

ಮೇಷ: ಜಿಮ್ ತರಬೇತುದಾರರಿಗೆ ಅನಾರೋಗ್ಯ. ರಕ್ಷಣಾ ಕ್ಷೇತ್ರದ ಕೆಲಸಗಾರರಿಗೆ ವರ್ಗಾವಣೆ. ಆಟೋ ಮೊಬೈಲ್ಸ್ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ:ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ. ವಕೀಲ ವೃತ್ತಿಯಲ್ಲಿ ಯಶ ಸಿಗಲಿದೆ. ಜೇನು ಮತ್ತು ರೇಷ್ಮೆ ಕೃಷಿಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ:9
ಮಿಥುನ:ಸಾರ್ವಜನಿಕ ರಂಗದಲ್ಲಿ ಮನ್ನಣೆ ಸಿಗಲಿದೆ. ಪದವಿ ಪ್ರಾಪ್ತಿಯಲ್ಲಿ ಸ್ನೇಹಿತರಿಂದ ತೊಂದರೆ. ನಿವೇಶನ ಖರೀದಿಗೆ ನಿರ್ಧರಿಸುವಿರಿ. ಶುಭಸಂಖ್ಯೆ: 3
ಕಟಕ: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ನ್ಯಾಯಾಲಯದ ಕಟ್ಟಳೆಗಳು ಶೀಘ್ರ ಇತ್ಯರ್ಥ. ಮಾತೃ ಮೂಲವಾದ ಆಸ್ತಿ ಸಿಗಲಿದೆ. ಶುಭಸಂಖ್ಯೆ: 9
ಸಿಂಹ: ಕಿರುಚಿತ್ರ, ನಾಟಕ ನಟರಿಗೆ ಗೌರವ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಗತಿ. ಯಕ್ಷಗಾನ, ನಾಟ್ಯ ಕಲಾವಿದರಿಗೆ ವಿದೇಶದಲ್ಲಿ ವೇದಿಕೆ ಲಭ್ಯ. ಶುಭಸಂಖ್ಯೆ:8
ಕನ್ಯಾ: ಅಧಿಕ ಖರ್ಚು, ಕೋರ್ಟ್ ಕೇಸ್ಗಳಲ್ಲಿ ಸೋಲು. ಅಧಿಕ ಕೋಪ, ಅತಿ ಆತ್ಮವಿಶ್ವಾಸದಿಂದ ಸಮಸ್ಯೆ. ಪ್ರಯಾಣದಲ್ಲಿ ಅಡೆತಡೆಗಳು.ಶುಭಸಂಖ್ಯೆ: 3
ತುಲಾ: ಖರೀದಿಗೆ ಅಧಿಕ ಖರ್ಚು. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಪಾಲುದಾರಿಕೆಯಲ್ಲಿ ಆಕಸ್ಮಿಕ ಅವಕಾಶ. ದೂರ ಪ್ರಯಾಣದಲ್ಲಿ ಲಾಭ. ಶುಭಸಂಖ್ಯೆ:2
ವೃಶ್ಚಿಕ: ಅನಾರೋಗ್ಯ ಕಾಡಬಹುದು. ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಿ ಬೇಸರ. ಉದ್ಯೋಗದ ಅವಕಾಶದಿಂದ ವಂಚಿತರಾಗುವಿರಿ. ಶುಭಸಂಖ್ಯೆ: 8
ಧನುಸ್ಸು:ಕಲಾವಿದರಿಗೆ ಹಿತಶತ್ರುಗಳಿಂದ ವಂಚನೆ. ಸಂಗಾತಿಗೋಸ್ಕರ ಖರ್ಚು ಮಾಡಬೇಕಾಗುವುದು. ಎಲೆಕ್ಟ್ರಾನಿಕ್ಸ್ ಸಾಧನಗಳಿಂದ ನಷ್ಟ. ಶುಭಸಂಖ್ಯೆ: 2
ಮಕರ: ಕುಟುಂಬದ ಪ್ರಯಾಣದಲ್ಲಿ ವಿಘ್ನ. ಪತಿಗೆ ಅನಾ ರೋಗ್ಯ. ಸಾಲ ಮಾಡುವ ಯೋಚನೆ ಮಾಡುವಿರಿ. ಆರ್ಥಿಕವಾಗಿ ಉತ್ತಮ ದಿನ. ಶುಭಸಂಖ್ಯೆ: 2
ಕುಂಭ: ಸಂಗಾತಿಯಿಂದ ಲಾಭ. ಪಾಲುದಾರಿಕೆಯಲ್ಲಿ ಒತ್ತಡ. ಪ್ರಯಾಣ ಮುಂದೂಡಬೇಕಾದೀತು. ಸ್ನೇಹಿತರ ವರ್ತನೆಯಿಂದ ಬೇಸರ. ಶುಭಸಂಖ್ಯೆ:4
ಮೀನ:ವೈದ್ಯಕೀಯ ಕೆಲಸಗಾರರಿಗೆ ವರ್ಗಾವಣೆ. ಉದ್ಯೋಗದಲ್ಲಿ ಯಶಸ್ಸು. ಸಂಗಾತಿಯಿಂದ ಕಿರಿಕಿರಿ. ವಾಹನ ಖರೀದಿಯ ಯೋಚನೆ. ಶುಭಸಂಖ್ಯೆ: 2