ನಿತ್ಯ ಭವಿಷ್ಯ : ಈ ರಾಶಿಯವರಿಗಿಂದು ಕೈಹಾಕಿದ ಕೆಲಸಗಳಲ್ಲಿ ಜಯ ಸಿಗಲಿದೆ

Nitya-Bhavisya-FILEminimizer
Published on

ಮೇಷ: ಉನ್ನತ ಸ್ಥಾನಮಾನ ಸಿಗಲಿದೆ. ಹೂ ವ್ಯವಹಾರದಿಂದ ಧನ ಪ್ರಾಪ್ತಿ. ದೈವಿಕ ಚಿಂತನೆ. ಮನಃಶಾಂತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ:4

ವೃಷಭ: ನೌಕರಿಯಲ್ಲಿ ಬಡ್ತಿ ದೊರೆತು ಸಮಾಧಾನ. ಕೈಹಾಕಿದ ಕೆಲಸಗಳಲ್ಲಿ ಜಯ ಸಿಗಲಿದೆ. ಸುಖ ಭೋಜನ. ಬಂಧುಗಳಲ್ಲಿ ಕಲಹ. ಶುಭಸಂಖ್ಯೆ: 2

ಮಿಥುನ: ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಿರಿ. ಷೇರು ವ್ಯವಹಾರಗಳಲ್ಲಿ ಉತ್ತಮ ಆದಾಯ. ಚಂಚಲ ಮನಸ್ಸು. ಶುಭಸಂಖ್ಯೆ: 8

ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಮನಸ್ಸಿಗೆ ಸಂಕಟ. ವಿನಾಕಾರಣ ಸಹೋದರರೊಂದಿಗೆ ನಿಷ್ಠ್ಠುರ. ಶುಭಸಂಖ್ಯೆ:3

ಸಿಂಹ: ಹೊಸ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಹೊಸ ವ್ಯಕ್ತಿಗಳ ಪರಿಚಯ. ಕೋರ್ಟ್ ಕೆಲಸ ಕಾರ್ಯಗಳಲ್ಲಿ ಮಂದಗತಿ. ಶುಭಸಂಖ್ಯೆ:8

ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಬರಲಿದೆ. ತಾಳ್ಮೆ ಅಗತ್ಯ. ಆಕಸ್ಮಿಕ ನಷ್ಟ ಸಂಭವಿಸಲಿದೆ. ಆಸ್ತಿ ವಿಚಾರದಲ್ಲಿ ಕಲಹ. ಶುಭಸಂಖ್ಯೆ:2

ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ. ನಿದ್ರಾಭಂಗವಾದೀತು. ಕಾಲು ನೋವು. ಗೃಹ ನಿರ್ವಣಕ್ಕೆ ಬ್ಯಾಂಕಿನಿಂದ ಸಹಾಯ. ಶುಭಸಂಖ್ಯೆ: 5

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗಲಿದೆ. ಮಿತ್ರರಿಂದ ಸಹಾಯ. ಆಲಸ್ಯ ಮನೋಭಾವ. ವಾಹನ ಅಪಘಾತವಾಗುವ ಸಾಧ್ಯತೆ. ಶುಭಸಂಖ್ಯೆ:2

ಧನುಸ್ಸು: ಮಾತಿನ ಮೇಲೆ ನಿಗಾ ಇರಲಿ. ಅಕಾಲ ಭೋಜನ ಅನಾರೋಗ್ಯಕ್ಕೆ ಕಾರಣ. ಮಗನ ವಿವಾಹಕ್ಕೆ ಅಡ್ಡಿ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 8.

ಮಕರ: ವೇತನ ವಿಳಂಬದಿಂದಾಗಿ ಅಭಿವೃದ್ಧಿ ಕುಂಠಿತ. ಆಪ್ತರಿಂದ ಬಡ್ತಿಗೆ ಸಹಾಯ. ದೂರಪ್ರಯಾಣ. ಉದ್ಯಮಸ್ಥ ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 4

ಕುಂಭ: ಅನವಶ್ಯಕ ಖರೀದಿಗೆ ವೆಚ್ಚ. ವಿರೋಧಿಗಳಿಂದ ಕಿರುಕುಳ. ಶೈಕ್ಷಣಿಕ ಕ್ಷೇತ್ರದವರಿಗೆ ಸಾಧಾರಣ ಫಲ. ಮಾತಿನಿಂದ ತೊಂದರೆ. ಶುಭಸಂಖ್ಯೆ:9

ಮೀನ: ಸತತ ಪ್ರಯತ್ನದಿಂದ ಕಾರ್ಯ ಸಫಲ. ಅನಗತ್ಯ ತಿರುಗಾಟ. ನಂಬಿಕಸ್ಥರಿಂದ ಮೋಸ. ಅನವಶ್ಯಕ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net