ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕಳೆದುಹೋದ ವಸ್ತು ಕೈಸೇರುವುದು

Nitya Bhavisya Vijayavani
Published on

ಮೇಷ: ತೀರ್ಥಕ್ಷೇತ್ರ ದರ್ಶನ. ಕುಟುಂಬದಲ್ಲಿ ಆಸ್ತಿ ವಿಭಾಗಕ್ಕೆ ನಿರ್ಧಾರ. ಹಿರಿಯರ ಆಗಮನದಿಂದ ಸಂತೋಷ. ಪತ್ನಿಗೆ ಅನಾರೋಗ್ಯ. ಶುಭಸಂಖ್ಯೆ:5

ವೃಷಭ:ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬರಬಹುದು, ನಿಯಂತ್ರಿಸಿ. ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ಮಿಥುನ:ಆಸ್ತಿ ಖರೀದಿಯಲ್ಲಿ ಆಲೋಚಿಸಿ ಮುಂದುವರಿಯಿರಿ. ತೊಂದರೆಗಳಿಗೆ ಪರಿಹಾರ ಸಿಗಲಿದೆ. ವಾಹನ ಮಾರಾಟದಿಂದ ಲಾಭ. ಶುಭಸಂಖ್ಯೆ:1

ಕಟಕ:ಯಂತ್ರಗಳ ಜತೆಗಿನ ಕೆಲಸದಲ್ಲಿ ಜಾಗ್ರತೆ. ಪಟ್ಟುಬಿಡದೆ ಸರ್ಕಾರಿ ಕೆಲಸ ಮಾಡಿಸಿಕೊಳ್ಳುವಿರಿ. ಕಳೆದುಹೋದ ವಸ್ತು ಕೈಸೇರುವುದು. ಶುಭಸಂಖ್ಯೆ:2

ಸಿಂಹ: ವೈಯಕ್ತಿಕ ಕೆಲಸಗಳು ಕೈಗೂಡುವವು. ದುಷ್ಟ ಜನರ ಸಹವಾಸ. ಮನಕ್ಲೇಷ. ಪದವಿ ಪ್ರಾಪ್ತಿಯಲ್ಲಿ ಹಿತ ಶತ್ರುಗಳಿಂದ ಅಡೆತಡೆ. ಶುಭಸಂಖ್ಯೆ:7

ಕನ್ಯಾ:  ಹಣಕಾಸಿನ ವಿಷಯಗಳಲ್ಲಿ ಎಚ್ಚರ. ಪೀಠೋಪಕರಣ ಖರೀದಿಗೆ ಖರ್ಚು. ಮಗಳಿಗೆ ವಿವಾಹ ಯೋಗ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ:8

ತುಲಾ: ಧಾರ್ವಿುಕ ಆಚರಣೆಗಳಿಂದ ಮನಃಶಾಂತಿ. ಕಚೇರಿಯ ಸ್ಥಳ ಬದಲಾವಣೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭ. ಪರಿಶ್ರಮಕ್ಕೆ ಫಲ. ಶುಭಸಂಖ್ಯೆ:1

ವೃಶ್ಚಿಕ: ಆಸ್ತಿ ಖರೀದಿಸುವ ವ್ಯವಹಾರಕ್ಕೆ ವಿಘ್ನ ಎದುರಾಗಲಿದೆ. ವೈದ್ಯರಿಗೆ ಉತ್ತಮ ಆದಾಯವಿದೆ. ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಶುಭಸಂಖ್ಯೆ:3

ಧನುಸ್ಸು:ಮಧ್ಯಸ್ಥಿಕೆಯಿಂದ ಉತ್ತಮ ಲಾಭ. ನೌಕರಿಯಲ್ಲಿ ಬಡ್ತಿ. ಆಹಾರ ಧಾನ್ಯ ಬೆಳೆಗಾರರಿಗೆ ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 4

ಮಕರ: ಬೆಳೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಸ್ವಂತ ಸಾಮರ್ಥ್ಯದಿಂದ ಪ್ರಗತಿ ಸಾಧನೆಯಾಗುವುದು. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ:6

ಕುಂಭ:ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಒಪ್ಪಂದ ವ್ಯವಹಾರಗಳಿಂದ ಲಾಭ. ಸ್ತ್ರೀಯರಿಗೆ ಮನಃಶಾಂತಿ. ಕ್ರಿಕೆಟ್ ತರಬೇತುದಾರರಿಗೆ ಲಾಭ. ಶುಭಸಂಖ್ಯೆ: 3

ಮೀನ:ಕಚೇರಿಯಲ್ಲಿ ಒತ್ತಡ ಹೆಚ್ಚಾಗಲಿದೆ. ಲೆಕ್ಕಪರಿಶೋಧಕರ ವೃತ್ತಿಯಲ್ಲಿ ತೊಂದರೆ. ಸ್ತ್ರೀಯರಿಂದ ಸಮಸ್ಯೆ. ಅನಾರೋಗ್ಯ ಕಾಡೀತು. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net