ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಕಾಶ ಹುಡುಕಿ ಬರಲಿದೆ

Nitya Bhavisya Vijayavani
Published on

ಮೇಷ:ಹಣಕಾಸಿನ ವಿಚಾರದಲ್ಲಿ ಜಾಣತನದ ನಿರ್ಧಾರ ತೆಗೆದುಕೊಳ್ಳಿ. ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆ ಇರುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 9

ವೃಷಭ:ಪೂರ್ವಿಕರ ಆಸ್ತಿಯಿಂದ ಲಾಭ ಆಗಲಿದೆ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಆನ್ಲೈನ್ ವ್ಯವಹಾರದಲ್ಲಿ ಮೋಸ ಹೋಗುವಿರಿ. ಶುಭಸಂಖ್ಯೆ: 1

ಮಿಥುನ: ಕಚೇರಿಯಲ್ಲಿ ಮಾನಸಿಕ ಒತ್ತಡದಿಂದ ಮುಕ್ತಿ. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಶೈಕ್ಷಣಿಕ ವೃತ್ತಿದಾರರಿಗೆ ಶುಭದಿನ. ಶುಭಸಂಖ್ಯೆ:7

ಕಟಕ:ಕುಟುಂಬದೊಂದಿಗೆ ವಿಹಾರ. ರಿಯಲ್ ಎಸ್ಟೇಟ್​ನಲ್ಲಿ ಯೋಚಿಸಿ ಹೂಡಿಕೆ ಮಾಡಿ. ಸಾಮಾಜಿಕ ಕೆಲಸದಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ: 2

ಸಿಂಹ:ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಅಜ್ಞಾತ ಭಯದಿಂದ ಬಳಲುವಿರಿ. ವಕೀಲರಿಗೆ ಪ್ರತಿಕೂಲ ವಾತಾವರಣ. ಶುಭಸಂಖ್ಯೆ:4

ಕನ್ಯಾ:ನಿಮ್ಮ ಪ್ರತಿಭೆ, ಕೌಶಲಕ್ಕೆ ಗೌರವ ಸಿಗಲಿದೆ. ವಿಚ್ಛೇದಿತರಿಗೆ ಮರುವಿವಾಹ ಸಾಧ್ಯತೆ. ಸಾರಿಗೆ ಕ್ಷೇತ್ರದ ಕಾರ್ವಿುಕರಿಗೆ ಶುಭದಿನ. ಶುಭಸಂಖ್ಯೆ: 7

ತುಲಾ:ಆಸ್ತಿಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಚ್ಚರದಿಂದಿರಿ. ಕೌಟುಂಬಿಕವಾಗಿ ಸಂತೋಷ. ನಟರಿಗೆ ಅಪಾರ ಯಶಸ್ಸು. ಶುಭಸಂಖ್ಯೆ:1

ವೃಶ್ಚಿಕ:ಪತಿಯ ಆರೋಗ್ಯ ಸುಧಾರಿಸಲಿದೆ. ಅವಕಾಶ ಹುಡುಕಿ ಬರಲಿದೆ. ಸರ್ಕಾರಿ ಹರಾಜಿನಲ್ಲಿ ಅಧಿಕ ಲಾಭ. ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ: 8

ಧನುಸ್ಸು: ಒಡಹುಟ್ಟಿದವರೊಂದಿಗೆ ಸಂಬಂಧಗಳಲ್ಲಿ ಬಿರುಕು. ಮನೆ ಮಾರಾಟ ಆಗಲಿದೆ. ಗುರು ಹಿರಿಯರ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ: 4

ಮಕರ:ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವೆಚ್ಚ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಶುಭದಿನ. ನಂಬಿದವರಿಂದಲೇ ಮೋಸ. ಶುಭಸಂಖ್ಯೆ:8

ಕುಂಭ:ಆಲಸ್ಯದಿಂದ ಅವಕಾಶ ವಂಚಿತರಾಗುವಿರಿ. ಮಾರಾಟದಲ್ಲಿ ರೈತರಿಗೆ ಲಾಭ. ಜೇನು, ರೇಷ್ಮೆ ಕೃಷಿಯಲ್ಲಿ ನಷ್ಟ. ಅಧ್ಯಾತ್ಮದತ್ತ ಸೆಳೆತ. ಶುಭಸಂಖ್ಯೆ: 2

ಮೀನ:ಮಹಿಳಾ ಉದ್ಯಮಿಗೆ ಶುಭದಿನ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ನವದಂಪತಿಗೆ ಸಂತಸದ ಸಮಾಚಾರ ವಸ್ತು ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net