ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಗುಪ್ತ ಮಾರ್ಗದಿಂದ ಜಯ

Nitya Bhavisya Vijayavani
Published on

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಜೀವನದ ಬಗ್ಗೆ ದೂರದೃಷ್ಟಿ. ಮಾಟದ ಭೀತಿ. ಅನಾರೋಗ್ಯ, ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ:8

ವೃಷಭ:ಸಾಲ ತೀರಿಸಲು ತಾಯಿಯ ಸಹಕಾರ. ವೃತ್ತಿಪರರಿಗೆ ಅನುಕೂಲ. ಸ್ಥಿರಾಸಿ ಯೋಗ. ದೈವಕಾರ್ಯಗಳು, ಸರ್ಕಾರದಿಂದ ನೆರವು. ಶುಭಸಂಖ್ಯೆ:1

ಮಿಥುನ:ಅನಗತ್ಯ ಪ್ರಯಾಣ. ಧೈರ್ಯದಿಂದ ಕಾರ್ಯ ಜಯ. ಅನಾರೋಗ್ಯ. ಉದ್ಯೋಗ ಬದಲಾವಣೆ ಆಲೋಚನೆ, ಆಯುಷ್ಯದ ಭೀತಿ. ಶುಭಸಂಖ್ಯೆ:5

ಕಟಕ:ಆರ್ಥಿಕ ಅನುಕೂಲ. ಸ್ವಯಂಕೃತ ಅಪರಾಧಗಳು. ದಾಂಪತ್ಯದಲ್ಲಿ ನಿರಾಸಕ್ತಿ. ಅಧಿಕ ಕೋಪ ಹಾಗೂ ದುಡುಕಿನ ಮಾತು ಬೇಡ. ಶುಭಸಂಖ್ಯೆ:6

ಸಿಂಹ: ಸೋಮಾರಿತನದಿಂದ ಅವಕಾಶ ತಪು್ಪವುದು. ಅನಾರೋಗ್ಯದ ಚಿಂತೆ. ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ. ಉದರ ಸಂಬಂಧಿ ತೊಂದರೆ. ಶುಭಸಂಖ್ಯೆ: 3

ಕನ್ಯಾ:ಮನೆ ನವೀಕರಣಕ್ಕೆ ಖರ್ಚು. ಗುಪ್ತ ಮಾರ್ಗದಿಂದ ಜಯ. ಪ್ರಯಾಣದ ಯೋಚನೆ. ಪರಸ್ಥಳ ವಾಸ, ಅಧ್ಯಾತ್ಮದತ್ತ ಸೆಳೆತ. ಶುಭಸಂಖ್ಯೆ: 6

ತುಲಾ:ಅಪರಿಚಿತ ವ್ಯಕ್ತಿಗಳಿಂದ ಅನುಕೂಲ. ಜಲಉತ್ಪನ್ನ ವ್ಯಾಪಾರದಲ್ಲಿ ಲಾಭದ ಪ್ರಮಾಣ ಅಧಿಕ. ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 1

ವೃಶ್ಚಿಕ: ರಾಜಕೀಯದವರ ಭೇಟಿ. ಯಾತ್ರಾಸ್ಥಳ ಭೇಟಿಯ ಮನಸ್ಸು. ಸಾಮಾಜಿಕ ಸೇವೆಯಲ್ಲಿ ತೊಡಗುವಿರಿ. ಹಿರಿಯರ ಆಶೀರ್ವಾದ ಪಡೆಯುವಿರಿ.ಶುಭಸಂಖ್ಯೆ: 1

ಧನುಸ್ಸು:ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ದೈವದ ಮೊರೆ ಹೋಗುವುದು ಅನಿವಾರ್ಯ. ಪೂಜೆಗಳಲ್ಲಿ ಅಪಚಾರ. ಭವಿಷ್ಯದ ಚಿಂತೆ. ಶುಭಸಂಖ್ಯೆ:9

ಮಕರ:ಗುಪ್ತ ಮಾರ್ಗಗಳಿಂದ ಆಪತ್ತು. ಆಲಸ್ಯದಿಂದ ಸಮಸ್ಯೆ. ರಹಸ್ಯ ಸಂಪತ್ತಿನ ಯೋಚನೆ. ದುರ್ಘಟನೆಯ ನೆನಪು. ಧನಾಗಮನ. ಶುಭಸಂಖ್ಯೆ:4

ಕುಂಭ: ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯಲ್ಲಿ ಬಿರುಕು. ವೈವಾಹಿಕ ಬದುಕಿನ ಚಿಂತೆ. ಅಗೋಚರ ವಿಷಯದ ಕುರಿತು ಆತಂಕ . ಶುಭಸಂಖ್ಯೆ: 2

ಮೀನ:ಹಿತಶತ್ರುಗಳ ಕಾಟದಿಂದ ಪದವಿ ಕೈತಪ್ಪಲಿದೆ. ಕೈಕಾಲು ನೋವು. ತಾಯಿಯ ಬಂಧುಗಳಿಂದ ಸಮಸ್ಯೆ. ರಾಜಕೀಯದವರ ಭೇಟಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net