

ಮೇಷ: ಶಸ್ತ್ರ ವೈದ್ಯರಿಗೆ ವಿಶೇಷ ದಿನ. ಚಿತ್ರಕಾರರು ಬಂದ ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ. ಹಣಕಾಸಿನ ಕೊರತೆ ಇರುವುದಿಲ್ಲ. ಶುಭಸಂಖ್ಯೆ: 3
ವೃಷಭ: ರಾಜಕೀಯ ವರ್ಗದವರಿಗೆ ಶುಭದಾಯಕ ದಿವಸ. ಕೃಷಿಕರಿಗೆ ನಷ್ಟವಾಗುವ ಸಾಧ್ಯತೆಯಿದೆ. ದಿನಸಿ ವ್ಯಾಪಾರಸ್ಥರಿಗೆ ಧನಲಾಭ. ಶುಭಸಂಖ್ಯೆ:8
ಮಿಥುನ: ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿಯಾಗುವುದು. ಬಂಧುಗಳಿಂದ ಆರ್ಥಿಕ ಸಹಾಯ ಸಿಗಲಿದೆ. ಪ್ರೇಮಿಗಳ ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ:1
ಕಟಕ: ಸರ್ಕಾರಿ ನೌಕರರಿಗೆ ವರ್ಗಾವಣೆಯಾಗುವ ಸಂಭವ. ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ. ಮಹಿಳೆಯರಿಗೆ ಆರ್ಥಿಕ ಸಂಕಷ್ಟ. ಶುಭಸಂಖ್ಯೆ:6
ಸಿಂಹ: ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಸಿಗಲಿದೆ. ದಾಂಪತ್ಯದಲ್ಲಿ ಸಂತೋಷದ ವಾತಾವರಣ. ನವದಂಪತಿಗಳಿಗೆ ಸಂತಾನ ಯೋಗ. ಶುಭಸಂಖ್ಯೆ: 2
ಕನ್ಯಾ: ಮಗನ ಮದುವೆಗೆ ಬಂಧು-ಮಿತ್ರರ ಸಹಕಾರ ಸಿಗಲಿದೆ. ಹೂಡಿಕೆಯಲ್ಲಿ ಲಾಭವಾಗುವುದು. ಭವಿಷ್ಯದ ದಿನಗಳ ಚಿಂತೆ ಕಾಡಲಿದೆ. ಶುಭಸಂಖ್ಯೆ: 5
ತುಲಾ: ಕೆಲಸದಲ್ಲಿ ಬಡ್ತಿ ದೊರೆಯುವ ಸಂಭವ. ಮಾತೃ ವರ್ಗದವರಿಂದ ಸಹಾಯ ಸಿಗುವುದು. ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆ. ಶುಭಸಂಖ್ಯೆ: 4
ವೃಶ್ಚಿಕ: ಮೋಜಿಗೆ ಹಣ ವ್ಯಯ. ಕೆಲಸದ ಒತ್ತಡದಿಂದ ಅಸ್ವಸ್ಥತೆ. ಸಹೋದರರೊಂದಿಗೆ ಅನವಶ್ಯಕ ವಾಗ್ವಾದ ಮಾಡುವುದು ಸರಿಯಲ್ಲ. ಶುಭಸಂಖ್ಯೆ:8
ಧನಸ್ಸು: ಪ್ರಮುಖ ನಿರ್ಧಾರದಲ್ಲಿ ಸ್ಥಿರವಾದ ಮನಸ್ಸು. ರಿಯಲ್ ಎಸ್ಟೇಟ್ನಲ್ಲಿ ಯಶ. ಲೇವಾದೇವಿ ವ್ಯವಹಾರದಲ್ಲಿ ಬುದ್ಧಿವಂತಿಕೆ ಅಗತ್ಯ. ಶುಭಸಂಖ್ಯೆ:3
ಮಕರ: ಮಂಡಿ ನೋವಿನ ಸಮಸ್ಯೆ. ಉದ್ಯಮಸ್ಥ ಮಹಿಳೆ ಯರಿಗೆ ಅಧಿಕ ಕೆಲಸದೊತ್ತಡ. ವ್ಯಾಪಾರಿಗಳಿಗೆ ವ್ಯಾಪಾರ ಕುಸಿತದ ಚಿಂತೆ. ಶುಭಸಂಖ್ಯೆ:2
ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು ಆದೀತು. ಪತ್ನಿಯೊಂದಿಗೆ ಪುಣ್ಯಕ್ಷೇತ್ರ ದರ್ಶನ. ದುಡುಕಿನ ನಿರ್ಧಾರದಿಂದ ಆರ್ಥಿಕ ಹಾನಿ. ಶುಭಸಂಖ್ಯೆ:1
ಮೀನ: ವಿವಾಹ ಪ್ರಯತ್ನಕ್ಕೆ ಅನಿರೀಕ್ಷಿತ ತೊಂದರೆ ಸಾಧ್ಯತೆ. ಸಗಟು ವ್ಯಾಪಾರಸ್ಥರಿಗೆ ಮನಸ್ಸಿನಲ್ಲಿ ಹೆದರಿಕೆ. ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 9