

ಮೇಷ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಾಬರಿ ತರುವ ಘಟನೆ ನಡೆಯಬಹುದು. ಕಲಾವಿದರಿಗೆ ಮನೋಧೈರ್ಯ ದ್ವಿಗುಣ. ಶುಭಸಂಖ್ಯೆ:1
ವೃಷಭ: ವಾಹನ ಚಾಲನೆಯಲ್ಲಿ ಎಚ್ಚರ. ಉದ್ಯೋಗದಲ್ಲಿ ಅಭಿವೃದ್ಧಿ, ಹಣದ ಹರಿವು ಹೆಚ್ಚಲಿದೆ. ಅಲಂಕಾರಿಕ ವಸ್ತು ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 1
ಮಿಥುನ: ಕೋರ್ಟ್ ಕೆಲಸ ಕಾರ್ಯಗಳಲ್ಲಿ ಸಾಫಲ್ಯ. ತಲೆನೊವು ಪರಿಹಾರವಾಗಲಿದೆ. ತರಕಾರಿ ವ್ಯಾಪಾರಿಗಳಿಗೆ ದೊಡ್ಡಮಟ್ಟದ ಲಾಭ. ಶುಭಸಂಖ್ಯೆ: 6
ಕಟಕ: ಆಮದು ರಫ್ತು ವ್ಯವಹಾರದಲ್ಲಿ ಒಳ್ಳೆಯ ಅಭಿವೃದ್ಧಿ. ನಿರೀಕ್ಷೆಯಲ್ಲಿದ್ದವರಿಗೆ ವಿವಾಹ ಕೂಡಿ ಬರಲಿದೆ. ಪ್ರಯಾಣದಲ್ಲಿ ಅನುಕೂಲ. ಶುಭಸಂಖ್ಯೆ:5
ಸಿಂಹ: ಸಾರ್ವಜನಿಕವಾಗಿ ಕೀರ್ತಿ ವೃದ್ಧಿಯಾಗುವುದು. ಹಣಕಾಸಿನ ತೊಂದರೆ ನಿವಾರಣೆ ನಿಮ್ಮ ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ. ಶುಭಸಂಖ್ಯೆ:8
ಕನ್ಯಾ: ಮಕ್ಕಳಿಗೋಸ್ಕರ ಅಧಿಕ ಖರ್ಚು. ಸಿದ್ಧ ಉಡುಪು ಮಾರಾಟಗಾರರಿಗೆ ಉತ್ತಮ ಧನಲಾಭ. ಮಿತ್ರರೊಂದಿಗೆ ದೂರ ಪ್ರಯಾಣ. ಶುಭಸಂಖ್ಯೆ:4
ತುಲಾ: ನೂತನ ಗೃಹ ನಿರ್ವಣಕ್ಕೆ ಚಾಲನೆ ದೊರೆಯುವುದು. ಸಂಗಾತಿಯ ಆರೋಗ್ಯದಲ್ಲಿ ಎಚ್ಚರ ವಹಿಸಿ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:7
ವೃಶ್ಚಿಕ: ಕಚೇರಿಯ ಜವಾಬ್ದಾರಿಯಲ್ಲಿ ಬದಲಾವಣೆ. ಸಾಲತೀರಿಸಲು ನೆರವು. ಆಸ್ತಿಗೊಂದಲ ನಿವಾರಣೆ. ಸಂಜೆ ಹಳೆ ಸ್ನೇಹಿತನ ಭೇಟಿ. ಶುಭಸಂಖ್ಯೆ:7
ಧನಸ್ಸು: ನಿರೀಕ್ಷಿತ ಫಲ ಸಿಗಲು ಕಷ್ಟಪಡಬೇಕಾಗುತ್ತದೆ. ಆಸ್ತಿ ನೋಂದಣಿ ಕೆಲಸಗಳಲ್ಲಿ ಯಶಸ್ಸು. ಉನ್ನತ ವಿದ್ಯಾಭ್ಯಾಸಕ್ಕೆ ಹಾದಿ ಸುಗಮ. ಶುಭಸಂಖ್ಯೆ:9
ಮಕರ: ವಿದ್ಯಾರ್ಥಿಗಳಿಗೆೆ ತಾಳ್ಮೆ ಇದ್ದಲ್ಲಿ ಉತ್ತಮ ಫಲಿತಾಂಶ. ಯಂತ್ರೋಪಕರಣಗಳಿಂದ ಲಾಭ. ಹತಾಶೆಯ ಭಾವದಿಂದ ಹೊರಬನ್ನಿ. ಶುಭಸಂಖ್ಯೆ:3
ಕುಂಭ: ಪರರ ಮಧ್ಯಸ್ಥಿಕೆಯಿಂದ ಕೌಟುಂಬಿಕ ಸಮಸ್ಯೆಗೆ ಪರಿಹಾರ. ಸಹೋದರಿಯ ಆರೋಗ್ಯದಲ್ಲಿ ಚೇತರಿಕೆಯಾಗಿ ಸಮಾಧಾನ. ಶುಭಸಂಖ್ಯೆ:2
ಮೀನ: ಪ್ರಯಾಣದಲ್ಲಿ ಅಪರಿಚಿತರಿಂದ ಸಹಾಯ ಸಿಗಲಿದೆ. ಸಾಲಬಾಧೆ ನಿವಾರಣೆ. ತೆಂಗು-ಬಾಳೆ ಕೃಷಿಕರಿಗೆ ಆರ್ಥಿಕ ಕಷ್ಟ ನಿವಾರಣೆೆ. ಶುಭಸಂಖ್ಯೆ:9