕ್ತಿ ತಾಳುವಿರಿ. ಕಾರ್ವಿುಕ ವರ್ಗದವರಿಗೆ ಉತ್ತಮ ದಿನ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಿರಿ. ಶುಭಸಂಖ್ಯೆ:5

ಧನುಸ್ಸು:ಸಿನಿಮಾರಂಗದವರಿಗೆ ಸಮಾಧಾನ ತರುವ ದಿನ. ಸಂಬಂಧಿಗಳಿಂದ ಧನ ಸಹಾಯ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ:9

ಮಕರ:ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುವುದು ನಿಶ್ಚಿತ. ವಕೀಲರಿಗೆ ಕಾರ್ಯಸಿದ್ಧಿ. ಆರೋಗ್ಯ ವೃದ್ಧಿ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 3

ಕುಂಭ:ಹಣಕಾಸಿನ ವಿಷಯದಲ್ಲಿ ಕಲಹವಾಗಬಹುದು. ಮಾತಾಪಿತರಲ್ಲಿ ವಾತ್ಸಲ್ಯ. ಸಲ್ಲದ ಅಪವಾದ ಬಂದೀತು. ಹಿರಿಯರ ಸಲಹೆ. ಶುಭಸಂಖ್ಯೆ: 3

ಮೀನ:ಔಷಧ ವ್ಯಾಪಾರದಲ್ಲಿ ನಷ್ಟ. ತಂದೆಯ ಅನಾರೋಗ್ಯ ಸಮಸ್ಯೆ ಕಾಡಬಹುದು. ಅನಿರೀಕ್ಷಿತ ಧನ ಲಾಭವಾಗಿ ಕಷ್ಟಗಳು ದೂರ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net